Asianet Suvarna News Asianet Suvarna News

CM Bommai: 6 ತಿಂಗಳಲ್ಲಿ ಅನೇಕ ಅಭಿವೃದ್ಧಿ ಕಾರ‍್ಯ, ಜನಪರ ಆಡಳಿತ ನೀಡಿದ ಬೊಮ್ಮಾಯಿ

ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆ (Mekedatu Padayatre) ಸಂದರ್ಭದಲ್ಲಿ ಯಾವುದೇ ಪೊಲೀಸ್‌ ಬಲ ಪ್ರಯೋಗಿಸದೆಯೂ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕನ ಮಾಡಿ, ಯಾರಿಗೂ ತೊಂದರೆಯಾಗದಂತೆ ಸನ್ನಿವೇಶ ನಿಭಾಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರ ನಡೆ ಚಾಣಾಕ್ಷತೆಗೆ ನಿದರ್ಶನ.

Bommai Completes sweet 6 months as Karnataka CM More Challenges Developments await hls
Author
Bengaluru, First Published Jan 28, 2022, 9:41 AM IST

ಪ್ರಗತಿಪರ, ವಿಕಾಸಶೀಲ ರಾಜ್ಯ ಎಂದೇ ಹೆಸರುವಾಸಿಯಾಗಿರುವ ಕರ್ನಾಟಕವು ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಕೈಗಾರಿಕೆ, ಆವಿಷ್ಕಾರ, ನವೋದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟಸ್ಥಾನಮಾನ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ನವಭಾರತ ನಿರ್ಮಿಸುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದು.

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಗಳಿಗೆಯಲ್ಲಿ, ರಾಜ್ಯ ನಡೆದು ಬಂದ ಹಾದಿಯ ಹಿನ್ನೋಟದ ಅನುಭವದ ಜೊತೆಗೆ ಮುಂದೆ ಸಾಗಬೇಕಾದ ದೂರದೃಷ್ಟಿಯ ವಿಚಾರಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ವೈಚಾರಿಕತೆ, ಪ್ರಬುದ್ಧತೆ ಹಾಗೂ ಬದ್ಧತೆಯ ಅಗತ್ಯವಿದೆ. ಆರೂವರೆ ಕೋಟಿ ಕನ್ನಡಿಗರ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ನಿರೀಕ್ಷೆಯಿಂದ ಆಡಳಿತದ ಚುಕ್ಕಾಣಿ ಹಿಡಿದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಸಂವೇದನಾಶೀಲತೆ, ಸೂಕ್ಷ್ಮತೆ, ಸಂದಿಗ್ಧ ಪರಿಸ್ಥಿಗಳನ್ನೂ ಜಾಣ್ಮೆಯಿಂದ ನಿಭಾಯಿಸುವ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಾಯಕನಾಗಿ, ಕಾಮನ್‌ ಮ್ಯಾನ್‌ ಸಿಎಂ ಎಂದೇ ಖ್ಯಾತಿ ಗಳಿಸಿರುವ ಬಸವರಾಜ ಬೊಮ್ಮಾಯಿ ಅವರು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಸುದೀರ್ಘ ಅನುಭವ, ಜನಸೇವೆಯಲ್ಲಿನ ಚಿಂತನೆಗಳನ್ನು ಜಾರಿ ಮಾಡಿ, ರಾಜ್ಯದ ಸಮಗ್ರ ಪ್ರಗತಿಗೆ ಬುನಾದಿ ಹಾಕುವ ಮಹತ್ವದ ಕೆಲಸದಲ್ಲಿ ತೊಡಗಿದ್ದಾರೆ. ಈಗ ಅವರು ಮುಖ್ಯಮಂತ್ರಿಯಾಗಿ 6 ತಿಂಗಳು ಪೂರ್ಣವಾಗಿದ್ದು, ಈ ಅವಧಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಭದ್ರ ಅಡಿಪಾಯ ಹಾಕಲಾಗಿದೆ.

