ಬೆಂಗಳೂರು[ಜ.27]: ನಿಗಮ ಬದಲು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಇಂದು ಸೋಮವಾರ ಫ್ರೀಡಂಪಾರ್ಕ್ ನಲ್ಲಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೀಗಾಗಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಹೌದು ಬಜೆಟ್ ನಲ್ಲಿ ತಮ್ಮನ್ನು ನಿಗಮ ಬದಲಾಗಿ, ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬೆಳಗ್ಗೆ 9 ರಿಂದ ಸಂಜೆ 5 ರ ತನಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಈ ಧರಣಿ ನಡೆಸಲಾಗುತ್ತಿದೆ. BMTC ಹಾಗೂ KSRTCಯ ಸುಮಾರು 8 ಸಾವಿರ ನೌಕರರು ಹಾಗೂ ಕುಟುಂಬಸ್ಥರು ಈ ಸತ್ಯಾಗ್ರಹದಲ್ಲಿ ಭಾಗಿ ಸಾಧ್ಯತೆ ಇದೆ.

"

ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ?

ಪ್ರಯಾಣಿಕರಿಗೆ ಸಮಸ್ಯೆಯಾಗಲ್ಲ

ಈ ಧರಣಿಯಿಂದ ಜನ ಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗಲ್ಲ ಎನ್ನಲಾಗಿದೆ. ಎಂದಿನಂತೆ ಬಸ್ ಗಳು ರಸ್ತೆಗಿಳಿಯಲಿವೆ. ಕೇವಲ ವಾರದ ರಜೆ, ಪಾಳಿ ಮುಗಿದ ಬಿಎಂಟಿಸಿ ನೌಕರರು ಭಾಗಿಯಾಗುತ್ತಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಅಂದು ಬಿಎಂಟಿಸಿ ಪಾಸ್, ಇಂದು ಆಡಿಗೆ ಬಾಸ್.. ಇದು ರಕ್ಷ್ ಪ್ರಯಾಣ

ಹೀಗಿದ್ದರೂ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿದ್ದು, ಎಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳು ಓಡಾಡಬಹುದು.