ಡ್ರೈವರ್ ಸೇರಿದಂತೆ ಸಿಎಂ ಗೃಹ ಕಚೇರಿಯ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್..!
ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ವೈರಸ್ ಮಾಹಾಮಾರಿ ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಚೇರಿ ಮತ್ತು ನಿವಾಸಕ್ಕೂ ವಕ್ಕರಿಸಿದೆ.
ಬೆಂಗಳೂರು, (ಜುಲೈ.10): ಸಿಎಂ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸ, ಖಾಸಗಿ ನಿವಾಸ ಧವಳಗಿರಿಯಲ್ಲಿ ಒಟ್ಟು 10 ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಗನ್ ಮ್ಯಾನ್, ಸಿಎಂ ಸ್ಪೇರ್ ವಾಹನದ ಚಾಲಕ, ಅಡುಗೆ ಸಿಬ್ಬಂದಿ, ಎಲೆಕ್ಟ್ರಿಕ್ ಆಪರೇಟರ್, ಸ್ವಚ್ಛತಾ ಸಿಬ್ಬಂದಿಯಲ್ಲೂ ಸೋಂಕು ದೃಢಪಟ್ಟಿದೆ. ಇದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಕೊರೋನಾ ಭೀತಿ ಶುರುವಾಗಿದೆ
ಸೋಂಕತರ ನಿಕಟ ಸಂಪರ್ಕಿಗಳ ಜತೆಗೆ ಸಿಎಂ ಮತ್ತು ರಾಜಕೀಯ ಮುಖಂಡರಲ್ಲೂ ಸೋಂಕಿನ ಭೀತಿ ಆವರಿಸಿದ್ದು, ಗೃಹ ಕಚೇರಿ ಕೃಷ್ಣಾವನ್ನು ಸ್ಯಾನಿಟೈಸ್ ಮಾಡಲಾಗಿದೆ.
ಬೆಂಗ್ಳೂರಲ್ಲಿ ಸಾವು ಹೆಚ್ಚಾಗಲು BBMP ನಿರ್ಲಕ್ಷ್ಯವೇ ಕಾರಣ..!
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಹಾಗು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿ ಡ್ ನಿಯಂತ್ರಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.