BJP Government: ಆರೇ ತಿಂಗಳಲ್ಲಿ ಜನರ ಮನ ಗೆದ್ದ ಕಾಮನ್‌ಮ್ಯಾನ್ ಸಿಎಂ..!

ರೈತರ ನಾಯಕರೂ ಆದ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಕೋವಿಡ್‌ ಸಂಕಷ್ಟ, ಪ್ರವಾಹ ಮೊದಲಾದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿ ಬೊಮ್ಮಾಯಿ ಅವರಿಗೆ ಸ್ಥಾನ ನೀಡಿ ಬೆನ್ನು ತಟ್ಟಿದರು. ಯಡಿಯೂರಪ್ಪರಂತಹ ಮುತ್ಸದ್ಧಿ ನಾಯಕನ ಸ್ಥಾನ ತುಂಬುವುದು ಸುಲಭದ ಮಾತಲ್ಲ. ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌ ಬೊಮ್ಮಾಯಿ ರಾಜ್ಯದ ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಾಗಿದ್ದರು. ಅವರ ಜತೆ ಪಳಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಸಾರ್ವಜನಿಕ ಜೀವನ, ರಾಜಕಾರಣ ಹಾಗೂ ಆಡಳಿತದ ಅನುಭವ ಬಹಳ ಸಣ್ಣ ವಯಸ್ಸಿನಲ್ಲೇ ಕೊಡುಗೆಯಾಗಿ ದೊರೆತಿದ್ದು, ಭವಿಷ್ಯದಲ್ಲಿ ಅವರು ಈ ನಾಡಿನ ದೊರೆಯಾಗಿ ಚುಕ್ಕಾಣಿ ಹಿಡಿಯುತ್ತಾರೆ ಎಂದೇ ಇರಬೇಕೇನೋ!

ಸಾಮಾನ್ಯರ ಸಿಎಂ ಆಗಿದ್ಹೇಗೆ?

ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿದ್ದಾಗಲೇ ಜನತೆಗೆ ಆಪ್ತರಾಗಿದ್ದರು. ಕೋವಿಡ್‌ ಸಂದರ್ಭದಲ್ಲಿ ತಮ್ಮ ನಿವಾಸವನ್ನೇ ಕ್ವಾರಂಟೈನ್‌ ಕೇಂದ್ರವಾಗಿಸಿ ತಮ್ಮ ಮನೆ ಜನಸೇವೆಗೆ ಮೀಸಲು ಎಂಬುದನ್ನು ಮನದಟ್ಟು ಮಾಡಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಪೊಲೀಸರ ಅನಗತ್ಯ ಗೌರವ ವಂದನೆಯನ್ನು ಕೈಬಿಟ್ಟಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛಗಳನ್ನು ನಿಷೇಧಿಸಿ ಕನ್ನಡ ಪುಸ್ತಕಗಳನ್ನು ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಇವರು ಶ್ರೀಸಾಮಾನ್ಯರ ಸಿಎಂ ಎಂಬುದನ್ನು ಸಾಬೀತುಪಡಿಸಿತು. ಇವೆಲ್ಲ ಮೇಲ್ನೋಟಕ್ಕೆ ಸಣ್ಣ ವಿಚಾರ ಎಂದೆನಿಸಿದರೂ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಸುಳ್ಳಲ್ಲ. ಇದರಿಂದಾಗಿ ರಾಜಕಾರಣಿಗಳು ಎಂದಾಕ್ಷಣ ವಿಶೇಷ ವ್ಯಕ್ತಿಗಳಲ್ಲ, ಅವರೂ ಸಹ ಸಾಮಾನ್ಯರು ಎಂಬ ಆಪ್ತ ಮನೋಭಾವ ಜನರ ಮನಸ್ಸಿನಲ್ಲಿ ನೆಲೆಯಾಗಿದೆ.

