Asianet Suvarna News Asianet Suvarna News

ಫ್ಲೈಟ್ ಜೊತೆ BMTC ಬಸ್ ಟಿಕೆಟ್ ಕೂಡಾ ಬುಕ್ ಮಾಡಿ..!

ಫ್ಲೈಟ್ ಜೊತೆ BMTC ಬಸ್ ಟಿಕೆಟ್ | ಪ್ರಯಾಣಿಕರಿಗೆ ಅನುಕೂಲ | ಏರ್ಪೋರ್ಟ್ ಟ್ರೈನ್ ಗೆ ಪೈಪೋಟಿ ನೀಡಲು ಬಿಎಂಟಿಸಿಯಿಂದ ಪ್ಲಾನ್

BMTC plans to tie up with Flights to attract passengers to bus in Bengaluru dpl
Author
Bangalore, First Published Jan 12, 2021, 11:35 AM IST

ಬೆಂಗಳೂರು(ಜ.12): ವಿಮಾನದ ಟಿಕೆಟ್ ಬುಕ್ ಮಾಡುವಾಗಲೇ ಇನ್ನುಮುಂದೆ ಬಿಎಂಟಿಸಿ‌ ಟಿಕೆಟ್‌ನ್ನೂ ಬುಕ್ ಮಾಡಬಹುದಾಗಿದೆ. ವಿಮಾನದ ಜೊತೆಗೆ ಬಿಎಂಟಿಸಿ ವಾಯುವಜ್ರ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದ್ದು, ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ವಿಮಾನಯಾನ ಕಂಪನಿಗಳೊಂದಿಗೆ ಬಿಎಂಟಿಸಿ ಮಾತುಕತೆ ನಡೆಸಿದ್ದು, ಏರ್ಪೋರ್ಟ್ ಟ್ರೈನ್ ಗೆ ಪೈಪೋಟಿ ನೀಡಲು ಬಿಎಂಟಿಸಿಯಿಂದ ಪ್ಲಾನ್ ಯೋಜಿಸಲಾಗಿದೆ. ವಿಮಾನ ಇಳಿಯುವಾಗ್ಲೆ ಬಿಎಂಟಿಸಿ ವೋಲ್ವೋ ಬಸ್ ಟಿಕೆಟ್ ರೆಡಿ ಇದ್ರೆ ಬೇರೆ ಯೋಚನೆ ಮಾಡದೆ ಪ್ರಯಾಣಿಕರು ಬಸ್ ಹಿಡಿಯುವ ಸಾಧ್ಯತೆ ಇರುತ್ತದೆ.

ವಿದ್ಯಾರ್ಥಿಗಳು ಕಂಡಲ್ಲಿ ಬಸ್‌ ನಿಲ್ಲಿಸಲು ಸಚಿವ ಸುರೇಶ್‌ ಸೂಚನೆ

ಈಗಾಗಲೇ ಪ್ರತ್ಯೇಕವಾಗಿ ವಾಯು ವಜ್ರ ಟಿಕೆಟ್ ಬುಕ್ಕಿಂಗ್ ಆರಂಭಿಸಿರುವ ಬಿಎಂಟಿಸಿ ವಿಮಾನ ಕಂಪನಿಗಳೊಂದಿಗೆ ಒಪ್ಪಂದವಾದ್ರೆ ಬಿಎಂಟಿಸಿಗೆ ಬರುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಈಗಾಗಲೇ ಏರ್‌ಪೋರ್ಟ್‌ಗೆ ಟ್ರೈನ್ ವ್ಯವಸ್ಥೆ ಮಾಡಲಾಗಿದ್ದು, 10 ರೂಪಾಯಿಯಲ್ಲಿ ಆರಾಮವಾಗಿ ವಿಮಾನ ನಿಲ್ಧಾಣಕ್ಕೆ ಹೋಗಬಹುದು. ಇದೀಗ ಬಿಎಂಟಿಸಿ ಕೂಡಾ ನೂತನ ಯೋಜನೆಯ ಬಗ್ಗೆ ಚಿಂತಿಸುತ್ತಿದೆ.

Follow Us:
Download App:
  • android
  • ios