Asianet Suvarna News

ಕೊರೋನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಘೋಷಣೆ

* ಕೊರೋನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ
*ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ
* ಅಪ್ಪ ಅಮ್ಮ ಇಲ್ಲದೇ ಇದ್ದರೆ ಅವರ ಮಕ್ಕಳ ಹೆಸರಿನಲ್ಲಿ ಹಣ ಡೆಪಾಸಿಟ್ 

BPL family which has lost an adult member due to Covid-19 would be provided Rs 1 lakh rbj
Author
Bengaluru, First Published Jun 14, 2021, 2:56 PM IST
  • Facebook
  • Twitter
  • Whatsapp

ಬೆಂಗಳೂರು, (ಜೂನ್.14): ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. 

ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಬಿಪಿಎಲ್ ಕುಟುಂಬಗಳಿಗೆ ಒಂದು ಲಕ್ಷ ರೂ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದರು.

ತಮ್ಮ ಕ್ಷೇತ್ರದಲ್ಲಿ ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸುಧಾಕರ್

ಬಿಪಿಎಲ್ ಕುಟುಂಬಗಳಲ್ಲಿ ಕೋವಿಡ್ ಸೋಂಕಿನಿಂದ ವಯಸ್ಕರು ಮೃತಪಟ್ಟಿದ್ದರೆ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಪರಿಹಾರ ನೀಡಲಾಗುತ್ತದೆ. ಎರಡು ಅಲೆಯಲ್ಲಿ ಮೃತಪಟ್ಟವರಿಗೆ ಈ ಪರಿಹಾರ ಸಿಗುತ್ತೆ ಎಂದರು. 

ರಾಜ್ಯದ ಹಣಕಾಸಿನ ಪರಿಸ್ಥಿತಿ ಇರೋದರಲ್ಲಿ ಉತ್ತಮವಾಗಿದೆ. ಇದಕ್ಕಾಗಿ ಸುಮಾರು 250-300ಕೋ ಖರ್ಚಾಗುತ್ತದೆ. ಈಗಾಗಲೇ ಸುಮಾರು 25 ಸಾವಿರ ಬಿಪಿಎಲ್ ಕುಟುಂಬದ ಕೆಲವರು ಮೃತಪಟ್ಡಿದ್ದಾರೆ. 

ಕುಟುಂಬದಲ್ಲಿ ಮೂವರು ಅಥವಾ ಇಬ್ಬರು ಸಾವನ್ನಪ್ಪಿದೂ ಅವರಲ್ಲಿ ಒಬ್ಬರಿಗೆ ಮಾತ್ರ ಒಂದು ಲಕ್ಷ ರೂ. ಸೌಲಬ್ಯ ದೊರೆಯಲಿದೆ. ಒಂದು ವೇಳೆ ಅಪ್ಪ ಅಮ್ಮ ಇಲ್ಲದೇ ಇದ್ದರೆ ಅವರ ಮಕ್ಕಳ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಲಾಗುತ್ತದೆ.

Follow Us:
Download App:
  • android
  • ios