ಅಡಕೆ ಬೆಳೆಗಾರರ ರಕ್ಷಣೆಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಘೋಷಿಸಲಾಗುವುದು. ಅಡಕೆ ಸಂಶೋಧನಾ ಕೇಂದ್ರಕ್ಕೆ ಸರ್ಕಾರ 10 ಕೋಟಿ ರು. ನೀಡಿದ್ದು, ಎಲೆ ಚುಕ್ಕಿ ರೋಗ ಸೇರಿ ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕುವಂತಾಗಬೇಕು.

ಪುತ್ತೂ​ರು (ಫೆ.12): ಅಡಕೆ ಬೆಳೆಗಾರರ ರಕ್ಷಣೆಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಘೋಷಿಸಲಾಗುವುದು. ಅಡಕೆ ಸಂಶೋಧನಾ ಕೇಂದ್ರಕ್ಕೆ ಸರ್ಕಾರ 10 ಕೋಟಿ ರು. ನೀಡಿದ್ದು, ಎಲೆ ಚುಕ್ಕಿ ರೋಗ ಸೇರಿ ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕುವಂತಾಗಬೇಕು. ಈ ಭಾಗದ ಕೃಷಿಕರ ಬಹುಕಾಲದ ಬೇಡಿಕೆಯಾದ ಕಾನ, ಬಾಣೆ, ಸೊಪ್ಪಿನ ಬೆಟ್ಟ ಜಮೀನಿನ ಸಮಸ್ಯೆ ಹೋಗಲಾಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯ​ಮಂತ್ರಿ ಬಸ​ವರಾಜ ಬೊಮ್ಮಾಯಿ ಹೇಳಿ​ದ​ರು. ಪುತ್ತೂ​ರಿ​ನಲ್ಲಿ ಶನಿ​ವಾರ ನಡೆದ ಕ್ಯಾಂಪ್ಕೋ ಸುವರ್ಣ ಮಹೋ​ತ್ಸವ ಸಂಭ್ರಮ ಕಾರ್ಯ​ಕ್ರ​ಮದಲ್ಲಿ ಮಾತ​ನಾಡಿ, ಬಂಡವಾಳಶಾಹಿ, ಕಮ್ಯುನಿಸ್ಟ್‌ಶಾಹಿಗಳಿಗೆ ಉತ್ತರಿಸಲು ಸಹಕಾರಿಶಾಹಿ ಬರಬೇಕು ಎಂದ​ರು.

50 ವರ್ಷಗಳಲ್ಲಿ ಕ್ಯಾಂಪ್ಕೋ ಸಾಧನೆಯನ್ನು ಕೊಂಡಾಡಿದ ಮುಖ್ಯ​ಮಂತ್ರಿ, ವಾಣಿಜ್ಯ ಬೆಳೆಗಳ ಮೌಲ್ಯವರ್ಧನೆಯನ್ನು ಕ್ಯಾಂಪ್ಕೋ ಮಾಡಿದೆ. 3 ಸಾವಿರ ಕೋಟಿ ರು. ವಹಿವಾಟು ನಡೆಸುವ ಮೂಲಕ ಬೆಳೆಗಾರರ ಸಂಕಷ್ಟಗಳಿಗೆ ಕ್ಯಾಂಪ್ಕೋ ಸ್ಪಂದಿಸುತ್ತಿದೆ. ಪ್ರಸ್ತುತ 6.11 ಲಕ್ಷ ಹೆಕ್ಟೇರ್‌ಗೆ ಅಡಕೆ ಬೆಳೆ ವ್ಯಾಪಿಸಿದ್ದು, ಇದು ಕೂಡ ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ. ಈ ಭಾಗದ ಕೃಷಿಕರ ರಕ್ಷಣೆಗೆ ಸರ್ಕಾರ ಸದಾ ಸಿದ್ಧವಾಗಿದೆ ಎಂದರು.

ಜನಾದೇಶದಿಂದ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ: ವಿ.ಎಸ್‌.ಉಗ್ರಪ್ಪ

ದೇಶಕ್ಕೆ ಮೋದಿ-ಶಾ ಪರಿಹಾರ: ದೇಶದ ಜ್ವಲಂತ ಸಮಸ್ಯೆಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಪರಿಹಾರ ಎಂದು ಮಾಜಿ ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಹೇಳಿ​ದ​ರು. ಪುತ್ತೂ​ರಿ​ನಲ್ಲಿ ಶನಿ​ವಾರ ನಡೆದ ಕ್ಯಾಂಪ್ಕೋ ಸುವರ್ಣ ಮಹೋ​ತ್ಸವ ಸಂಭ್ರಮ ಕಾರ್ಯ​ಕ್ರ​ಮದಲ್ಲಿ ಮಾತ​ನಾಡಿ, ಮೋದಿ ಹಾಗೂ ಶಾ ಅವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಜಗತ್ತಿನ ಯಾವುದೇ ಶಕ್ತಿಗೆ ಇವರಿಬ್ಬರ ನಡುವೆ ನಿಲ್ಲಲು ಸಾಧ್ಯವಿಲ್ಲ. ಇವರಿಬ್ಬರು ನಾಯಕರ ನೇತೃತ್ವದಲ್ಲಿ ಭಾರತ ಜಾಗತಿಕವಾಗಿ ಇನ್ನಷ್ಟುಮನ್ನಣೆ ಪಡೆಯಲಿ ಎಂದು ಹಾರೈಸಿದರು. ಕ್ಯಾಂಪ್ಕೋ ಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗಿಂತ ಕಡಿಮೆ ಇಲ್ಲ. ಲಕ್ಷಾಂತರ ರೈತರ ಬದುಕನ್ನು ಹಸನಾಗಿಸಿದೆ ಎಂದರು.

