ಬೆಂಗಳೂರು ಅಪರಾಧ ಕೃತ್ಯಗಳ ಸಂಬಂಧ ಆರೋಪಿಗಳಿಂದ ಮಾಹಿತಿ ಕಲೆ ಹಾಕಲು ಮೆದುಳು ಪರೀಕ್ಷೆ(ಬ್ರೈನ್ ಮ್ಯಾಪಿಂಗ್) ಮಾಡಲು ರಾಜ್ಯ ಪೊಲೀಸ್ ಇಲಾಖೆಯೇ ಆರಂಭಿಸಿದೆ. ಇದುವರೆಗೂ ರಾಜ್ಯ ಪೊಲೀಸರು, ಬ್ರೈನ್ ಮ್ಯಾಪಿಂಗ್‌ಗೆ ಗುಜರಾತ್‌ನ ಅಹಮದಾಬಾದ್‌ನ ಎಫ್‌ಎಸ್‌ಎಲ್‌ಗೆ ಆರೋಪಿಗಳನ್ನು ಕರೆದೊಯ್ಯುತ್ತಿದ್ದರು.

ಬೆಂಗಳೂರು ಅಪರಾಧ ಕೃತ್ಯಗಳ ಸಂಬಂಧ ಆರೋಪಿಗಳಿಂದ ಮಾಹಿತಿ ಕಲೆ ಹಾಕಲು ಮೆದುಳು ಪರೀಕ್ಷೆ ಅಥವಾ ಬ್ರೈನ್‌ ಮ್ಯಾಪಿಂಗ್ ಮಾಡಲು ಇಷ್ಟು ದಿನಗಳ ಕಾಲ ಬಂಧಿತ ಆರೋಪಿಗಳನ್ನು ಪೊಲೀಸರು ಗುಜರಾತ್‌ಗೆ ಕರೆದೊಯ್ಯುತ್ತಿದ್ದರು. ಆದರೆ, ಇನ್ಮುಂದೆ ಆ ಸಂಕಷ್ಟವಿಲ್ಲ. ಏಕೆಂದರೆ, ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಇನ್ನು ಬೆಂಗಳೂರಿನಲ್ಲೇ ಲಭ್ಯವಾಗಲಿದೆ. ಬೆಂಗಳೂರಿನ ಎಫ್‌ಎಸ್‌ಎಲ್‌ ಕಚೇರಿಯಲ್ಲಿಯೇ ಹೊಸ ವ್ಯವಸ್ಥೆಯನ್ನು ಆರಂಭಿಸಲಾಗಿದೆ. 

ಹೌದು, ಬೆಂಗಳೂರು ಅಪರಾಧ ಕೃತ್ಯಗಳ ಸಂಬಂಧ ಆರೋಪಿಗಳಿಂದ ಮಾಹಿತಿ ಕಲೆ ಹಾಕಲು ಮೆದುಳು ಪರೀಕ್ಷೆ(ಬ್ರೈನ್ ಮ್ಯಾಪಿಂಗ್) ಮಾಡಲು ರಾಜ್ಯ ಪೊಲೀಸ್ ಇಲಾಖೆಯೇ ಆರಂಭಿಸಿದೆ. ಇದುವರೆಗೂ ರಾಜ್ಯ ಪೊಲೀಸರು, ಬ್ರೈನ್ ಮ್ಯಾಪಿಂಗ್‌ಗೆ ಗುಜರಾತ್‌ನ ಅಹಮದಾಬಾದ್‌ನ ಎಫ್‌ಎಸ್‌ಎಲ್‌ಗೆ ಆರೋಪಿಗಳನ್ನು ಕರೆದೊಯ್ಯುತ್ತಿದ್ದರು. ಈ ಸಮಸ್ಯೆಯನ್ನು ಕೊನೆಗೂ ಪರಿಹರಿಸಿರುವ ರಾಜ್ಯ ಪೊಲೀಸ್ ಇಲಾಖೆ, ನಗರದ ಎಫ್‌ಎಸ್‌ಎಲ್‌ನಲ್ಲೇ ಈ ವ್ಯವಸ್ಥೆಯನ್ನು ಆರಂಭಿಸಿದೆ. 

