ಏಯ್ ನೀನು ಕೂತಿದಿಯಲ್ಲ ಅಶೋಕಾ, ಆ ಬೆಳಗಾವಿ ವಿಧಾನಸೌಧ ಕಟ್ಟಿಸಿದ್ದು ಕುಮಾರಸ್ವಾಮಿ: ಸಿ.ಎಂ. ಇಬ್ರಾಹಿಂ

ಮೋದಿ ಡೆಲ್ಲಿಗೆ ದೊಡ್ಡವರಿರಬಹುದು. ಶಿವಕುಮಾರಾ ನಿನಗೆ ಸೋನಿಯಾ ದೇವರು ಇರಬಹುದು ಮುಂಡೇವಾ ನಮಗೆ ದೇವೆಗೌಡರು ದೇವರು ತಿಳ್ಕೊಳ್ರಿ‌ ಸಮಾವೇಶದಲ್ಲಿ ಸಿ.ಎಂ ಇಬ್ರಾಹಿಂ ವಾಗ್ದಾಳಿ.

C M ibrahim statement in pacharatna rathayatra convention at ramanagara rav

ರಾಮನಗರ (ಡಿ.20) : ಚನ್ನಪಟ್ಟಣ ಕರ್ನಾಟಕ ರಾಜ್ಯದಲ್ಲಿ ಮತ್ತೆ ಇತಿಹಾಸ ಸೃಷ್ಟಿ ಮಾಡಲು ಹೊರಟಿದೆ‌. ಮತ್ತೊಮ್ಮೆ ಕೆಂಪೆಗೌಡರ ಮಕ್ಕಳು ವಿಧಾನ ಸೌದ ಮೆಟ್ಟಿಲು ಹತ್ತವುದರ ಜೊತೆಗೆ ಕೆಂಪು ಕೋಟೆಯ ಮೆಟ್ಟಿಲ್ಲನ್ನೂ ಹತ್ತುತ್ತಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ಏರ್ ಪೋರ್ಟ್ ಬಳಿ ಈ ಬಡ್ಡಿಐಕ್ಳು ಕೆಂಪೇಗೌಡರ  ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಕುಮಾಸ್ವಾಮಿ ಅವ್ರು ವಿಧಾನಸೌಧದ ಮುಂದೆನೇ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡ್ತಾರೆ. ಈಗಿನ ಸರ್ಕಾರ ಕೂಳಿಗೆ ದಂಡ ಭೂಮಿ ಭಾರ ಎಂದು ಸರ್ಕಾರದ ವಿರುದ್ಧ ಸಿ.ಎಂ.ಇಬ್ರಾಹಿಂ ಕಿಡಿಕಾರಿದರು.

ನಾನು ಸಿಎಂ ಆಗಬೇಕು ಅನ್ನೋದು ದೈವ ಇಚ್ಛೆ; ಪಂಚರತ್ನ ಸಮಾವೇಶದಲ್ಲಿ ಹೆಚ್‌ಡಿಕೆ ಭಾಷಣ

'ಏಯ್ ನೀನು‌ ಕೂತಿದಿಯಲ್ಲಾ ಅಶೋಕಾ, ಬೆಳಗಾವಿ ವಿಧಾನಸೌಧ ಅದನ್ನ ಕಟ್ಟಿಸಿದ್ದು ಈ ಕುಮಾರಸ್ವಾಮಿ. ಬಾಗಲಕೋಟೆಯನ್ನು ಜಿಲ್ಲೆ ಮಾಡಿದ್ದು ಕುಮಾಸ್ವಾಮಿ,
ರೈತರ ಮನೆಗಳಲ್ಲಿ ಮಲಗಿ ಜನರ ಕಷ್ಟ ಅರಿತಿದ್ದು ಕುಮಾರಸ್ವಾಮಿ. ನಿಮ್ ಮೋದಿ ಯಾವುದಾದರು ಒಂದು ಊರಲ್ಲಿ ಮಲಗವ್ನಾ.? ಅದಕ್ಕೆ ಹೇಳೋದು ಹೆಂಡ್ರು ಮಕ್ಕಳು ಇಲ್ದೆ ಇರೋರನ್ನ ಅಧಿಕಾರಕ್ಕೆ ತರಬಾರದು ಅಂತ. ಅವನಿಗೆ ಸಂಸಾರದ ಕಷ್ಟ ಏನ್ ಗೊತ್ತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಎಂ.ಇಬ್ರಾಹಿಂ.