ಅಮಿತ್‌ ಶಾಗೆ ಕರಾವಳಿ ಸ್ಮರಣಿಕೆ: ಕೇಂದ್ರ ಸಚಿವ ಅಮಿತ್‌ ಶಾಗೆ ಅಮರಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನದಿಂದ ಕೋದಂಡರಾಮನ ಮರದ ವಿಗ್ರಹವನ್ನು ನೀಡಲಾಯಿತು. ಇದೇ ವೇಳೆ ಮೂಲ ಸಂವಿಧಾನ ಪುಸ್ತಕವನ್ನು ಅಮಿತ್‌ ಶಾ ಅವರು ಪ್ರತಿಷ್ಠಾನಕ್ಕೆ ಹಸ್ತಾಂತರಿಸಿದರು. ಪುತ್ತೂರಿನಲ್ಲಿ ಕ್ಯಾಂಪ್ಕೋ ಸಮಾವೇಶದಲ್ಲಿ ಕ್ಯಾಂಪ್ಕೋದಿಂದ ದೇವರ ಫೋಟೋ, ಚಿನ್ನದ ಬಣ್ಣ ಲೇಪನದ ವಿಶೇಷ ಪೇಟವನ್ನು ಅಮಿತ್‌ ಶಾಗೆ ನೀಡಲಾಯಿತು.

ಸಿದ್ದರಾಮಯ್ಯರಿಂದ ಓಲೈಕೆ ರಾಜಕಾರಣ: ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತಬ್ಯಾಂಕಿನ ರಾಜಕಾರಣ ಹಾಗೂ ಓಲೈಕೆ ರಾಜಕಾರಣವನ್ನು ಕಳೆದ 20 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಲಕ್ಕುಂಡಿ ಉತ್ಸವದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದು ಬೇರೆ, ಹಿಂದುತ್ವ ಬೇರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಹೊಸ ವ್ಯಾಖ್ಯಾನಕ್ಕೆ ಸಿದ್ದರಾಮಯ್ಯ ಅವರನ್ನೇ ಕೇಳಬೇಕು. ಅವರದ್ದು ಯಾವಾಗಲೂ ದ್ವಿಮುಖ ನೀತಿ. 

ಬಿಜೆಪಿ, ಜೆಡಿಎಸ್‌ ಕಾಲದ ಸಾಕ್ಷಿ ಗುಡ್ಡೆಗಳೇನು: ಡಿಕೆಶಿ ಪ್ರಶ್ನೆ

ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಈ ರೀತಿಯ ದ್ವಂದ್ವ ನೀತಿಯನ್ನು ಸಮಾಜದಲ್ಲಿ ಸೃಷ್ಟಿಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಮತದಾರರು ಬಹಳ ಪ್ರಬುದ್ಧರಾಗಿದ್ದು, ಇಂಥ ದ್ವಿಮುಖ ನೀತಿಗೆ ಮನ್ನಣೆ ನೀಡುವುದಿಲ್ಲ ಎಂದರು. ಹಿಂದೂ, ಹಿಂದುತ್ವ ವ್ಯತ್ಯಾಸ ಮಾಡುವುದು, ಇಸ್ಲಾಂ, ಮುಸಲ್ಮಾನರು ಒಂದು ಎನ್ನುವುದು ಮಾಡುತ್ತಾರೆ. ಸಮಾಜದಲ್ಲಿ ಬಿರುಕು ಹುಟ್ಟಿಸುವುದು, ಜಾತಿಗಳನ್ನು ಒಡೆಯುವುದು, ಉಪಜಾತಿಗಳ ದೊಡ್ಡ ಸಮೂಹವನ್ನೇ ಸೃಷ್ಟಿಮಾಡಲು ದೊಡ್ಡ ಸಮಿತಿಗಳನ್ನೇ ರಚಿಸಿರುವ ಸಾಕಷ್ಟುಉದಾಹರಣೆಗಳಿವೆ. ಜನ ಅವರನ್ನು 2018ರಲ್ಲಿ ಮನೆಗೆ ಕಳುಹಿಸಿದ್ದರು. ಈ ಬಾರಿಯೂ ಕಳುಹಿಸಲಿದ್ದಾರೆ ಎಂದರು.