ಉಡುಪಿ: ರಾಮಮಂದಿರಕ್ಕೆ ಮೊದಲ ದಿನ 4 ಲಕ್ಷ ದೇಣಿಗೆ
ಉಡುಪಿಯಲ್ಲಿ ಒಂದೇ ದಿನ ರಾಮ ಮಂದಿರ ನಿರ್ಮಾಣಕ್ಕಾಗಿ ಬರೋಬ್ಬರು 4 ಲಕ್ಷ ರು. ದೇಣಿಗೆ ಸಂಗ್ರಹವಾಗಿದೆ.
ಉಡುಪಿ (ಡಿ.06): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮಮಂದಿರಕ್ಕಾಗಿ ಉಡುಪಿಯ ನಾಲ್ವರು ಮಠಾಧೀಶರು ತಲಾ 1 ಲಕ್ಷ ರು. ನಂತೆ 4 ಲಕ್ಷ ರು. ದೇಣಿಗೆ ನೀಡಿ ಶುಭ ಹಾರೈಸಿದ್ದಾರೆ. ತನ್ಮೂಲಕ ಉಡುಪಿಯಲ್ಲಿ ಆರಂಭವಾದ ನಿಧಿ ಸಂಗ್ರಹ ಆರಂಭದ ಮೊದಲ ದಿನವೇ ಆಂದೋಲನಕ್ಕೆ ಮೊದಲ ದಿನವೇ 4 ಲಕ್ಷ ರು. ಹರಿದುಬಂದಂತಾಗಿದೆ.
ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ವ್ ವಿಶ್ವಸ್ಥರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಂತರ ಸಭೆ ನಡೆಯಿತು.
ರಾಮಮಂದಿರಕ್ಕೆ ಬೇಕಾದ ಗುಲಾಬಿ ಕಲ್ಲಿನ ಗಣಿಗಾರಿಕೆಗೆ ರಾಜಸ್ಥಾನ ಸರ್ಕಾರ ಅಸ್ತು? ..
ಸಭೆಯಲ್ಲಿ ಕೃಷ್ಣಮಠದ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಮತ್ತು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ತಲಾ 1ಲಕ್ಷ ರು. ದೇಣಿಗೆ ಘೋಷಿಸಿದರು.