Asianet Suvarna News Asianet Suvarna News

'ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ಅತೀವ ನೋವು ತಂದಿದೆ'

* ನಂಜನಗೂಡು ದೇಗುಲ ತೆರವು ವಿವಾದ
* ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
* ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ನನಗೆ ಅತೀವ ನೋವು ತಂದಿದೆ ರವಿ

BJP Leader CT Ravi Reacts On Mysuru temple demolition rbj
Author
Bengaluru, First Published Sep 14, 2021, 4:32 PM IST
  • Facebook
  • Twitter
  • Whatsapp

ಮೈಸೂರು, (ಸೆ.14): ನಂಜನಗೂಡು ದೇಗುಲ ತೆರವು ಮಾಡಿರುವುದಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಜಿಲ್ಲಾಡಳಿತದ ನಡೆಗೆ ಹಿಂದೂಪರ ಸಂಘಟನೆಗಳು ಸಿಡಿದೆದ್ದಿವೆ.

ಇನ್ನು ಈ ಕುರಿತು ಇಂದು (ಸೆ.14) ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ದೇವಸ್ಥಾನ ತೆರವುಗೊಳಿಸಿರುವುದು ಸರಿಯಲ್ಲ. ಈ ಘಟನೆ ಕೋಟ್ಯಾಂತರ ಜನರಿಗೆ ನೋವು ತಂದಿದೆ ಎಂದು ಅಸಮಾಧಾನ ಹೊರಹಾಕಿದರು.

ದೇಗುಲ ಧ್ವಂಸ : ಇದಕ್ಕೆಲ್ಲಾ ಬಿಜೆಪಿ ಸರ್ಕಾರವೇ ಕಾರಣ

ದೇಗುಲ ತೆರವು ಮಾಡುವುದಕ್ಕು ಒಂದು ಗೌರವಯುತವಾದ ರೀತಿ ನೀತಿ ಇರುತ್ತೆ. ಆದರೆ ಹಬ್ಬದ ದಿನವೇ ದೇಗುಲ ತೆರವುಗೊಳಿಸಿರೋದು ನಮಗೆಲ್ಲ ನೋವು ತಂದಿದೆ ಎಂದರು.

ನಾನು ಮುಖ್ಯಮಂತ್ರಿಗಳ ಜೊತೆ ಮಾತಾಡ್ತೇನೆ. ಅವರ ಮುಂದೆ ನನ್ನ ಭಾವನೆಗಳನ್ನ ವ್ಯಕ್ತಪಡಿಸುತ್ತೇನೆ. ಅನುಷ್ಠಾನಗೊಳಿಸಲು ಸಾಧ್ಯವಾಗದ ನ್ಯಾಯಲಾಯದ ಹಲವು ತೀರ್ಪುಗಳ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಹಾಗೆಯೇ ಈ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios