ಹೊಗೆ ಬಿಡುವ ಬಿಎಂಟಿಸಿ ಬಸ್ ಕಂಡರೆ ಶಾಪ ಹಾಕ್ತಿವಿ| ವಾಹನ ದಟ್ಟಣೆಯಿಂದ ನಗರದ ಪರಿಸರ ಹಾನಿ| ಬಸ್ ನಲ್ಲೇ ಪುಟ್ಟದೊಂದು ಉದ್ಯಾನವನ ಮಾಡಿದ ಬಿಎಂಟಿಸಿ ಚಾಲಕ| ಕಾವಲಭೈರಸಂಧ್ರ-ಯಶವಂತಪುರ ನಡುವೆ ಸಂಚರಿಸುವ ಬಿಎಂಟಿಸಿ ಬಸ್| ಬಸ್ ನಲ್ಲಿ ಗಿಡ ಬೆಳೆಸಿ ಉದ್ಯಾನವನ ಸೃಷ್ಟಿಸಿದ ಚಾಲಕ ನಾರಾಯಣಪ್ಪ| ಪರಿಸರ ರಕ್ಷಣೆ ಜಾಗೃತಿ ಮೂಡಿಸಲು ನಾರಾಯಣಪ್ಪ ಮುಂದಡಿ|

ಬೆಂಗಳೂರು(ಮೇ.08): ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದಲೇ ಪರಿಸರ ಹಾನಿಯಾಗುತ್ತಿದೆ ಎಂಬುದು ಸುಳ್ಳಲ್ಲ. ಅದರಲ್ಲೂ ಬಿಎಂಟಿಸಿ ಬಸ್ ಗಳು ಬಿಡುವ ಹೊಗೆ ಕಂಡು ಸಿಲಿಕಾನ್ ಸಿಟಿ ಜನ ಹಿಡಿ ಶಾಪ ಹಾಕುವುದು ತಪ್ಪಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಅದೇ ಬಿಎಂಟಿಸಿ ಬಸ್'ನಲ್ಲಿ ಸಣ್ಣ ಉದ್ಯಾನವನ ಮಾಡಿ ಪರಿಸರ ಜಾಗೃತಿ ಮೂಡಿಸಿದರೆ ಹೇಗಿರುತ್ತೆ?. ಹೌದು, ಬಿಎಂಟಿಸಿ ಚಾಲಕರೊಬ್ಬರು ಪರಿಸರ ರಕ್ಷಣೆ ಜಾಗೃತಿಗಾಗಿ ತಮ್ಮ ವಾಹನದಲ್ಲೇ ಪುಟ್ಟದೊಂದು ಉದ್ಯಾನವನ ಸೃಷ್ಟಿಸಿದ್ದಾರೆ.

Scroll to load tweet…

ಕಾವಲಭೈರಸಂಧ್ರ ಮತ್ತು ಯಶವಂತಪುರ ನಡುವೆ ಸಂಚರಿಸುವ ಬಿಎಂಟಿಸಿ ಬಸ್'ನಲ್ಲಿ, ಚಾಲಕ ನಾರಾಯಣಪ್ಪ ಎಂಬುವವರು ಹಲವು ಸಣ್ಣ ಗಿಡಗಳನ್ನು ನೆಟ್ಟಿದ್ದಾರೆ.

ನಿತ್ಯವೂ ಈ ಗಿಡಗಳಿಗೆ ನೀರು ಹಾಕಿ ಪೋಷಿಸುವ ನಾರಾಯಣಪ್ಪ, ಬಸ್ ಒಳಗಡೆ ಖಾಲಿ ಇರುವ ಜಾಗದಲ್ಲೆಲ್ಲಾ ಗಿಡಗಳನ್ನು ನೆಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಾರಾಯಣಪ್ಪ ಅವರು ತಮ್ಮ ಬಸ್'ನಲ್ಲಿ ಗಿಡಗಳನ್ನು ಪೋಷಿಸುತ್ತಿದ್ದಾರೆ.

ಪರಿಸರ ರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧ ಗಾಳಿಗಾಗಿ ಮರಗಳನ್ನು ಬೆಳೆಸುವುದು ಅವಶ್ಯಕ ಎಂಬ ಸಂದೇಶ ಸಾರಲು ತಾವು ಬಸ್'ನಲ್ಲಿ ಗಿಡಗಳನ್ನು ಪೋಷಿಸುತ್ತಿರುವುದಾಗಿ ನಾರಾಯಣಪ್ಪ ಹೇಳಿದ್ದಾರೆ.