ನಾಡಿನ ಅನ್ನದಾತರಾದ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸರ್ಕಾರದ ನೆರವು ಅಗತ್ಯ ಎಂಬುದನ್ನು ಮೊದಲಿಗೆ ಅರಿತ ಬೊಮ್ಮಾಯಿಯವರು, ಅಧಿಕಾರ ಸ್ವೀಕರಿಸಿದ ಕೂಡಲೇ 1,000 ಕೋಟಿ ರು. ರೈತ ವಿದ್ಯಾನಿಧಿ ನೀಡಿದರು. ಜೊತೆಗೆ ಯೋಜನೆಯನ್ನು ಮತ್ತಷ್ಟುವಿಸ್ತರಿಸಿ 8, 9, 10ನೇ ತರಗತಿಯಲ್ಲಿ ಓದುತ್ತಿರುವ ರೈತರ ಹೆಣ್ಣುಮಕ್ಕಳಿಗೂ ಯೋಜನೆಯ ಲಾಭ ಕಲ್ಪಿಸಿದರು. ಇದಲ್ಲದೆ, ವಯೋವೃದ್ಧರ ಪಿಂಚಣಿ, ವಿಧವಾ ವೇತನ, ವಿಶೇಷಚೇತನರ ವೇತನದ ಮೊತ್ತ ಹೆಚ್ಚಿಸಿದರು. ಸಮಾಜದ ಅಶಕ್ತ ವರ್ಗದ ಜನರಿಗೆ ಈ ರೀತಿಯಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಸಾಮಾಜಿಕ ಭದ್ರತಾ ವ್ಯವಸ್ಥೆಯ ಬಲವರ್ಧನೆ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ.

Jobs Recruitment ಕರ್ನಾಟಕದಲ್ಲಿ ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಸಂಪುಟ ಅನುಮೋದನೆ

ಗ್ರಾಮ ಒನ್‌ ಕೇಂದ್ರ ಸ್ಥಾಪನೆ

ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಕರೆ ನೀಡಿದ್ದು, ಇದು ರಾಜ್ಯವನ್ನು ಸುಧಾರಣೆಯತ್ತ ನಡೆಸಲು ಸೂಕ್ತವಾದ ಕಾಲ. ಇದಕ್ಕೆ ಪೂರಕವಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿಗಳು, ಅಮೃತ ಮಹೋತ್ಸವದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. 750 ಗ್ರಾಮ ಪಂಚಾಯಿತಿಗಳ ಮೂಲಸೌಕರ್ಯಾಭಿವೃದ್ಧಿ, 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮೊದಲಾದ ಯೋಜನೆಗಳು ರಾಜ್ಯವನ್ನು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ತರುವುದು ನಿಶ್ಚಿತ.

ಭಾರಿ ಮಳೆಯಿಂದಾಗಿ ಬೆಳೆಹಾನಿಯಾಗಿ ರೈತಬಂಧುಗಳು ಸಂಕಷ್ಟಕ್ಕೆ ಸಿಲುಕಿದಾಗ ಮುಖ್ಯಮಂತ್ರಿಗಳು ಸ್ಪಂದಿಸಿದ ರೀತಿ ವಿಭಿನ್ನವಾಗಿತ್ತು. ಕೇಂದ್ರ ಸರ್ಕಾರದ ಪರಿಹಾರದ ಜೊತೆಗೆ ಭೌಗೋಳಿಕ ಲಕ್ಷಣ ಆಧರಿಸಿ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಿದರು. ಇನ್ನು, ಜನರು ಸರ್ಕಾರಿ ಕಟ್ಟಡಗಳ ಕಂಬಗಳನ್ನು ಸುತ್ತದೆ ಸುಲಭವಾಗಿ ಸೇವೆ ಪಡೆಯುವುದು ಮುಖ್ಯಮಂತ್ರಿಗಳ ಆಶಯ. ಇದಕ್ಕಾಗಿ ಅವರು 12 ಜಿಲ್ಲೆಗಳ 3,026 ಗ್ರಾಮ ಪಂಚಾಯಿತಿಗಳಲ್ಲಿ 39 ಗ್ರಾಮ ಒನ್‌ ಕೇಂದ್ರಗಳನ್ನು ಆರಂಭಿಸಿದ್ದಾರೆ. ಇದಲ್ಲದೆ, ಬಡಜನರಿಗೆ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ. ‘ನಡೆದಾಡುವ ದೇವರು’ ಪೂಜ್ಯ ಶ್ರೀ ಡಾ

ಶಿವಕುಮಾರ ಸ್ವಾಮೀಜಿಗಳ ಸ್ಮರಣಾರ್ಥ ದಾಸೋಹ ದಿನ ಘೋಷಿಸಿ, ಅವರ ಆಶಯದಂತೆ ಅನ್ನ, ವಸತಿ, ಶಿಕ್ಷಣ ನೀಡುವ ಕೈಂಕರ್ಯ ಮೊದಲಾದ ಕ್ರಮಗಳು, ಕಾರ್ಯಕ್ರಮಗಳು ಬೊಮ್ಮಾಯಿ ಅವರ ಬಗ್ಗೆ ಜನರಲ್ಲಿ ವಿಶ್ವಾಸ ಹುಟ್ಟಿಸಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿವೆ.

ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ

ರಾಜ್ಯದಲ್ಲಿ ಸದ್ಯ ಕೋವಿಡ್‌ ಮೂರನೇ ಅಲೆ ಎದ್ದಿದ್ದರೂ ತೀವ್ರವಾಗಿ ಬಾಧಿಸುತ್ತಿಲ್ಲ. ಇದೇ ಸಂದರ್ಭ ಕೋವಿಡ್‌ ಲಸಿಕಾಕರಣದಲ್ಲಿ ಮುಂಚೂಣಿ ಸಾಧಿಸಿರುವುದರಿಂದ ಕೊರೋನಾ ನಿಯಂತ್ರಿಸಲು ನೆರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಲಸಿಕಾಕರಣಕ್ಕೆ ಒತ್ತು ನೀಡಿದ್ದರಿಂದ ಈವರೆಗೆ ಒಂಭತ್ತೂವರೆ ಕೋಟಿ ಡೋಸ್‌ ಲಸಿಕೆಗಳನ್ನು ನೀಡಲು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ ಸೆ.17ರಂದು ಒಂದೇ ದಿನ 30 ಲಕ್ಷಕ್ಕೂ ಅಧಿಕ ಲಸಿಕೆ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು. ಇಷ್ಟೇ ಅಲ್ಲದೆ, ಆಂಬ್ಯುಲೆನ್ಸ್‌ ಸೇವೆಯಲ್ಲಿ ಸುಧಾರಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮೊದಲಾದ ಕಾರ್ಯಗಳು ಆರೋಗ್ಯ ವಲಯದಲ್ಲಿ ಕ್ರಾಂತಿ ತರುತ್ತಿವೆ.

