Asianet Suvarna News Asianet Suvarna News

ನಿಮ್ಮ ಮೈಯಲ್ಲಿ ಹರೀತಿರೋದು ಹಸಿರೋ, ಹಿಂದು ರಕ್ತವೋ? ಸಿಎಂ ವಿರುದ್ಧ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪ!

ಸಿದ್ದರಾಮಯ್ಯನವರೇ ನಿಮ್ಮ ಮಗ ಯತೀಂದ್ರ ರನ್ನು ಮುಸ್ಲಿಂ ಗುಂಡಾಗಳು ಕೊಲೆ ಮಾಡಿದ್ದರೆ ಏನು ಅನಿಸುತ್ತಿತ್ತು? ನಿಮ್ಮ ಪತ್ನಿಗೆ ಏನು ಅನಿಸುತ್ತಿತ್ತು' ಎಂದು ಬಿಜೆಪಿ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

BJP ex minister KS Eshwarappa controversy statement agains cm siddaramaiah at shivamogga rav
Author
First Published Oct 12, 2023, 5:08 PM IST

ಶಿವಮೊಗ್ಗ (ಅ.12): 'ಸಿದ್ದರಾಮಯ್ಯನವರೇ ನಿಮ್ಮ ಮಗ ಯತೀಂದ್ರ ರನ್ನು ಮುಸ್ಲಿಂ ಗುಂಡಾಗಳು ಕೊಲೆ ಮಾಡಿದ್ದರೆ ಏನು ಅನಿಸುತ್ತಿತ್ತು? ನಿಮ್ಮ ಪತ್ನಿಗೆ ಏನು ಅನಿಸುತ್ತಿತ್ತು' ಎಂದು ಬಿಜೆಪಿ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ವಿವಾದ 1:

ಶಿವಮೊಗ್ಗದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು,  ಶಿವಮೊಗ್ಗದ ಹರ್ಷ ಹಿಂದೂ ಕಾರ್ಯಕರ್ತನನ್ನು  ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ. ಅದೇ ರೀತಿ ನಿಮ್ಮ ಮಗನನ್ನು ಗೂಂಡಾಗಳು ಕೊಲೆ ಮಾಡಿದಿದ್ದರೆ? ಡಿಕೆಶಿ ಅವರೇ  ಅದೇ ರೀತಿ ನಿಮ್ಮ ಸಹೋದರ ಡಿಕೆ ಸುರೇಶ್ ರನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ರೆ ಏನು ಅನಿಸುತ್ತಿತ್ತು? ನಿಮಗೆ ಹೊಟ್ಟೆಗೆ ಬೆಂಕಿಬಿದ್ದಂತೆ ಆಗ್ತಿರಲಿಲ್ಲವೆ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮಹಿಷಾ ದಸರಾಗೆ ಸರ್ಕಾರ ಅನುಮತಿ: ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಏನು ಹೇಳಿದ್ರು?

ವಿವಾದ 2:

ಏಕರೂಪ ನಾಗರಿಕ ಸಹಿತೆ ಕಾನೂನು ಜಾರಿ ಆಗಲಿದೆ. ಜಾರಿಯಾದ್ರೆ ಎರಡನೇ ಮದುವೆ ಆದರೆ ಕಾನೂನು ಕ್ರಮವಾಗುತ್ತೆ. ಹಿಂದೂಗಳಿಗೆ ಹಮ್ ದೊ , ಹಮಾರಾ ದೋ.. ಮುಸ್ಲಿಮರಿಗೆ ಹಮ್ ಪಾಂಚ್ ಹಮಾರಾ ಪಚ್ಚಿಸ್! ಈ ದೇಶ ಉಳಿಯಲು ನನ್ನಂತೆ 5 ಮಕ್ಕಳು 8 ಮೊಮ್ಮಕ್ಕಳು ಗಳನ್ನಾದರೂ ಮಾಡಿ ಕೊಳ್ಳಿ ಎಂದು ಈಶ್ವರಪ್ಪ ಕರೆ ನೀಡಿದರು.

