ಸ್ವಪಕ್ಷೀಯರ ವಿರುದ್ಧವೇ BJP ಮುಖಂಡ ಎಚ್. ವಿಶ್ವನಾಥ್ ಗರಂ
- ಸದಾನಂದಗೌಡ, ಸಿ.ಟಿ.ರವಿ ವಿರುದ್ಧ ಬಿಜೆಪಿ ಮುಖಂಡ ಎಚ್. ವಿಶ್ವನಾಥ್ ಅಸಮಾಧಾನ
- ಸುಪ್ರೀಂಕೋರ್ಟ್ ಜಡ್ಜ್‌ಗಳು ಸರ್ವಜ್ಞರು ಎಂದೇ ಭಾವಿಸಿದ್ದೇವೆ - ವಿಶ್ವನಾಥ್
- ಸರ್ಕಾರದ ಭಾಗವಾಗಿದ್ದ ಇವರುಗಳು ಈ ರೀತಿಯ ಮಾತುಗಳನ್ನಾಡುವುದು ಸಮಂಜಸವಲ್ಲ
ಮೈಸೂರು (ಮೇ.14): ಸುಪ್ರೀಂಕೋರ್ಟ್ ಜಡ್ಜ್‌ಗಳು ಸರ್ವಜ್ಞರು ಎಂದೇ ಭಾವಿಸಿದ್ದೇವೆ. ಅವರ ಆದೇಶವನ್ನ ಪ್ರಶ್ನಿಸಿವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಎಂಎಲ್‌ಸಿ ಎಚ್. ವಿಶ್ವನಾಥ್ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಎಚ್ ವಿಶ್ವನಾಥ್, ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಜಡ್ಜ್‌ಗಳನ್ನ ಸರ್ವಜ್ಞರು ಎಂದೇ ನೋಡುತ್ತೇವೆ. ಕೇಂದ್ರಕ್ಕೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹೈಕೋರ್ಟ್‌ಗಳೆ ಸೂಚನೆ ಕೊಡುತ್ತಿವೆ. ಚಾಮರಾಜನಗರ ಘಟನೆಯಲ್ಲಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದ್ದರಿಂದಲೇ ಮೈಸೂರಿನ ಗೌರವಕ್ಕೆ ಯಾವುದೇ ಧಕ್ಕೆ ಬರಲಿಲ್ಲ ಎಂದು ವಿಶ್ವನಾಥ್ ಹೇಳಿದರು.
'ಲಸಿಕೆ ಉತ್ಪತ್ತಿ ಆಗದಿದ್ದರೆ ನೇಣು ಹಾಕಿಕೊಳ್ಳಬೇಕಾ' ಗೌಡ ಅಸಮಾಧಾನ
ಅಧಿಕಾರಿಗಳೇ ಆಗಿದ್ದರೆ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಸತ್ತವರು ಮೂರೆ ಜನ. ಇದಕ್ಕೆ ಮೈಸೂರು ಜಿಲ್ಲಾಧಿಕಾರಿಯೇ ಕಾರಣ ಎಂದು ವರದಿ ನೀಡುತ್ತಿದ್ದರು. ಆದರೆ ನ್ಯಾಯಾಂಗ ಯಾವತ್ತೂ ನ್ಯಾಯದ ಪರವಾಗಿಯೇ ಇರುತ್ತದೆ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಗೆ ನನ್ನ ಧನ್ಯವಾದ ಎಂದು ಬಿಜೆಪಿ ಮುಖಂಡ ವಿಶ್ವನಾಥ್ ಹೇಳಿದರು.
ಡಿವಿಎಸ್, ರವಿ ವಿರುದ್ಧ ನ್ಯಾಯಂಗ ನಿಂದನೆ ಕೇಸ್‌ಗೆ ಮನವಿ ...
ಸದಾನಂದಗೌಡರು ಕೇಂದ್ರ ಸಚಿವರಾಗಿರುವವರು. ಸಿ.ಟಿ.ರವಿ ಸಚಿವರಾಗಿದ್ದವರು. ಇವರೆ ಸರ್ಕಾರ. ಸರ್ಕಾರದ ಭಾಗವಾಗಿದ್ದ ಇವರುಗಳು ಈ ರೀತಿಯ ಮಾತುಗಳನ್ನಾಡುವುದು ಸಮಂಜಸವಲ್ಲ ಎಂದು ವಿಶ್ವನಾಥ್ ಹೇಳಿದರು.
ಸದಾನಂದಗೌಡರು ನೇಣು ಹಾಕಿಕೊಳ್ಳಲಾ ಎಂದರೆ ಸರ್ಕಾರವೇ ನೇಣು ಹಾಕಿಕೋಳ್ಳುತ್ತಾ? ಈ ದೇಶದಲ್ಲಿ ಕಾನೂನು ಇದೆ. ನಾಯಕರಿಂದಲೆ ಈ ರೀತಿಯ ವರ್ತನೆ ಸೂಕ್ತವಲ್ಲ ಎಂದು ಹೆಚ್.ವಿಶ್ವನಾಥ್ ಸ್ವಪಕ್ಷೀಯರ ವಿರುದ್ದವೇ ಟೀಕಾಸ್ತ್ರ ಪ್ರಯೋಗಿಸಿದರು.
ಸಿ.ಟಿ ರವಿ ಹೇಳಿದ್ದೇನು..? ಕೋವಿಡ್ ಲಸಿಕೆ ವಿಚಾರದಲ್ಲಿ ಹೇಳಿಕೆ ನೀಡಿದ್ದ ಸಿ.ಟಿ ರವಿ ನ್ಯಾಯಾಧೀಶರು ಸರ್ವಜ್ಞರಲ್ಲ. ತಜ್ಞರ ಸಮಿತಿ ನೀಡಿದ ವರದಿ ಆಧರಿಸಿ ಕೆಲಸ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸುಪ್ರೀಂಕೋರ್ಟ್ ಸಹ ಇದನ್ನು ಒಪ್ಪಿದೆ ಎಂದು ಹೇಳಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona