ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆದಿದ್ದು ಸರಿಯಲ್ಲ: ಗಾಯಕ ಮುದ್ದುಕೃಷ್ಣ
ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನ ಮಾಡಿರುವುದು ಸರಿಯಲ್ಲ ಹಾಗೂ ಖಂಡನಾರ್ಹ ಎಂದಿರುವ ಸುಗಮ ಸಂಗೀತ ಗಾಯಕ ವೈ.ಕೆ. ಮುದ್ದುಕೃಷ್ಣ ಅವರು, ಇನ್ನು ಮುಂದಾದರು ಈ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು (ನ.02): ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನ ಮಾಡಿರುವುದು ಸರಿಯಲ್ಲ ಹಾಗೂ ಖಂಡನಾರ್ಹ ಎಂದಿರುವ ಸುಗಮ ಸಂಗೀತ ಗಾಯಕ ವೈ.ಕೆ. ಮುದ್ದುಕೃಷ್ಣ ಅವರು, ಇನ್ನು ಮುಂದಾದರು ಈ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಮಿತಿ ರಚನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ತಜ್ಞರನ್ನು ಸಮಿತಿಗೆ ಸೇರಿಸಿರುವುದು ಸರಿ.
ಆದರೆ ಕೆಲವು ಕ್ಷೇತ್ರಗಳಲ್ಲಿ ಪರಿಣತಿ ಇಲ್ಲದೇ ಇರುವವರನ್ನು ಸೇರಿಸಿರುವುದು ಅವರಿಗೂ ಇರಿಸು ಮುರಿಸು ಉಂಟಾಗುವಂತೆ ಮಾಡಿದೆ. ಜೊತೆಗೆ ಈ ಸಾಲಿನ ಪ್ರಶಸ್ತಿಗೆ ಸೇವಾಸಿಂಧು ಮೂಲಕ ಅರ್ಜಿ ಆಹ್ವಾನ ಮಾಡಿರುವುದು ವಿಪರ್ಯಾಸ. ಆಯ್ಕೆ ಸಮಿತಿಯಲ್ಲಿ ಇರುವ ತಜ್ಞರು ಆಯಾ ಕ್ಷೇತ್ರದ ಸಾಧಕರ ಮಾಹಿತಿ ಹೊಂದಿರುತ್ತಾರೆ ಎಂಬುದು ನನ್ನ ಅಭಿಪ್ರಾಯ. ಪ್ರಶಸ್ತಿಗೆ ಅರ್ಹರು ಯಾರು ಎಂಬುದು ಅವರಿಂದಲೇ ಸಲಹೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆ ಟೀಕೆ ಸಲ್ಲ: ಶಕ್ತಿ, ಗೃಹಲಕ್ಷ್ಮೀ ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರುದ್ಯೋಗ ನಿವಾರಣೆಗೆ ದಿಟ್ಟ ಹೆಜ್ಜೆಯಿಟ್ಟು ಸಮಸ್ಯೆ ಪರಿಹರಿಸಿದಲ್ಲಿ ಮುಂದೆ ಯಾವುದೇ ಪಕ್ಷ ರಾಜ್ಯದಲ್ಲಿ ಈ ಸರ್ಕಾರ ಸೋಲಿಸಲು ಸಾಧ್ಯವಾಗಲ್ಲ. ಪ್ರತಿ ಮನೆಯ ಮಹಿಳೆಗೆ 2000 ನೀಡುವ ಹಾಗೂ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಮಾಡಿಕೊಟ್ಟರುವುದು ಈ ಸರ್ಕಾರದ ಸಾಧನೆ. ಇದು ನಿಜವಾದ ಸಾಮಾಜಿಕ ನ್ಯಾಯ. ಈ ಬಗ್ಗೆ ಟೀಕಿಸುವುದು ಸರಿಯಲ್ಲ. ಸರ್ಕಾರ ಮುಂದಿನ ದಿನಗಳಲ್ಲಿ ನಿರುದ್ಯೋಗ ನಿವಾರಣೆಗೆ ಮುಂದಾಗಬೇಕು ಎಂದು ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಸಲಹೆ ನೀಡಿದರು.
ಬರ ಪ್ರವಾಸದ ಬದಲು ಮೋದಿ ಕಾಲಿಗೆ ಬೀಳಿ: ಬಿಜೆಪಿಗರಿಗೆ ಸಿದ್ದು ಟಾಂಗ್
ಇಸ್ರೋ ಉದ್ಯೋಗಿಗಳಿಗೆ ಸಲ್ಲುವ ಪ್ರಶಸ್ತಿ: ಇದು ಇಸ್ರೋದ ಎಲ್ಲಾ ಉದ್ಯೋಗಿಗಳಿಗೆ ಸಲ್ಲುವ ಪ್ರಶಸ್ತಿ. ಚಂದ್ರಯಾನ 3 ಮಹತ್ವದ ಯೋಜನೆ. ಅದನ್ನು ಸಮರ್ಥ ವಾಗಿ ನಿಭಾಯಿಸಿದ ಎಲ್ಲರಿಗೂ ಅದರ ಶ್ರೇಯಸ್ಸು ಸಲ್ಲಬೇಕು. ರಾಜ್ಯ ಸರ್ಕಾರದ ಸಹಕಾರ, ಪ್ರೋತ್ಸಾಹ ಶ್ಲಾಘನೀಯ ಎಂದು ಇಸ್ರೋದ ಮುಖ್ಯಸ್ಥ ಸೋಮನಾಥ್ ಅವರು ಹೇಳಿದರು.