ಇದನ್ನು ಓದಿ: Shraddha Walker Murder Case: ಅಫ್ತಾಬ್‌ಗೆ ಪಾಲಿಗ್ರಾಫ್‌ ಪರೀಕ್ಷೆ ಮಾಡಲು ದೆಹಲಿ ಪೊಲೀಸರಿಗೆ ಕೋರ್ಟ್‌ ಅನುಮತಿ

ಬೆಂಗಳೂರಿನ ಮಡಿವಾಳದಲ್ಲಿರುವ ಎಫ್‌ಎಸ್‌ಎಲ್‌ನಲ್ಲೇ ಅತ್ಯಾಧುನಿಕ ಮಟ್ಟದ ಬ್ರೈನ್‌ ಮ್ಯಾಪಿಂಗ್ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸುತ್ತ ರಾಜ್ಯ ಹಾಗೂ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಾಫ್ ಟೆಸ್ಟ್) ಚಾಲನೆಯಲ್ಲಿದ್ದು, ಆದರೆ ಬ್ರೈನ್‌ ಮ್ಯಾಪಿಂಗ್ ಪರೀಕ್ಷೆಗೆ ವ್ಯವಸ್ಥೆ ಇರಲಿಲ್ಲ. 

ಆದರೀಗ, ಆರೋಪಿಗಳನ್ನು ಗುಜರಾತ್‌ಗೆ ಕರೆದೊಯ್ಯುವ ಸಂಕಷ್ಟಟ ತಪ್ಪಿದ್ದು, ಬೆಂಗಳೂರಿನ ಎಫ್‌ಎಸ್‌ಎಲ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬ್ರೈನ್ , ಎಲೆಕ್ಟ್ರಿಕಲ್‌ ಆಸಿಲೇಶನ್‌ ಸ್ಟ್ರೆಚರ್‌ ಪ್ರೊಫೈಲಿಂಗ್ (ಬಿಐಓಎಸ್) ಅಥವಾ ಬ್ರೈನ್‌ ಮ್ಯಾಪಿಂಗ್ ಪರೀಕ್ಷೆ ಆರಂಭಿಸಲಾಗಿದೆ. ಇನ್ನು, ಇದರ ಪ್ರಯೋಜನವನ್ನು ತನಿಖಾಧಿಕಾರಿಗಳು ಬಳಸಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳು ‌ಸೂಚನೆ ಹೊರಡಿಸಿದ್ದಾರೆ.

ಇದನ್ನೂ ಓದಿ: Shraddha Walker Murder: ಏನಿದು ಮಂಪರು ಪರೀಕ್ಷೆ, ಶ್ರದ್ಧಾ ಕುರಿತಾಗಿ ಅಫ್ತಾಬ್‌ಗೆ ಪೊಲೀಸರು ಕೇಳಲಿರುವ ಪ್ರಶ್ನೆಗಳೇನು?

ಬ್ರೈನ್‌ ಮ್ಯಾಪಿಂಗ್ ಪರೀಕ್ಷೆ ಅಂದ್ರೇನು..?
ಬ್ರೈನ್‌ ಮ್ಯಾಪಿಂಗ್ ಪರೀಕ್ಷೆ ಅಂದರೆ ಏನು ಎಂಬ ಬಗ್ಗೆ ನಿಮಗೆ ಅನುಮಾನಗಳಿದ್ಯಾ..? ಈ ಪರೀಕ್ಷೆ ಮೆದುಳಿನ ತರಂಗದ ಫ್ರೀಕ್ವೆನ್ಸಿ ಸಮಗ್ರ ವಿಶ್ಲೇಷಣೆಯಾಗಿದೆ. ಈ ಪರೀಕ್ಷೆಯಲ್ಲಿ, ಫೋರೆನ್ಸಿಕ್ ತಜ್ಞರು ವಿಶಿಷ್ಟವಾದ ನರವಿಜ್ಞಾನ ತಂತ್ರಗಳನ್ನು ಅಪ್ಲೈ ಮಾಡುತ್ತಾರೆ. ಶಂಕಿತ ವ್ಯಕ್ತಿಯ ಮೆದುಳು ಅಪರಾಧದ ದೃಶ್ಯದಿಂದ ವಿಷಯಗಳನ್ನು ಗುರುತಿಸುತ್ತದೆಯೇ ಎಂದು ಕಂಡುಕೊಳ್ಳಲು ಈ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ, ಆತ ಈ ಪ್ರಕರಣದಲ್ಲಿ ತಪ್ಪು ಮಾಡಿಲ್ಲದಿದ್ದರೆ ಆತನ ಮೆದುಳಿನಲ್ಲಿ ಯಾವುದೇ ಜ್ಞಾನವಿರುವುದಿಲ್ಲ..

