ರಾಮಮಂದಿರಕ್ಕೆ ನಿಧಿ ಸಂಗ್ರಹಕ್ಕಾಗಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ಸಮಾಲೋಚನೆ ನಡೆಯಿತು.
ಉಡುಪಿ/ಚೆನ್ನೈ, (ಡಿ.11): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ರಾಮಮಂದಿರಕ್ಕೆ ನಿಧಿ ಸಂಗ್ರಹಕ್ಕಾಗಿ ತಮಿಳುನಾಡಿನ ಉದ್ಯಮಿಗಳ ಸಮಾವೇಶವನ್ನು ಚೆನ್ನೈನಲ್ಲಿ ನಡೆಸಲಾಗುವುದು ಎಂದು ವುಡ್ ಲ್ಯಾಂಡ್ಸ್ ಹೋಟೆಲ್ಸ್ ನ ಪಾಲುದಾರ, ಮೂಲತಃ ಮಂಗಳೂರಿನ ತರುಣ ಉದ್ಯಮಿ ಕೆ ರಾಜೇಶ್ ರಾವ್ ತಿಳಿಸಿದ್ದಾರೆ .
ಅವರು ಚೆನ್ನೈಯ ತಮ್ಮ ಅತಿಥಿಗೃಹದಲ್ಲಿ ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ಸಮಾಲೋಚನೆ ನಡೆಸಿದರು.
ಉಡುಪಿ: ರಾಮಮಂದಿರಕ್ಕೆ ಮೊದಲ ದಿನ 4 ಲಕ್ಷ ದೇಣಿಗೆ
ತಮಿಳುನಾಡಿನ ಸ್ವರ್ಣ, ವಸ್ತ್ರ, ಹೋಟೆಲ್, ರಿಯಲ್ ಎಸ್ಟೇಟ್, ಸಾಫ್ಟ್ ವೇರ್ ಹೀಗೆ ವಿವಿಧ ಉದ್ಯಮಿಗಳ ದೊಡ್ಡ ಸಮೂಹವಿದ್ದು, ಅವರೆಲ್ಲರನ್ನು ಸೇರಿಸಿಕೊಂಡು ಒಂದು ದೊಡ್ಡ ಸಮಾವೇಶ ನಡೆಸಿ, ಪ್ರತೀಯೊಬ್ಬರೂ ತಮ್ಮ ದೇಣಿಗೆಯನ್ನು ಶ್ರೀಗಳ ಮೂಲಕ ಅಯೋಧ್ಯೆ ಮಂದಿರ ಟ್ರಸ್ಟ್ ಗೆ ಹಸ್ತಾಂತರಿಸುವರು, ಇದರಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ ನೀಡುವಂತೆ ಅವರು ವಿನಂತಿಸಿದರು. ಶ್ರೀಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು.
ವುಡ್ ಲ್ಯಾಂಡ್ಸ್ ಸಮೂಹದ ಮತ್ತೋರ್ವ ಹಿರಿಯರಾದ ಕೆ.ಮುರಳಿ ರಾವ್ ತಮಿಳುನಾಡಿನ ಸಂಘ ಪರಿವಾರದ ಪ್ರಮುಖರೂ ಉಪಸ್ಥಿತರಿದ್ದರು .
ಸಾಧುಸಂತರ ಸಮಾವೇಶ
ರಾಮಮಂದಿರಕ್ಕೆ ನಿಧಿ ಸಂಗ್ರಹಕ್ಕೆ ತಮಿಳುನಾಡಿನ ನೂರಾರು ಸಾಧು ಸಂತರು, ಮಠಾಧೀಶರು, ಧಾರ್ಮಿಕ ಮುಖಂಡರ ಸಮಾವೇಶವನ್ನೂ ಜನವರಿ ತಿಂಗಳಲ್ಲಿ ಚೆನೈಯಲ್ಲಿ ಆಯೋಜಿಸಲಾಗುವುದು ಎಂದು ತಮಿಳುನಾಡಿನ ಉತ್ತರ ಪ್ರಾಂತ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶ್ರೀನಿವಾಸನ್ ತಿಳಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 11, 2020, 5:04 PM IST