Asianet Suvarna News Asianet Suvarna News

ರಾಕೇಶ್ ಸಿದ್ದರಾಮಯ್ಯ ಸಾವಿಗೆ ಬೈರತಿ ಸುರೇಶ್ ಕಾರಣ: ಸಚಿವೆ ಶೋಭಾ ಕರಂದ್ಲಾಜೆ ಆರೋಪ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಸಚಿವ ಬೈರತಿ ಸುರೇಶ್ ಕಾರಣ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯನವರ ಆಸ್ತಿಗಾಗಿ ರಾಕೇಶ್‌ರನ್ನು ಸಾಯಿಸಿದ್ದಾರೆ ಎಂಬ ಮಾತುಗಳಿವೆ ಎಂದು ಅವರು ಹೇಳಿದ್ದಾರೆ.

Byrathi Suresh responsible for Rakesh Siddaramaiah death alleges Shobha Karandlaje sat
Author
First Published Oct 21, 2024, 12:09 PM IST | Last Updated Oct 21, 2024, 12:33 PM IST

ನವದೆಹಲಿ (ಅ.21): ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸುರೇಶ್ ಕಾರಣವೆಂದು ಜನ ಮಾತನಾಡುತ್ತಿದ್ದಾರೆ. ಇದನ್ನು ನೀವು ಒಪ್ಪಿಕೊಳ್ತಿರಾ.? ಸಿದ್ದರಾಮಯ್ಯನವರ ಆಸ್ತಿ ಹೊಡೆಯೋಕೆ ರಾಕೇಶ್‌ನನ್ನು ಸಾಯಿಸಿದ್ದಾರೆ ಎಂದು ಜನ ಮಾತಾಡ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಬೈರತಿ ಸುರೇಶ್ ಆರೋಪ ಇದಕ್ಕೆ ಒಂದೆ ಉದಾಹರಣೆ ಆಗಿದ್ದಾರೆ. ದರೋಡೆಕೋರರನ್ನು ಪೊಲೀಸರು ಹಿಡಿತಾರೆ. ದರೋಡೆಕೋರರು ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಗುಂಡು ಹಾರಸಿಸ್ತಾರೆ. ಬೈರತಿ ಸುರೇಶ್ ಕೂಡ ಅದೇ ಕೆಲಸ ಮಾಡುತ್ತಾರೆ. ದರೋಡೆಕೋರ, ಭಯೋತ್ಪಾಕರ ಕೆಲಸವನ್ನು ಸುರೇಶ್ ಮಾಡಿದ್ದಾರೆ. ಸಿದ್ದರಾಮಯ್ಯ ಇಂತಹವರನ್ನು ಯಾಕೆ ಇಟ್ಟುಕೊಂಡಿದ್ದಾರೆ. ಕೌರವರ ಜೊತೆ ಶಕುನಿ ಯಾಕೆ ಇದ್ದ? ಅದೇ ರೀತಿ ಸಿದ್ದರಾಮಯ್ಯ ಅವರನ್ನು ಮುಗಿಸಲೇಂದೆ ಸುರೇಶ್ ಇದ್ದಾರೆ. ಸುರೇಶ್ ಭಯದಿಂದ ಇಂತಹ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಯಡಿಯೂರಪ್ಪ ಹೆಂಡ್ತಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ: ಸಚಿವ ಬೈರತಿ ಸುರೇಶ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸಚಿವ ಬೈರತಿ ಸುರೇಶ್ ಕಾರಣ ಅಂತಾ ಜನ ಮಾತನಾಡುತ್ತಿದ್ದಾರೆ. ಇದನ್ನು ನೀವು ಒಪ್ಪಿಕೊಳ್ತಿರಾ..? ಸಿದ್ದರಾಮಯ್ಯ ಆಸ್ತಿ ಹೊಡೆಯೋಕೆ ಸಾಯಿಸಿದ್ದಾರೆ ಎಂದು ಜನ ಮಾತಾಡ್ತಾರೆ. ನಿಮ್ಮನ್ನು ಹೆಬ್ಬಾಳದಿಂದ ಓಡಿಸುವ ಕೆಲಸ ಮಾಡುತ್ತೇನೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಡತಗಳನ್ನು ಸುಟ್ಟಾಕಿದ್ದನ್ನು ಹೇಳೊಕೆ ಬಂದರೆ ನೀವು ನನ್ನ ಮೇಲೆ ಹೀಗೆ ಆರೋಪ ಮಾಡ್ತಿರಾ? ಶೋಭಾ ಕರಂದ್ಲಾಜೆ ಎಂದಿಗೂ ಆರೋಪಕ್ಕೆ ಹೆದರಿ ಓಡಿ ಹೋಗುವವಳಲ್ಲ. ನಾಲಿಗೆ ಬಿಗಿ‌ ಹಿಡಿದು ಮಾತನಾಡಿ. ಸಿದ್ದರಾಮಯ್ಯ ಕುಟುಂಬಕ್ಕೆ ಕಳಂಕ ತಂದವರು ಇವರೇ. ಚೀಪ್ ರಾಜಕಾರಣ ಮಾಡುವುದನ್ನು ಬಿಡಿ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಮಹಾನ್ ಶಿವಭಕ್ತ ಲಾಯರ್ ಜಗದೀಶ್‌ಗೆ ಭರತ್ ಬೊಮ್ಮಾಯಿ ವಿರುದ್ಧ ಟಿಕೆಟ್ ಸಿಗುತ್ತಾ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಕಡತಗಳನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೊತ್ತೊಯ್ದಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಈ ಮಾತಿಗೆ ಕೋಪಗೊಂಡಿದ್ದ ಬೈರತಿ ಸುರೇಶ್ ಅವರು, ಶೋಭಾ ಕರಂದ್ಲಾಜೆ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಂಡತಿ ಮೈತ್ರಾ ದೇವಿ ಅವರ ಸಾವಿಗೆ ಕಾರಣ ಎಂದು ಆರೋಪ ಮಾಡಿದ್ದರು. ಮುಂದುವರೆದು ಮೈತ್ರಾ ದೇವಿ ಅವರ ಸಾವಿನ ಕುರಿತಂತೆ ತನಿಖೆ ನಡೆಸಬೇಕು, ಈ ಕೇಸಿನಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಇಂದು ಸುದ್ದಿಗೋಷ್ಠಿ ಕರೆದ ಶೋಭಾ ಕರಂದದ್ಲಾಜೆ ದೊಡ್ಡ ಆರೋಪವನ್ನು ಮಾಡಿದ್ದಾರೆ.

Latest Videos
Follow Us:
Download App:
  • android
  • ios