Asianet Suvarna News Asianet Suvarna News

ಪ್ರಿಯಾಂಕ್ ಖರ್ಗೆ ನಾಯಕ ಅಲ್ಲ, ನಾನ್ ಸೆನ್ಸ್ : ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಕಿಡಿ

ಚಿತ್ತಾಪುರದಲ್ಲಿ ಕೋಲಿ ಸಮಾಜದ ಯುವಕ ದೇವಾನಂದ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ಒಂದು ತಿಂಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕೊಡುವುದು ಒತ್ತಟ್ಟಿಗಿರಲಿ, ಮನವಿ ಪಡೆಯುವ ಸೌಜನ್ಯವೂ ಈ ಸಚಿವನಿಗಿಲ್ಲ. ಈತ ನಾಯಕ ಅಲ್ಲ, ನಾನ್‌ಸೆನ್ಸ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಆಕ್ರೋಶ ವ್ಯಕ್ತಪಡಿಸಿದರು.

BJP Leader Manikanth rathod outraged agains minister priyank kharge at kalaburagi rav
Author
First Published Nov 3, 2023, 1:02 PM IST

ಬೆಂಗಳೂರು (ನ.3): ಚಿತ್ತಾಪುರದಲ್ಲಿ ಕೋಲಿ ಸಮಾಜದ ಯುವಕ ದೇವಾನಂದ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ಒಂದು ತಿಂಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕೊಡುವುದು ಒತ್ತಟ್ಟಿಗಿರಲಿ, ಮನವಿ ಪಡೆಯುವ ಸೌಜನ್ಯವೂ ಈ ಸಚಿವನಿಗಿಲ್ಲ. ಈತ ನಾಯಕ ಅಲ್ಲ, ನಾನ್‌ಸೆನ್ಸ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದೇವಾನಂದ ಆತ್ಮಹತ್ಯೆ ಪ್ರಕರಣದಲ್ಲಿ ಸಮುದಾಯದವರು ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ರಸ್ತೆ ಮೇಲೆ ಉರುಳಾಡಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸದ, ಕನಿಷ್ಟ ಮನವಿ ಸ್ವೀಕರಿಸದ ಇವರು ನಾಯಕ ಹೇಗಾಗ್ತಾರೆ? ಹೀಗಾಗಿ ಇವರು ನಾಯಕ ಅಲ್ಲ, ನಾನ್‌ಸೆನ್ಸ್ ಎನ್ನಬೇಕಾಗುತ್ತದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡೊಲ್ಲ: ಸಂಸದೆ ಸುಮಲತಾ ಅಂಬರೀಶ್

ಈ ಸರ್ಕಾರದಲ್ಲಿ ಹಿಂದು ಹೋರಾಟಗಾರರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹಿಂದೂ ಪರ ಹೋರಾಟಗಾರ ಆಂದೋಲಾ ಸ್ವಾಮೀಜಿಗೆ ನಿರಂತರ ಬೆದರಿಕೆ ಹಾಕಲಾಗುತ್ತಿದೆ. ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ಹಲ್ಲೆ ಮಾಡುವ ರೀತಿ ಮಾತನಾಡಿದ್ದಾನೆ. ಕಾಂಗ್ರೆಸ್ ನಲ್ಲಿರುವ ಲಿಂಗಾಯತ ನಾಯಕರೇ ಎಲ್ಲಿದ್ದಿರಿ? ಧರ್ಮ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸ್ವಾಮಿಜಿಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಧರ್ಮ ರಕ್ಷಣೆಗಾಗಿ ಆಂದೋಲಾ ಸ್ವಾಮಿಜಿ ಪರವಾಗಿ ನಿಲ್ಲಿರಿ.  ಲಿಂಗಾಯತ ನಾಯಕರು ಕುರ್ಚಿ ಆಸೆಗಾಗಿ ಸುಮ್ಮನಿದ್ದಿದ್ದಿರಾ? ಎಂದು ಕಾಂಗ್ರೆಸ್ ನ ಲಿಂಗಾಯತ ನಾಯಕರಿಗೆ ಟಾಂಗ್ ನೀಡಿದರು.

ಜೆಡಿಎಸ್ ವಿರುದ್ಧವೇ ಹೋರಾಡಿದ್ದ ಸುಮಲತಾ ಈಗ ಅವರಿಗೆ ಸಪೋರ್ಟ್..?

Follow Us:
Download App:
  • android
  • ios