Bommai @ 62: ಸಿಎಂ ಆಗಿ 6 ತಿಂಗಳು, 62 ನೇ ಹುಟ್ಟುಹಬ್ಬ, ಡಬಲ್ ಸಂಭ್ರಮದಲ್ಲಿ ಬೊಮ್ಮಾಯಿ

ಚಾಣಾಕ್ಷ ರಾಜಕಾರಣಿ

ರಾಜಕಾರಣಿ ಎಂದರೆ ಜನಸೇವಕನೂ ಆಗಿರಬೇಕು, ರಾಜಕೀಯದ ಅಲ್ಲೋಲಕಲ್ಲೋಲಗಳನ್ನು ಚಾಣಾಕ್ಷವಾಗಿ ನಿಭಾಯಿಸುವ ಜಾಣನೂ ಆಗಿರಬೇಕು. ವಿರೋಧ ಪಕ್ಷಗಳು ಸರ್ಕಾರದ ಕಾರ್ಯಗಳಿಗೆ ಅಡ್ಡಗಾಲು ಹಾಕುವ ಚಟುವಟಿಕೆಗಳು ಸದಾ ನಡೆಯುತ್ತಿರುತ್ತವೆ. ಇಂತಹ ಅನಗತ್ಯ ಕಾರ್ಯಗಳಲ್ಲೊಂದು, ಮೇಕೆದಾಟು ಪಾದಯಾತ್ರೆ ಎಂಬ ಮಹಾನಾಟಕ. ಕೋವಿಡ್‌ ಮೂರನೇ ಅಲೆ ಎದ್ದ ಆರಂಭದಲ್ಲೇ ಜನರ ಆರೋಗ್ಯದ ಬಗ್ಗೆ ಚಿಂತೆಯೇ ಇಲ್ಲದೆ ಕಾಂಗ್ರೆಸ್‌ ಮುಖಂಡರು ಪಾದಯಾತ್ರೆ ಆರಂಭಿಸಿದ್ದರು. ಒಂದೆಡೆ ಜನರ ಆರೋಗ್ಯ ರಕ್ಷಣೆ, ಮತ್ತೊಂದೆಡೆ ಅನಗತ್ಯ ರಾಜಕೀಯದಿಂದ ಕೆಲಸಕ್ಕೆ ಅಡ್ಡಿ- ಈ ಎರಡೂ ಪರಿಸ್ಥಿತಿಗಳನ್ನು ಅತ್ಯಂತ ಯಶಸ್ವಿಯಾಗಿ, ಸಂವೇದನೆ, ಸೂಕ್ಷ್ಮತೆಯಿಂದ ನಿಭಾಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರ ನಡೆ ಚಾಣಾಕ್ಷತೆಗೆ ನಿದರ್ಶನ.

ಯಾವುದೇ ಪೊಲೀಸ್‌ ಬಲ ಪ್ರಯೋಗಿಸದೆಯೂ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕನ ಮಾಡಿ, ಯಾರಿಗೂ ತೊಂದರೆಯಾಗದಂತೆ ಅವರು ಸನ್ನಿವೇಶ ನಿಭಾಯಿಸಿದ ರೀತಿ, ಒಬ್ಬ ರಾಜಕಾರಣಿ ಯಾವ ಸಂದರ್ಭ ಹೇಗೆ ತಾಳ್ಮೆಯಿಂದ ವರ್ತಿಸಬೇಕು ಎಂಬುದಕ್ಕೆ ನೈಜ ಪಾಠ. ಈ ಕಾಲವನ್ನು ಕೋವಿಡ್‌ ನಂತರದ ಕಾಲ ಎಂದು ಹೇಳಬಹುದು. ಈ ಕಾಲದಲ್ಲಿ ರಾಜ್ಯವನ್ನು ಪುನರುಜ್ಜೀವನದೊಂದಿಗೆ ಮುಂದೆ ಸಾಗಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ವೇಗ ನೀಡುವ ದೃಷ್ಟಿಯಿಂದ ಮುಖ್ಯಮಂತ್ರಿ ಬೊಮ್ಮಾಯಿ ಕಾರ್ಯೋನ್ಮುಖರಾಗಿದ್ದಾರೆ. ಇದಕ್ಕೆ ಇನ್ನಷ್ಟುವೇಗ ದೊರೆಯಲು ರಾಜ್ಯದ ಜನತೆಯ ಸಹಕಾರ ಅವರಿಗೆ ಸದಾ ದೊರೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜನಸೇವೆಯ ಆರು ತಿಂಗಳ ಹಾಗೂ ಜನ್ಮದಿನದ ಹಾರ್ದಿಕ ಶುಭಾಶಯಗಳು!

-  ಡಾ. ಕೆ.ಸುಧಾಕರ್‌

- ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Follow Us:
Download App:
  • android
  • ios