ಇನ್ಮುಂದೆ ಕಾಂಗ್ರೆಸ್‌ಗೆ ಎದುರಾಗಲಿದೆ ನೇರಾನೇರ ಪೈಪೋಟಿ! ವಿಜಯೇಂದ್ರರ ಬಗ್ಗೆ ಎಂಪಿ ರೇಣುಕಾಚಾರ್ಯ ಹೇಳಿದ್ದೇನು?

ವಿಜಯೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದಕ್ಕೆ ರೇಣುಕಾಚಾರ್ಯರ ಕೂಗಲ್ಲ. ಈ ನಾಡಿನ ಪ್ರಜ್ಞಾವಂತರ ಅಪೇಕ್ಷೆಯಾಗಿತ್ತು. ಜನರ ಅಪೇಕ್ಷೆ ಈಡೇರಿಸಿದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನಿ ಮೋದಿ, ‌ಅಮಿತ್ ಶಾ ಅವರಿಗೆ ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾರ್ಯ ಅಭಿವಂದನೆಗಳು ತಿಳಿಸಿದರು.

BY Vijayendra BJP state president issue MP Renukacharya statement at davanagere rav

ಬೆಂಗಳೂರು (ನ.10): ವಿಜಯೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದಕ್ಕೆ ರೇಣುಕಾಚಾರ್ಯರ ಕೂಗಲ್ಲ. ಈ ನಾಡಿನ ಪ್ರಜ್ಞಾವಂತರ ಅಪೇಕ್ಷೆಯಾಗಿತ್ತು. ಜನರ ಅಪೇಕ್ಷೆ ಈಡೇರಿಸಿದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನಿ ಮೋದಿ, ‌ಅಮಿತ್ ಶಾ ಅವರಿಗೆ ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾರ್ಯ ಅಭಿವಂದನೆಗಳು ತಿಳಿಸಿದರು.

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕವಾದ ವಿಚಾರ ಸಂಬಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ವಿಜಯೇಂದ್ರರ ಪಕ್ಷ ಸಂಘಟನೆ ಸಾಮರ್ಥ್ಯ ನೋಡಿ ಈ ಹುದ್ದೆ ಸಿಕ್ಕಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಜಯೇಂದ್ರರ ಆಯ್ಕೆ ಪಕ್ಷಕ್ಕೆ ಶಕ್ತಿ ತುಂಬಿದೆ. ಇದು ಮಾಸ್ಟರ್‌ ಸ್ಟ್ರೋಕ್ ಎಂದರು.

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ: ನಳೀನ್

ಯಡಿಯುರಪ್ಪ ಅವರನ್ನ ಬೆಳಗ್ಗೆ ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ ಹೊರಟಿದ್ದೆ. ಇಂದು ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗ್ತಿದ್ದಂತೆ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವ ಮೂಲಕ ಸಂಭ್ರಮಾಚರಣೆ ಮಾಡ್ತಿದ್ದಾರೆ ಎಂದರು.

ಮುಂದೆ ಲೋಕಸಭಾ ಚುನಾವಣೆ ಬರ್ತಿದೆ. ಸಂಘಟನೆ ಚತುರ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರರ ಸಂಘಟನೆ ನೋಡಿ ಅವರಿ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ. ನಾಳೆ ವಿಜಯೋತ್ಸವ ಆಚರಣೆ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.

ಇನ್ನು ಕಾಣದ ಕೈಯಿಂದ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಕೆಲಸ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಸಂಘರ್ಷದ ಮಾತಿಲ್ಲಾ, ಏನಿದ್ರು ಸಾಮರಸ್ಯ ಎಂದರು ಮುಂದುವರಿದು, ಯಡಿಯೂರಪ್ಪ ಒಂದು ಗುಂಪಿನ ನಾಯಕರಲ್ಲ. ಸಂಘ ಪರಿವಾರ ಅವರ ಹಿಂದಿದೆ. ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಬಿಜೆಪಿಯನ್ನು ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ. ಇನ್ನಾವ ಸಂಘರ್ಷ ಇಲ್ಲ ಸಾಮರಸ್ಯದಿಂದ ಎಲ್ಲರೂ ಒಂದಾಗಿ ಪಕ್ಷ ಸಂಘಟನೆ ಮಾಡಬೇಕು. ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ನಾನು ವಯಸ್ಸಿನಲ್ಲಿ ಹಿರಿಯ ಆಗಿರಬಹುದು ಆದ್ರೆ ವಿಜಯೇಂದ್ರ ಅವರಿಗೆ ನಾಯಕತ್ವದ ಅನುಭವವಿದೆ ಎಂದರು.

Latest Videos
Follow Us:
Download App:
  • android
  • ios