Asianet Suvarna News Asianet Suvarna News

ಬೈಪಾಸ್‌ ಸರ್ಜರಿ ಮಾಡಿಸಿಕೊಂಡ ಮಾಜಿ ಸಿಎಂ ಬೊಮ್ಮಾಯಿ: ಆರೋಗ್ಯ ವಿಚಾರಿಸಿದ ಸಿಎಂ, ಡಿಸಿಎಂ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪರಿಧಮನಿಯ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

Bypass surgery for former CM Bommai was successful CM siddaramaiah and DCM inquired about health sat
Author
First Published Oct 21, 2023, 6:56 PM IST

ಬೆಂಗಳೂರು (ಅ.21): ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪರಿಧಮನಿಯ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಕೆಲ ಪ್ರಾಥಮಿಕ ಪರೀಕ್ಷೆ ನಡೆಸಲಾಯಿತು, ಈ ವೇಳೆ ಅವರಿಗೆ ಹೃದಯ ಸಂಬಂಧಿ ಕೆಲ ಸಮಸ್ಯೆ ಇರುವ ಅನುಮಾನ ಮೂಡಿತು. ಹೀಗಾಗಿ, ಅವರ ಸಮಗ್ರ ಮತ್ತು ಪರಿಣಿತ ವೈದ್ಯಕೀಯ ಆರೈಕೆಗಾಗಿ, ಫೋರ್ಟಿಸ್‌ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕಲರ್‌ ಸೈನ್ಸ್‌ ಅಧ್ಯಕ್ಷರಾದ ಡಾ. ವಿವೇಕ್‌ ಜವಳಿ ಅವರ ಮೇಲ್ವಿಚಾರಣೆಯಲ್ಲಿ ಅಕ್ಟೋಬರ್‌ 15 ರಂದು ಅವರನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. 

ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಶೇ. 4 ತುಟ್ಟಿಭತ್ಯೆ ಹೆಚ್ಚಳ

ಆಂಜಿಯೋಗ್ರಾಮ್ ನಂತರ, ಎಲ್ಲಾ ಮೂರು ಪರಿಧಮನಿಯ ಅಪಧಮನಿಗಳಲ್ಲಿ ತೀವ್ರ ಮತ್ತು ಪ್ರಸರಣ ತಡೆ ಇರುವುದು ಕಂಡು ಬಂತು. ಈ ಲಕ್ಷಣಗಳು ಇದ್ದರೆ ಭವಿಷ್ಯದಲ್ಲಿ ಹೃದಯಾಘಾತ ಸಂಭವನೀಯ ಅಪಾಯವನ್ನು ಉಂಟುಮಾಡುತ್ತವೆ, ಹೀಗಾಗಿ ಅವರಿಗೆ ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಕ್ರಿಯೆಯನ್ನು ನಡೆಸಿ, ಫೈವ್‌ ಗ್ರಾಫ್ಸ್‌ನನ್ನು ಸಮಸ್ಯೆ ಉಂಟಾಗಿದ್ದ ಪರಿಧಮನಿಯ ಅಪಧಮನಿ ಹೃದಯದ ಬಡಿತದ ಮೇಲೆ ಇರಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಬೊಮ್ಮಾಯಿ ಅವರು ವೇಗವಾಗಿ ಚೇತರಿಕೆ ಕಾಣುತ್ತಿದ್ದು, ಒಂದೆರಡು ವಾರದಲ್ಲಿ ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿಕೊಳ್ಳಬಹುದು.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ ಅವರು, ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ಅದರಲ್ಲೂ ಡಾ. ವಿವೇಕ್‌ ಜವಳಿ ಅವರ ತಂಡ ನನ್ನನ್ನು ಉತ್ತಮವಾಗಿ ಆರೈಕೆ ಮಾಡಿದ್ದಾರೆ, ಅವರ ಪರಿಣತಿಯಿಂದ ಭವಿಷ್ಯದಲ್ಲಿ ಸಂಭವಿಸಬೇಕಾದ ಅಪಾಯವನ್ನು ತಡೆದಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು. ನನ್ನ ಯೋಗಕ್ಷೇಮಕ್ಕೆ ಇಡೀ ತಂಡದ ಬದ್ಧತೆಯನ್ನು ಪ್ರಶಂಸಿಸುವೆ, ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಆರೋಗ್ಯದ ಬಗ್ಗೆ ತಿಳಿಸಿದರು.

ಬೆಂಗಳೂರು ಬಿಎಂಡಬ್ಲ್ಯೂ ಕಾರಿನ ಗಾಜು ಒಡೆದು 13 ಲಕ್ಷ ರೂ. ದೋಚಿದ ಕಳ್ಳರು

ಫೋರ್ಟಿಸ್‌ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕಲರ್‌ ಸೈನ್ಸ್‌ ಅಧ್ಯಕ್ಷರಾದ ಡಾ. ವಿವೇಕ್‌ ಜವಳಿ ,  5-ಗ್ರಾಫ್ಟ್ಸ್‌ ಹೃದಯ ಬೈಪಾಸ್ ಅನ್ನು ನಿರ್ವಹಿಸುವುದು ನಮಗೆ ವಾಡಿಕೆಯಾಗಿದೆ, ಆದರೆ ಶ್ರೀ ಬೊಮ್ಮಾಯಿ ಅವರ ಅಚಲವಾದ ನಂಬಿಕೆ, ಅವರ ಧೈರ್ಯದ ಮನೋಭಾವಕ್ಕೆ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಅವರ ಬೆಂಬಲಕ್ಕೆ ಅವರ ಕುಟುಂಬ ವರ್ಗ ಅಚಲವಾಗಿ ನಿಂತಿತ್ತು ಎಂದು ವಿವರಿಸಿದರು.‌

Bypass surgery for former CM Bommai was successful CM siddaramaiah and DCM inquired about health sat

Follow Us:
Download App:
  • android
  • ios