ಮೋದಿ ಡೆಲ್ಲಿಗೆ ದೊಡ್ಡವರಿರಬಹುದು. ಶಿವಕುಮಾರಾ ನಿನಗೆ ಸೋನಿಯಾ ದೇವರು ಇರಬಹುದು ಮುಂಡೇವಾ ನಮಗೆ ದೇವೆಗೌಡರು ದೇವರು ತಿಳ್ಕೊಳ್ರಿ‌ ಸಮಾವೇಶದಲ್ಲಿ ಸಿ.ಎಂ ಇಬ್ರಾಹಿಂ ವಾಗ್ದಾಳಿ.

ದೇವೇಗೌಡರ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಪುಣ್ಯ: ನಿಖಿಲ್ ಕುಮಾರಸ್ವಾಮಿ

ಇಂದು ಚನ್ನಪಟ್ಟಣದಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಪಂಚರತ್ನ ರಥಯಾತ್ರೆ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ಕುಮಾರಪರ್ವವನ್ನ ಮೀರಿಸಿ ಈ ಕಾರ್ಯಕ್ರಮ ಯಶಸ್ಸು ಮಾಡಿದ್ದೀರಿ
ಯುವಸಮೂಹ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ಜನ ಭಾಗಿಯಾಗಿ ಪಂಚರತ್ನ ಯಾತ್ರೆಗೆ ಬೆಂಬಲ ನೀಡಿದ್ದೀರಿ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾವೆಂದು ಚಿರಋಣಿ. ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

Assembly election: 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚನ್ನಪಟ್ಟಣದಲ್ಲಿ 20 ವರ್ಷ ಆಡಳಿತ ನಡೆಸಿದವರು ಏನು‌ ಮಾಡಲಿಲ್ಲ. ಭಗೀರಥ ಅಂತೇಳಿ ಓಡಾಡ್ತಾರೆ ಅಷ್ಟೇ. ನಿಜವಾದ ಭಗೀರಥ ನಮ್ಮ ನಿಮ್ಮಲ್ಲರ ಪ್ರೀತಿಯ ಕುಮಾರಣ್ಣ. ಚನ್ನಪಟ್ಟಣಕ್ಕೆ ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದಾರೆ. ಹೀಗಾಗಿ ನನಗೆ ವಿಶ್ವಾಸವಿದೆ ಚನ್ನಪಟ್ಟಣದಲ್ಲಿ ಮತ್ತೆ ಗೆಲ್ತಾರೆ ಕುಮಾರಣ್ಣ. 50ಸಾವಿರಕ್ಕೂ ಹೆಚ್ಚು ಬಹುಮತದಿಂದ ಗೆಲುವು ಸಾಧಿಸುತ್ತಾರೆ. ನಮ್ಮ ಕ್ಷೇತ್ರದ ಜನ ಕುಮಾರಣ್ಣರನ್ನು ಎಂದೂ ಬಿಟ್ಟುಕೊಡುವುದಿಲ್ಲ. ಇಂಥ ಕ್ಷೇತ್ರದ ಜನತೆ ಸಿಕ್ಕಿದ್ದು.  ದೇವೇಗೌಡರ ಕುಟುಂಬದಲ್ಲಿ ಜನಿಸಿದ್ದು, ಕುಮಾರಸ್ವಾಮಿ ಪುತ್ರನಾಗಿ ಹುಟ್ಡಿದ್ದು ನನ್ನ ಪೂರ್ವ ಜನ್ಮದ ಪುಣ್ಯ, ನಾನು ಪಡೆದಿರುವ ಭಾಗ್ಯ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದರು.

Latest Videos
Follow Us:
Download App:
  • android
  • ios