ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬಸ್ ಅಪಘಾತಕ್ಕೀಡಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ

ಬೆಂಗಳೂರು (ಜೂ.18) : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬಸ್ ಅಪಘಾತಕ್ಕೀಡಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport). T1 T2 ನಡುವೆ ಸಂಚಾರ ಮಾಡುತ್ತಿದ್ದ ಶಟಲ್ ಸರ್ವಿಸ್ ಬಸ್. ಟರ್ಮಿನಲ್- 2ರಲ್ಲಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ನಡೆದಿರುವ ದುರ್ಘಟನೆ.

ಬಸ್‌ ಚಾಲಕನ ನಿರ್ಲಕ್ಷ್ಯತನದಿಂದ ಸಂಭವಿಸಿರುವ ಅಪಘಾತ. ಅಪಘಾತಕ್ಕೆ ಬಸ್ಸಿನ ಮುಂಭಾಗ ಪೂರ್ಣ ಜಖಂ ಗೊಂಡಿದೆ. ಅದೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಏರ್‌ಪೋರ್ಟ್ ಬಳಿಯಿರುವ ಆಸ್ಪತ್ರೆಗೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಕೆಐಎಬಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣ

ಭೀಕರ ರಸ್ತೆ ದುರಂತ: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಸ್ಥಳದಲ್ಲೇ ಸಾವು!

ಕೊಲ್ನಾಡು ಸ್ಕೂಟರ್‌ ಡಿಕ್ಕಿ ಪಾದಾಚಾರಿ ಮಹಿಳೆ ಗಂಭೀರ

ಮೂಲ್ಕಿ ಮೂಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದ ಒಳ ರಸ್ತೆಯಲ್ಲಿ ಸ್ಕೂಟರ್‌ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಗೀತಾ ಶೆಟ್ಟಿಗಾರ್‌ (61) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಗೀತಾ ಶೆಟ್ಟಿಗಾರ್‌ ಅವರು ತಮ್ಮ ತಾಯಿ ಮನೆಗೆ ಹೋಗಿದ್ದವರು ವಾಪಸ್ಸು ಮನೆ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ ದುರ್ಗಾ ಫ್ಯಾಬ್ರಿಕೇಷನ್ಸ್‌ ಕಟ್ಟಡದ ಎದುರು ಭಾಗದಲ್ಲಿ ಲಿಂಗಪ್ಪಯ್ಯ ಕಾಡು ಕಡೆಯಿಂದ ವೇಗವಾಗಿ ಬಂದ ಸ್ಕೂಟರ್‌ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡ ಗೀತಾ ಶೆಟ್ಟಿಗಾರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಕೂಟರ್‌ ಸವಾರ ಆಶ್ರಫ್‌ ವಿರುದ್ಧ ಮಂಗಳೂರು ಉತ್ತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.