ವಿಜಯಪುರ(ಜ.27): ಹೆದ್ದಾರಿ ಮೇಲೆ ಅಡ್ಡ ಬಂದ ವೃದ್ದನನ್ನು ಕಾಪಾಡಲು ಹೋಗಿ ಬಸ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿನಡೆದಿದೆ.

ಇಲ್ಲಿನ ಕಪನಿಂಬರಗಿ ಕ್ರಾಸ್ ಬಳಿ ವೇಗವಾಗಿ ಬರುತ್ತಿದ್ದ ಸರ್ಕಾರಿ ಬಸ್ ಗೆ ವೃದ್ಧನೋರ್ವ ಅಡ್ಡ ಬಂದಿದ್ದಾನೆ. ಗಲಿಬಿಲಿಗೊಂಡ ಚಾಲಕ ಜೋರಾಗಿ ಬ್ರೇಕ್ ಹಾಕಿದ ಪರಿಣಾಮ ಬಸ್ ಪಲ್ಟಿಯಾಗಿದೆ. 


ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಬಲಾದಿ ಗ್ರಾಮದ ಮಹಿಳೆ ಸಾವನ್ನಪ್ಪಿದ್ದು, ಇತರ 42 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಲ್ಲದೇ ಬಸ್ ಗೆ ಅಡ್ಡ ಬಂದಿದ್ದ ವೃದ್ಧನ ಕಾಲು ಕೂಡ ಕಟ್ ಆಗಿದ್ದು, ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.