ಪುತ್ತೂರು(ಆ.27): ಬೆಂಗಳೂರಿನ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ದೊಂಬಿಯಲ್ಲಿ ಕೇವಲ ಎಸ್‌ಡಿಪಿಐ ಪಾತ್ರ ಮಾತ್ರವಲ್ಲ ಕಾಂಗ್ರೆಸ್‌ನ ಎರಡು ಬಣಗಳ ಪಾತ್ರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಅವನತಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದ್ದು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಯಾರು ಅಧ್ಯಕ್ಷರು ಎಂಬ ಕುರಿತು ತೀರ್ಮಾನ ತೆಗೆದುಕೊಳ್ಳಲಾಗದ ಪರಿಸ್ಥಿತಿ ಉದ್ಭವಿಸಿದೆ. ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಗಮನಿಸುವಾಗ ಕಾಂಗ್ರೆಸ್‌ ಮುಕ್ತ ಭಾರತ ಖಚಿತವಾಗಲಿದೆ ಎಂದು ಟೀಕಿಸಿದ್ದಾರೆ. 

ಸಿಸಿಬಿ ಮುಂದೆ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ; ಸಂಪತ್‌ ರಾಜ್‌ ವಿರುದ್ಧ ಸಿಕ್ತು ಸಾಕ್ಷಿ!

ಇನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ದೊಂಬಿಯಲ್ಲಿ ಕೇವಲ ಎಸ್‌ಡಿಪಿಐ ಪಾತ್ರ ಮಾತ್ರವಲ್ಲ. ಕಾಂಗ್ರೆಸ್‌ನ ಎರಡು ಬಣಗಳ ಪಾತ್ರವಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್‌ ಪ್ರಕರಣದ ತನಿಖೆಯ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.