ಇನ್ನು, ಬ್ರೈನ್‌ ಮ್ಯಾಪಿಂಗ್‌ನಲ್ಲಿ, ಆರೋಪಿಯ ತಲೆಗೆ ಸೆನ್ಸಾರ್‌ಗಳನ್ನು ಜೋಡಿಸಲಾಗುತ್ತದೆ ಮತ್ತು ಅವನು ಅಥವಾ ಅವಳು ಕಂಪ್ಯೂಟರ್ ಪರದೆಯ ಮುಂದೆ ಕೂರಿಸಲಾಗುತ್ತದೆ. ಶಂಕಿತನನ್ನು ನಂತರ ಚಿತ್ರಗಳನ್ನು ನೋಡುವಂತೆ ಅಥವಾ ಶಬ್ದಗಳನ್ನು ಕೇಳುವಂತೆ ಮಾಡಲಾಗುತ್ತದೆ.

ಇದನ್ನು ಓದಿ: ಮಾದಕ ವಸ್ತು ಮಾರಾಟ ಜಾಲ: ಖನ್ನಾ ಮಂಪರು ಪರೀಕ್ಷೆಗೆ ಕೋರ್ಟ್‌ ಸಮ್ಮತಿ

ಸೆನ್ಸಾರ್‌ಗಳು ಮೆದುಳಿನಲ್ಲಿನ ವಿದ್ಯುತ್ ಸಂಚಾರವಾಗುವ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಶಂಕಿತ ವ್ಯಕ್ತಿಯು ಆ ಪ್ರಚೋದನೆಗೆ (ಚಿತ್ರ ಅಥವಾ ಧ್ವನಿ) ಯಾವುದೇ ಸಂಪರ್ಕವನ್ನು ಹೊಂದಿದ್ದರೆ ಮಾತ್ರ ಕೆಲವು ತರಂಗಗಳು ಉತ್ಪತ್ತಿಯಾಗುತ್ತವೆ ಹಾಗೂ ರಿಜಿಸ್ಟರ್‌ ಆಗುತ್ತದೆ ಎಂದು ತಿಳಿದುಬಂದಿದೆ.

ಇದರ ಉಪಯೋಗ ಹೇಗೆ..?

ಬ್ರೈನ್ ಮ್ಯಾಪಿಂಗ್‌ನಿಂದ ಯಾವುದೇ ವ್ಯಕ್ತಿಗೆ ಯಾವ ಹಾನಿಯೂ ಆಗುವುದಿಲ್ಲ. ಹಾಗೂ, ನ್ಯಾಯಾಲಯದ ಅನುಮತಿ ಪತ್ರದ ಮೇರೆಗೆ ಮಾತ್ರ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ತನಿಖಾಧಿಕಾರಿಗಳು ಸಹ ಕ್ರಮ ಕೈಗೊಳ್ಳಬೇಕಾಗಿದೆ. ಮೆದುಳಿನ ಫಿಂಗರ್ ಪ್ರಿಂಟಿಂಗ್ ವೈಜ್ಞಾನಿಕ ವಿಧಾನವಾಗಿದ್ದು, ಇದು ಇಇಜಿ (ಎಲೆಕ್ಟೋ ಎನ್ಸೆಫೇಲೋಗ್ರಾಮ್) ಆಧಾರಿತ ತಂತ್ರಜ್ಞಾನದ ಮೂಲಕ ಮೆದುಳಿನಲ್ಲಿ ಸಂಗ್ರಹವಾಗಿರುವ ಅಪರಾಧಕ್ಕೆ ಸಂಬಂಧಿಸಿದ ಅನುಭವದ ಜ್ಞಾನ ಮತ್ತು ಭಾಗವಹಿಸುವಿಕೆಯನ್ನು ಪತ್ತೆ ಹಚ್ಚುತ್ತವೆ.

ಈ ಪರೀಕ್ಷೆಯಲ್ಲಿ ಇಂಥದ್ದೇ ಪ್ರತಿಕ್ರಿಯೆ ನೀಡಬೇಕೆಂದು ವ್ಯಕ್ತಿಗಳ ಮೇಲೆ ಒತ್ತಡವಿರುವುದಿಲ್ಲ. ಈ ಪರಿಕ್ಷೆಗೆ ಒಳಗಾಗುವ ವ್ಯಕ್ತಿಗೆ ಯಾವುದೇ ರೀತಿಯ ರಾಸಾಯನಿಕ ಚುಚ್ಚು ಮದ್ದು ನೀಡುವುದಿಲ್ಲ. ಅಲ್ಲದೆ ಈ ಪರೀಕ್ಷೆಯು ಆಕ್ರಮಣಕಾರಿಯಾಗಿ ನಡೆಯುವುದಿಲ್ಲ ಎಂದು ತಿಳಿದುಬಂದಿದೆ.