ಕಾಂಗ್ರೆಸ್ ಸರ್ಕಾರ 12,80,540 ಬಿಪಿಎಲ್ ಕಾರ್ಡ್ ಕೊಟ್ಟಿದೆ, ಯಾವುದನ್ನೂ ರದ್ದು ಮಾಡಿಲ್ಲ; ವಕ್ತಾರ ಎಂ. ಲಕ್ಷ್ಮಣ್!

ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿಲ್ಲ, ಎಪಿಎಲ್‌ಗೆ ಬದಲಾಯಿಸಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸುಳ್ಳು ಹೇಳುತ್ತಿದೆ ಮತ್ತು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 12.80 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡುವಂತೆ ಸೂಚಿಸಿದ್ದರೂ, ಕೇವಲ 80 ಸಾವಿರ ಕಾರ್ಡ್‌ಗಳನ್ನು ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.

BPL card cancellation Congress Spokesperson Laxman says 12 lakh additional BPL cards issued sat

ಬೆಂಗಳೂರು (ನ.21): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಒಂದು ಕಾರ್ಡನ್ನೂ ರದ್ದು ಮಾಡಿಲ್ಲ, ಎಪಿಎಲ್‌ಗೆ ಬದಲಾಯಿಸಿದ್ದೇವೆ ಅಷ್ಟೇ. ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿಗರು ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ 12,80,540 ಬಿಪಿಎಲ್ ಕಾರ್ಡ್ ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್‌ ಕಾರ್ಡ್ ರದ್ದತಿ ವಿಚಾರದಲ್ಲಿ ಬಿಜೆಪಿಯ ದ್ವಂದ್ವ ನೀತಿಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿದೆ. ನಾವು ಒಂದು ಕಾರ್ಡನ್ನೂ ರದ್ದು ಮಾಡಿಲ್ಲ, ಎಪಿಎಲ್‌ಗೆ ಬದಲಾಯಿಸಿದ್ದೇವೆ ಅಷ್ಟೇ. ವಿರೋಧ ಪಕ್ಷದ ಸ್ಥಾನಕ್ಕೆ ಧಕ್ಕೆ ತರುವ ವ್ಯಕ್ತಿ ಅಶೋಕ್. ಪರಿಜ್ಞಾನವಿಲ್ಲದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿಗರು ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ 12,80,540 ಬಿಪಿಎಲ್ ಕಾರ್ಡ್ ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ಕಾರ್ಡ್ ಬದಲಾವಣೆ ಮಾಡಿದ್ದಕ್ಕೆ ರಾಷ್ಟ್ರೀಯ ಆಹಾರ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್ ಬಂದಿದೆ. ಇದು ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್. ಬಿಪಿಎಲ್‌ ಕಾರ್ಡ್ ಬದಲಾದರೆ ಅಕ್ಕಿ ಮಾತ್ರ ಸಿಗುವುದಿಲ್ಲ.ಬಿಪಿಎಲ್ ಹೋಗಿ ಎಪಿಎಲ್ ಕಾರ್ಡ್ ಬಂದರೂ ಗೃಹಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿದ್ದರೆ ಮಾತ್ರ ಗೃಹಲಕ್ಷ್ಮಿ ಸಿಗುವುದಿಲ್ಲ. ವಿಪಕ್ಷ ನಾಯಕ ಆರ್. ಅಶೋಕ್‌ ಅವರಿಗೆ ಸುಳ್ಳು ಹೇಳುವುದರಲ್ಲಿ ಪಿಎಚ್‌ಡಿ ನೀಡಬೇಕು. ನೋಟಿಸ್ ಕೊಟ್ಟು ಈಗ ನಾಟಕ ಆಡುತ್ತಿದ್ದೀರಾ? ನಿಮಗೆ ನಾಚಿಕೆ ಆಗುವುದಿಲ್ಲವಾ? ಎಂದು ಕಿಡಿಕಾರಿದ್ದಾರೆ. 

ಇದನ್ನೂ ಓದಿ: ಬಿಪಿಎಲ್ ಗದ್ದಲದ ನಡುವೆಯೇ ರೇಷನ್‌ ಕಾರ್ಡ್‌ಗಳ ಡಿಜಿಟಲೀಕರಣ ದೇಶವ್ಯಾಪಿ 5.8 ಕೋಟಿ ನಕಲಿ ಕಾರ್ಡ್ ಕೇಂದ್ರ ರದ್ದು!

ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಮಾನದಂಡಗಳನ್ನು ಕೇಂದ್ರ ಸರ್ಕಾರ ನೀಡಿದೆ. 
1. ಬಿಪಿಎಲ್ ಕಾರ್ಡ್‌ದಾರರು ಆದಾಯ ತೆರಿಗೆ (ಐಟಿ ರಿಟರ್ನ್) ಸಲ್ಲಿಕೆ ಮಾಡುತ್ತಿರಬಾರದು.
2. 8 ಎಕರೆಗಿಂತ ಹೆಚ್ಚು ಜಮೀನು ಇರಬಾರದು.
3. ಬಿಪಿಎಲ್‌ ಕಾರ್ಡ್‌ದಾರರ ಕುಟುಂಬ ಕಾರು ಹೊಂದಿರಬಾರದು.
4. ಕುಟುಂಬದ ವಾರ್ಷಿಕ ವರಮಾನ 2 ಲಕ್ಷ ರೂ. ಮೀರುವಂತಿಲ್ಲ.
ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯದಲ್ಲಿ 12.80 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವಂತೆ ಕೇಂದ್ರ ಸೂಚಿಸಿದೆ. ರಾಜ್ಯ ಸರ್ಕಾರ ಇದನ್ನು ಧಿಕ್ಕರಿಸಿದೆ. ಕೇವಲ 80 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಗೆ ಪರಿವರ್ತನೆ ಮಾಡಿದ್ದೇವೆ. ಆದರೆ, ಬಿಜೆಪಿ ನಾಯಕರು ದಿನನಿತ್ಯ ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮಾಹಿತಿ ನೀಡಿದರು.

ಪ್ರತಾಪ್‌ ಸಿಂಹಗೆ ಪಂಥಾಹ್ವಾನ: 
ಮಂತ್ರಾಲಯದ ಗುರು ರಾಘವೇಂದ್ರರ ಮಠಕ್ಕೆ ಮುಸ್ಲಿಮರು ಭೂಮಿ ನೀಡಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿಯ ಮೂಲ ಸಂಸ್ಥಾಪಕರು, ವಂಶಸ್ಥರು ಯಾರು, ಯಾವ ದೇಶದವರು ಎಂಬುದನ್ನು ಪ್ರತಾಪ್ ಸಿಂಹ ಹೇಳಲಿ. ವಕ್ಫ್ ಬೋರ್ಡ್ ವಿಚಾರದಲ್ಲಿ ಪ್ರತಾಪ್ ಸಿಂಹ ಚರ್ಚೆಗೆ ಬರಲಿ. ಸಂಸದರಾಗಿದ್ದಾಗ ಕರೆದರೂ ಬಹಿರಂಗ ಚರ್ಚೆಗೆ ಬರಲಿಲ್ಲ. ಈಗ ಅವರನ್ನು ದೂರ ತಳ್ಳಿದ್ದಾರೆ. ಈಗಲಾದರೂ ಅವರು ಚರ್ಚೆಗೆ ಬರಲಿ, ಫ್ರೆಂಡ್ಲಿ ಫೈಟ್ ಮಾಡ್ತೇನೆ ಬರಲಿ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಪಂಥಾಹ್ವಾನ ನೀಡಿದರು.

ಇದನ್ನೂ ಓದಿ: 

ಸ್ನೇಹಮಯಿ ಕೃಷ್ಣ ಮತ್ತೊಂದು ಆಡಿಯೋ ಸಿಕ್ಕಿದೆ: ಪ್ರತಾಪ್ ಸಿಂಹ ಸರ್ಕಾರಿ ಆಸ್ತಿಗಳನ್ನು ಕಬಳಿಸಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ಸೂಕ್ತ ದಾಖಲೆ ಕೊಡಬೇಕು ತಾನೇ, ಸ್ಮಶಾನದ ಜಾಗವನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳ್ತಿದ್ದೀರಲ್ಲ. ಹಾಗಾದರೆ ಮಡಿಕೇರಿಯಲ್ಲಿ ಕಾಫಿ ತೋಟ ಇದೆಯಲ್ಲಾ ಅಲ್ಲಿ ಹೂಳಬೇಕಾ? ಕೆ. ಆರ್. ಕ್ಷೇತ್ರ ಶಾಸಕ ಶ್ರೀವತ್ಸ 14 ಸೈಟ್ ವಾಪಸ್  ಕೊಡೋತನಕ ರೋಡ್ ನಲ್ಲಿ ಬಿದ್ದು ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರಲ್ಲ. ಪಾಪ ಸ್ನೇಹಮಯಿ ಕೃಷ್ಣ ಇದೀಗ ಹುಚ್ಚರಾಗಿದ್ದಾರೆ. ರಾತ್ರಿ ವೇಳೆಯಲ್ಲೂ ಲೋಕಾಯುಕ್ತ ಕಚೇರಿ ಸುತ್ತಮುತ್ತ ಸುತ್ತುತಿರುತ್ತಾರೆ. ಅವರ ಇನ್ನೊಂದು ಆಡಿಯೋ ನನಗೆ ಸಿಕ್ಕಿದೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದರು.

Latest Videos
Follow Us:
Download App:
  • android
  • ios