ಬೆಂಗಳೂರು(ಡಿ.25): ತಾವು ಮಾಸ್ಕ್‌ ಹಾಕಿದ್ದರೂ ದಂಡ ವಿಧಿಸಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಗೃಹ ಸಚಿವರಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಗುರುವಾರ ದೂರು ನೀಡಿದ್ದಾರೆ. 

"

ಬಾಡಿಗೆ ಕಾರಿನಲ್ಲಿ ಶೇಷಾದ್ರಿಪುರ ಕಡೆಯಿಂದ ಶಾಸಕರ ಭವನಕ್ಕೆ ಗುರುವಾರ ಮಧ್ಯಾಹ್ನ 12.30ರಲ್ಲಿ ತೆರಳುತ್ತಿದ್ದೆ. ಶೇಷಾದ್ರಿಪುರ ಠಾಣೆ ಮುಂಭಾಗ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಕಾರು ನಿಲ್ಲಿಸಲಾಗಿತ್ತು. ಆಗ ಕಾರಿನ ಟಿಂಟ್‌ ಗ್ಲಾಸ್‌ ಇಳಿಸುವಂತೆ ಬಲವಂತಪಡಿಸಿದ ಪೊಲೀಸರು, ಕಾರಿನೊಳಗೆ ಮಾಸ್ಕ್‌ ಧರಿಸಿ ಕುಳಿತಿದ್ದ ನನಗೆ 250 ದಂಡ ವಿಧಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಇನ್ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೈಟೆಕ್‌: ದಿನದ 24 ಗಂಟೆ ಸೇವೆ

ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಮರು ಮಾತನಾಡದೆ ದಂಡ ಪಾವತಿಸಿದ್ದೇನೆ. ವಿನಾ ಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕುಮಾರಸ್ವಾಮಿ ಕೋರಿದ್ದಾರೆ.