ಬೆಂಗಳೂರು(ಡಿ.29): ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಹೊಸ ವರ್ಷಕ್ಕೆ ಮೂರು ದಿನ ಮುಂಚಿತವಾಗಿ ಹವಾನಿಯಂತ್ರಿತ ‘ವಜ್ರ’ ಬಸ್‌ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ.

ವಜ್ರ ಬಸ್‌ಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ 2021ರ ಜನವರಿ 1ರಿಂದ ವಜ್ರ ಬಸ್‌ಗಳ ಪ್ರಯಾಣ ದರ, ದೈನಂದಿನ ಪಾಸ್‌ ಹಾಗೂ ಮಾಸಿಕ ಪಾಸ್‌ ದರದಲ್ಲಿ ಶೇ.20ರಷ್ಟುಕಡಿತ ಮಾಡುವುದಾಗಿ ಘೋಷಿಸಿದೆ.

ಬೆಂಗಳೂರಿನ ಮೂವರು ಸೇರಿ 6 ಮಂದಿಗೆ ಹೊಸ ತಳಿಯ​ ಕೊರೋನಾ ಸೋಂಕು: ಶಾಕಿಂಗ್ ಮಾಹಿತಿ ಕೊಟ್ಟ ICMR

ಲಾಕ್‌ಡೌನ್‌ ಸಡಿಲಿಕೆ ಬಳಿ ಬಸ್‌ ಸೇವೆ ಪುನಾರಾಂಭಿಸಿರುವ ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಅದರಲ್ಲೂ ಈ ವಜ್ರ ಬಸ್‌ಗಳಿಗೆ ನಿರೀಕ್ಷಿತ ಮಟ್ಟಕ್ಕಿಂತಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಟಿಕೆಟ್‌ ದರ, ಪಾಸ್‌ ದರಗಳ ಕಡಿತದ ಪ್ರಯೋಗಕ್ಕೆ ಮುಂದಾಗಿದೆ. ಈ ಪ್ರಯಾಣ ದರ ಇಳಿಕೆ ಕೇವಲ ವಜ್ರ ಬಸ್‌ಗಳಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಸಾಮಾನ್ಯ ಬಸ್‌, ವಾಯು ವಜ್ರ ಬಸ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.