ಮಂಗಳೂರು[ಜ.20]: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಪತ್ತೆಯಾಗಿರುವ ಈ ಬಾಂಬ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ವಿಮಾನ ನಿಲ್ದಾಣ ಆವರಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಈ ನಡುವೆ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದ್ದು, ಇದು ಕರ್ನಾಟದಲ್ಲಿ ಇದುವರೆಗೂ ಸಿಕ್ಕಿರುವ ಅತ್ಯಂತ ಸುಧಾರಿತ ಸ್ಫೋಟಕ ಎನ್ನಲಾಗಿದೆ.

"

ಮಂಗಳೂರಲ್ಲಿ ಪತ್ತೆಯಾಗಿದ್ದು, ಇದು ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಇದು "IED" ಅಂದರೆ ಅತ್ಯಂತ ಸುಧಾರಿತ ಸ್ಫೋಟಕ ಸಾಧನವಾಗಿದೆ. ಬ್ಯಾಗ್ ನಲ್ಲಿ 10 ಕೆಜಿ IED ಸ್ಫೋಟಕ ತುಂಬಿಡಲಾಗಿದ್ದು, ಒಂದು ವೇಳೆ ಇದು ಸ್ಫೋಟಿಸಿದ್ದರೆ 500 ಮೀಟರ್ ವ್ಯಾಪ್ತಿಯಲ್ಲಿ ಹಾನಿಯಾಗುವ ಸಾಧ್ಯತೆ ಇತ್ತು. ಆದರೆ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ. 

ಇನ್ನು ಮಂಗಳೂರಿನತ್ತ ರಾಷ್ಟ್ರೀಯ ತನಿಖಾ ದಳ (NIA) ತಂಡ ದೌಡಾಯಿಸಿದ್ದು, ಮಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅತ್ತ ಪೊಲೀಸರು ಕೂಡಾ ವಿಮಾನ ನಿಲ್ದಾಣದ ಸುತ್ತಮುತ್ತ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಬಾಂಬ್ ಇಟ್ಟ ಶಂಕಿತರನ್ನು ಪತ್ತೆ ಹಚ್ಚುವ ಕಾರ್ಯವೂ ಆರಂಭಿಸಿದ್ದಾರೆ.

ಮಂಗಳೂರು ಏರ್ಪೋರ್ಟ್‌ನಲ್ಲಿ ಸಜೀವ ಬಾಂಬ್ ಪತ್ತೆ!

ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಿಗಿ ಭದ್ರತೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬೆನ್ನಲ್ಲೇ ಇತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. 

ಈವರೆಗೆ ಏನೇನಾಯ್ತು?

* ಬೆಳಗ್ಗೆ 8:30: ಏರ್‌ಪೋರ್ಟ್‌ಗೆ ಆಟೋದಲ್ಲಿ ಬಂದ ಶಂಕಿತ

* ಬೆಳಗ್ಗೆ 9: ಟಿಕೆಟ್ ಕೌಂಟರ್ ಬಳಿ ಬಾಂಬ್ ಇದ್ದ ಬ್ಯಾಗ್ ಇಟ್ಟು ನಾಪತ್ತೆ

* ಬೆಳಗ್ಗೆ 10: ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದ ಲ್ಯಾಪ್‌ಟಾಪ್‌ ಬ್ಯಾಗ್ ಪತ್ತೆ

* ಬೆಳಗ್ಗೆ 10.50: ಬ್ಯಾಗ್ ಇದ್ದ ಸ್ಥಳಕ್ಕೆ ಧಾವಿಸಿದ CISF ತಂಡ 

* ಬೆಳಗ್ಗೆ 11: ಬ್ಯಾಗ್‌ ಒಳಗೆ ಸಜೀವ ಬಾಂಬ್ ಪತ್ತೆ ಹಚ್ಚಿದ CISF 

* ಬೆಳಗ್ಗೆ 11: ಏರ್‌ಪೋರ್ಟ್‌ ಸುತ್ತುವರಿದ ಪೊಲಿಸರು, ಪ್ರಯಾಣಿಕರು ಸುರಕ್ಷಿತ ಸ್ಥಳಕ್ಕೆ ರವಾನೆ, ಕಮಿಷನರ್ ಡಾ. ಹರ್ಷ ದೌಡು, ಪರಿಶೀಲನೆ

* ಬೆಳಗ್ಗೆ 11 .15: ಬಾಂಬ್ ನಿಷ್ಕ್ರಿಯಗೊಳಿಸುವ ವಾಹನ ತರಿಸಿದ ಸಿಬ್ಬಂದಿ

* ಬೆಳಗ್ಗೆ 11 .15: ಬಾಂಬ್ ನಿಷ್ಕ್ರಿಯಗೊಳಿಸುವ ವಾಹನದೊಳಗೆ ಬಾಂಬ್ ಇರಿಸಿದ CISF 

* ಬೆಳಗ್ಗೆ 11 .30: ಏಟ್‌ಪೋರ್ಟ್ ಬಳಿಯ ಸಿಸಿಟಿವಿಗಳ ಪರಿಶೀಲನರ್ಟ್ರ್‌ಪೋರ್ಟ್‌ ಸಂಪರ್ಕಿಸುವ ರಸ್ತೆ ಮಾರ್ಗಗಳ ಸಂಚಾರ ಬದಲು

* ಮಧ್ಯಾಹ್ನ 1 ಗಂಟೆ: ಬಾಂಬ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