ಪೊಲೀಸ್ ವಶದಿಂದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬಿಡುಗಡೆ | 1.25 ಕೋಟಿ ರೂ. ಚೆಕ್ ಬೌನ್ಸ್ ಆರೋಪ ಎದುರಿಸುತ್ತಿದ್ದ ಗೂಳಿಹಟ್ಟಿ |ಇಂದು ವಾರಂಟ್ ರಿಕಾಲ್ ಮಾಡಿಸಲು ಬಂದಿದ್ದ ಗೂಳಿಹಟ್ಟಿ ಶೇಖರ್ .

ಬೆಂಗಳೂರು, (ಮಾ.15): ಚೆಕ್ ಬೌನ್ಸ್ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಬಿಡುಗಡೆಗೊಳಿಸಲಾಗಿದೆ. 

100 ರೂ. ವಾರೆಂಟ್ ರಿಕಾಲ್ ದಂಡ ಪಾವತಿಸಿಕೊಂಡು ಗೂಳಿಹಟ್ಟಿ ಶೇಖರ್ ಅವರನ್ನು ಬಿಡುಗಡೆಗೊಳಿಸಿ ಜನಪ್ರತಿಧಿಗಳ ನ್ಯಾಯಾಲಯ ಸೂಚಿಸಿದೆ.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ 309 ಪ್ರಕರಣ ದಾಖಲು

ಇಂದು (ಶುಕ್ರವಾರ) ಜನಪ್ರತಿನಿಧಿಗಳ ಕೋರ್ಟ್ ಸೂಚನೆ ಮೇರೆಗೆ ಗೂಳಿಹಟ್ಟಿ ಶೇಖರ್ ಅವರನ್ನು ಪೊಲೀರು ವಶಕ್ಕೆ ಪಡೆದುಕೊಂಡಿದ್ದರು. 

1.25 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣದಲ್ಲಿ ವಾರಂಟ್ ರಿಕಾಲ್ ಮಾಡಿಸಿಕೊಳ್ಳಲು ಕೋರ್ಟ್ ಗೆ ಹಾಜರಾಗಿದ್ದ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸಿತ್ತು.

ಚೆಕ್ ಬೌನ್ಸ್ ಆರೋಪ ಎದುರಿಸುತ್ತಿದ್ದ ಗೂಳಿಹಟ್ಟಿ ಶೇಖರ್, ವಿಚಾರಣೆಗೆ ಹಾಜರಾಗದಿದ್ದಕ್ಕೆ ಜಾಮೀನು ರಹಿತ ವಾರಂಟ್ ನೀಡಿತ್ತು. ಅದರಂತೆ ಇಂದು ವಾರಂಟ್ ರಿಕಾಲ್ ಮಾಡಿಸಲು ಬಂದಿದ್ದ ಗೂಳಿಹಟ್ಟಿ ಶೇಖರ್ ಅವರನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲ ಸೂಚಿಸಿತ್ತು.