ಹೌದು ಸಿದ್ದರಾಮಯ್ಯ ಮತಾಂಧ: ಈಶ್ವರಪ್ಪ!
‘ಹೌದು.. ಸಿದ್ದು ಮತಾಂಧ..’! ಸಿದ್ದರಾಮಯ್ಯ ಮತಾಂಧ ಎಂದ ನಳಿನ್ ಕುಮಾರ್ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ! ಸಿದ್ದರಾಮಯ್ಯ ಒಬ್ಬ ಮತಾಂಧ ಅನ್ನೋದ್ರಲ್ಲಿ ಅನುಮಾನವಿಲ್ಲ! ಬಾಗಲಕೋಟೆ ಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆ
ಬಾಗಲಕೋಟೆ(ನ.10): ಸಿದ್ದರಾಮಯ್ಯ ಒಬ್ಬ ಮತಾಂಧ ಎಂಬ ನಳಿನ್ ಕುಮಾರ್ ಹೇಳಿಕಯನ್ನು ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಕುರಿತು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಮತಾಂಧ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಅಂತ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯರನ್ನು ಟಿಪ್ಪುಗೆ ಹೋಲಿಕೆ ಬಗ್ಗೆ ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ಮಾತನಾಡೋದಿಲ್ಲ ಅಂತ ಹೇಳಿದ್ದಾರೆ.
ಸಿದ್ದರಾಮಯ್ಯ ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ಸಿಂಧೂರ ಲಕ್ಷಣ, ಟಿಪ್ಪು ಹೋಲಿಕೆ ವಿಚಾರವಾಗಿ ಕೆ.ಎಸ್ ಈಶ್ವರಪ್ಪ ಗದಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರನ್ನ ಟಿಪ್ಪುವಿಗೆ ಹೋಲಿಸುವ ದುಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಧಿಕಾರ, ಖುರ್ಚಿ ಕಳೆದುಕೊಂಡರೂ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ. ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ ರಾಷ್ಟ್ರ ಭಕ್ತರನ್ನ ಕೊಲೆ ಮಾಡಲಿಲ್ಲ. ಸ್ವಾತಂತ್ರ್ಯಕ್ಕೊಸ್ಕರ ಬ್ರಿಟಿಷರ ವಿರುದ್ಧ ಹೋರಾಡಿ ರಾಷ್ಟ್ರ ದ್ರೋಹಿಗಳನ್ನ ಕೊಂದರು.
ಸ್ವಾತಂತ್ರ್ಯ ಹೋರಾಟಗಾರರನ್ನ ಟಿಪ್ಪು ಗೆ ಹೋಲಿಸುತ್ತಾರೆ ಅಂದರೆ ಕಾಂಗ್ರೆಸ್ ದುಸ್ಥಿತಿ ಎಲ್ಲಿಗೆ ಬಂತು? ಸಿದ್ದರಾಮಯ್ಯ ಭಂಡ ರಾಜಕಾರಣಿ, ಇಂತವರನ್ನ ಕರ್ನಾಟಕದಲ್ಲಿ ನೋಡಿಯೇ ಇಲ್ಲ. ಸ್ವಯಂಘೋಷಿತ ಹಿಂದುಳಿದ ನಾಯಕ, ದಲಿತ, ಅಹಿಂದ್ ನಾಯಕ ಎಂದುಕೊಂಡು ತಿರುಗುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನ ಚಾಮುಂಡಿನಲ್ಲಿ ಮನೆಗೆ ಕಳುಹಿಸಿದರು. ಬಾದಾಮಿನಲ್ಲಿ ಸಿದ್ದರಾಮಯ್ಯ ಹಣೆಬರಹ ಗೊತ್ತಿಲ್ಲ. ಮುಂದೆ ಗೊತ್ತಾಗುತ್ತೆ ಅಲ್ಲಿಂದಲೂ ಓಡಿಸ್ತಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.