ರಾಜ್ಯ ಸರ್ಕಾರ ಉಸಿರಾಡೋ ಗಾಳಿಗೆ ಟ್ಯಾಕ್ಸ್ ಹಾಕೋದು ಬಾಕಿ: ಸಿ.ಟಿ.ರವಿ
ಗ್ಯಾರಂಟಿಯಿಂದಾಗಿ ರಾಜ್ಯದ ಖಜಾನೆ ದಿವಾಳಿ ಆಗಿದೆ. 11 ತಿಂಗಳಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿಲ್ಲ. ಈಗ ಸರ್ಕಾರದ ಆಸ್ತಿ ಮಾರಿ ಅಂತ ಸಲಹೆ ಕೊಡೋಕೆ ವಿದೇಶದಿಂದ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
ನವದೆಹಲಿ(ಜೂ.27): ರಾಜ್ಯ ಸರ್ಕಾರ ಎಲ್ಲದರ ದರ ಏರಿಸಿದ್ದು, ಉಸಿರಾಡೊ ಗಾಳಿಗೆ ಮಾತ್ರ ಟ್ಯಾಕ್ಸ್ ಹಾಕೋದು ಬಾಕಿ ಇದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಗ್ಯಾರಂಟಿಯಿಂದಾಗಿ ರಾಜ್ಯದ ಖಜಾನೆ ದಿವಾಳಿ ಆಗಿದೆ. 11 ತಿಂಗಳಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿಲ್ಲ. ಈಗ ಸರ್ಕಾರದ ಆಸ್ತಿ ಮಾರಿ ಅಂತ ಸಲಹೆ ಕೊಡೋಕೆ ವಿದೇಶದಿಂದ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ರಾಜ್ಯಕ್ಕೆ ವರವಾಗುವ ಬದಲು ಶಾಪವಾಗಿದೆ: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಸಿ.ಟಿ.ರವಿ
ರೈತರು ಸಂಕಷ್ಟದಲ್ಲಿ ಇದ್ದಾರೆ. ಅಧಿಕೃತವಾಗಿಯೇ ರೈತರ ಆತ್ಮಹತ್ಯೆ ಸಂಖ್ಯೆ ಈವರೆಗೆ 750 ದಾಟಿದೆ. ಬಿತ್ತನೆ ಬೀಜದ ದರ ಸಹ ಏರಿಕೆ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಬೆಲೆ ಏರಿಕೆ ಮಾಡದ ವಸ್ತು ಇಲ್ಲ ಎನ್ನುವಂತಾಗಿದೆ ಎಂದು ಟೀಕಿಸಿದರು.