ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಅಲ್ಲೋಲ - ಕಲ್ಲೋಲವಾಗಿದ್ದು, ಅತ್ತ ಕಾಂಗ್ರೆಸಿಗರು ಆಪರೇಷನ್ ಕಮಲ ಭೀತಿಯಲ್ಲಿ ರೆಸಾರ್ಟ್ ರಾಜಕಾರಣ ಆರಂಭಿಸಿದ್ದರೆ. ಇತ್ತ ಬಿಜೆಪಿ ಮುಖಂಡರೂ ಕೂಡ ರೆಸಾರ್ಟ್ ನತ್ತ ತೆರಳಿದ್ದಾರೆ. 

ಈ ಬಗ್ಗೆ ಬಿಜೆಪಿ ಎಂಎಲ್ ಸಿ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಬಿಜೆಪಿಯ ಶಾಸಕರ ಬಗ್ಗೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದರು. ಸಿಎಂ ಕುಮಾರಸ್ವಾಮಿ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದರು. ಆ ಕಾರಣ ನಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇಟ್ಟಿದ್ದು ನಿಜ. ಆದರೆ ಯಾವ ಭಯವೂ ಇಲ್ಲದ ಕಾಂಗ್ರೆಸ್ ಶಾಸಕರು ಯಾಕೆ ರೆಸಾರ್ಟ್ ಹೋದರು ಎಂದು ಬಿಜೆಪಿ ಎಂಎಲ್ ಸಿ ರವಿಕುಮಾರ್ ಹೇಳಿದ್ದಾರೆ. 

‘ಬಿಜೆಪಿಯಿಂದ ಮಂತ್ರಿಗಿರಿಯೊಂದಿಗೆ 100 ಕೋಟಿ ಆಫರ್?’

ಅಸಮಾಧಾನವೇ ಇಲ್ಲ ಎಂದು ಹೇಳುವ ಕಾಂಗ್ರೆಸ್ ಪಕ್ಷದ ನಾಲ್ಕು ಶಾಸಕರು ಯಾಕೆ ಮುಂಬೈ ನಲ್ಲಿ ಇದ್ದಾರೆ? ಕಾಂಗ್ರೆಸ್ ನಲ್ಲಿ ಎಲ್ಲವೂ ಚೆನ್ನಾಗಿಲ್ಲ ಎನ್ನುವುದು ಇದರಿಂದಲೇ ತಿಳಿಯುತ್ತದೆ.  ಬಿಜೆಪಿ ಪರಿಸ್ಥಿತಿ ಕಾಯ್ದು ನೋಡುವ ನೀತಿ ಪಾಲನೆ ಮಾಡುತ್ತದೆ ಎಂದರು.  

ಸರ್ಕಾರ ಪತನಕ್ಕೆ ರೆಡಿಯಾಗಿದೆ ಬಿಜೆಪಿ ಮಾಸ್ಟರ್ ಪ್ಲಾನ್ ?

ಲಫಂಗ ರಾಜಕಾರಣ ಎಂದು ಸಿದ್ಧರಾಮಯ್ಯ ಹೇಳಿರುವುದು ಅವರಿಗೆ ಶೋಭೆ ತರಲ್ಲ. ಇನ್ನೂ ಅನೇಕ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇದೆ. ನಾವಂತೂ ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸುವುದಿಲ್ಲ. ಅವರಾಗಿ ಬೇಸತ್ತು  ಬಿಜೆಪಿಯತ್ತ ಬಂದಾಗ ನೋಡೋಣ ಎಂದು ರವಿಕುಮಾರ್ ಹೇಳಿದ್ದಾರೆ.