ದೇಶದ್ರೋಹಿಗಳಿಗೆ ಸಿಎಂ ರಕ್ಷಣೆ:

ನಮ್ಮ ಜೊತೆಗೆ ಮುಸ್ಲಿಮರು ಮರ್ಯಾದೆಯಿಂದ ಬದುಕಿ ಬಾಳಬೇಕು. ನಮ್ಮ ಅನ್ನ  ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಇಂಥ ದೇಶದ್ರೋಹಿ ಮುಸ್ಲಿಮರಿಗೆ ಸಿದ್ದರಾಮಯ್ಯ ರಕ್ಷಣೆ ಕೊಡ್ತಾರೆ. ಸಿದ್ದರಾಮಯ್ಯನವರ ಏಜೆಂಟರು ಎಸ್ ಪಿ, ಡಿ ಸಿ ನಮಗೆ ರಕ್ಷಣೆ  ಕೊಡುತ್ತಾರೆ ಎಂದು ಮುಸ್ಲಿಮರ ನಂಬಿಕೆ ಹೀಗಾಗಿ ದೇಶ ವಿರೋಧಿ ಕೃತ್ಯಗಳಲ್ಲಿ ಕಾನೂನು ಭಯವಿಲ್ಲದೆ ತೊಡಗಿಕೊಂಡಿದ್ದಾರೆ. ಹರ್ಷ ಹತ್ಯೆ ಘಟನೆ ವೇಳೆ ಹಿಂದೂಗಳು ಮುಸ್ಲಿಮರ ಕೇರಿಗೆ ನುಗ್ಗಿದರೆ ಮಾರಿ ಜಾತ್ರೆಯಲ್ಲಿ ಕುರಿ ಕತ್ತರಿಸಿದಂತೆ ಕತ್ತರಿಸಿ ಹಾಕುತ್ತಿದ್ದರು. ಆದರೆ ಹಿಂದುಗಳು ಕಾನೂನು ಕೈಗೆತ್ತಿಕೊಳ್ಳುವವರು ಅಲ್ಲ ಎಂದರು.

ಸಿದ್ದರಾಮಯ್ಯ ಮೈಯಲ್ಲಿ ಯಾವ ರಕ್ತ ಹರಿತಿದೆ?

ರಾಜ್ಯದ ಕುತಂತ್ರಿ ಸಿಎಂ ಎಂದರೆ ಅದು ಸಿದ್ದರಾಮಯ್ಯ. ಸಿದ್ದರಾಮಯ್ಯ ಒಂದು ಮಾತು ಹೇಳ್ತೀನಿ. ಸಿದ್ದರಾಮಯ್ಯನ  ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯಾ? ಹಿಂದು ರಕ್ತ ಹರಿಯುತ್ತಿದೆಯಾ ತೀರ್ಮಾನ  ಆಗಬೇಕಿದೆ. ಪಾಕ್ ಸೇರಿ ಅಖಂಡ ಭಾರತ  ಕನಸು ಇತ್ತು. ದೇಶ  ದ್ರೋಹಿ  ಮುಸ್ಲಿಂರು ಇದ್ದಾರೆ. ಹಸಿರು ಬಣ್ಣ  ಕಿತ್ತಾಕಿ ಕೇಸರಿ ಬಣ್ಣ ಬರುವರರಿಗೆ  ಬಿಜೆಪಿ ಹೋರಾಟ  ನಡೆಸುತ್ತದೆ. ಸಿದ್ದರಾಮಯ್ಯ ಅವರೇ ತಾಕತ್ತು  ಇದ್ದರೆ ನಿಮಗೆ ಯಾವ ಬಣ್ಣ ಬೇಕು ಆಯ್ಕೆ ಮಾಡಿ ಸವಾಲು ಹಾಕಿದರು.

ಮಹಿಷಾ ದಸರಾಕ್ಕೆ ರಾಜ್ಯ ಸರ್ಕಾರ ಅನುಮತಿ; ಚಿಂತಕ ಚಕ್ರವರ್ತಿ ಸೂಲಿಬೆಲೆ ಕೆಂಡಾಮಂಡಲ!

ಸಿದ್ದರಾಮಯ್ಯ ಈ ಮೊದಲು ದೇವಸ್ಥಾನಕ್ಕೆ ಹೋಗ್ತಿರಲಿಲ್ಲ. ಈಗ ಕದ್ದು ಮುಚ್ಚಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಈಗ ತಿಲಕ ಇಟ್ಟು ಕೊಂಡಿದ್ದಾರೆ ಈಗ ಹಿಂದು ಸಿದ್ದು  ಆಗಿದ್ದಾರೆ. ಚುನಾವಣೆ ಬಂದಾಗ ಇಂಥ ನಾಟಕ ಮಾಡುವ ಸಿದ್ದರಾಮಯ್ಯರಿಂದ ಹಿಂದುಗಳ ರಕ್ಷಣೆ  ಅಸಾಧ್ಯ

Follow Us:
Download App:
  • android
  • ios