*   ಸೋಷಿಯಲ್‌ ಮಿಡಿಯಾದಲ್ಲಿ ದ್ವೇಷಕಾರಕ ಪೋಸ್ಟ್‌*   ಡಿ.ಕೆ.ಶಿವಕುಮಾರ್‌ ವಿರುದ್ಧ ಕ್ರಮಕ್ಕೆ ಆಗ್ರಹ*   ಹಿಂಸೆ, ದ್ವೇಷ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಮಾದರಿಯ ವಿಷಯಗಳ ಬಗ್ಗೆ ಪೋಸ್ಟ್‌ 

ಬೆಂಗಳೂರು(ಫೆ.10): ಸಾಮಾಜಿಕ ಜಾಲತಾಣದಲ್ಲಿ(Social Media) ಜನರ ನಡುವೆ ದ್ವೇಷ ಉಂಟು ಮಾಡುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಸುಳ್ಳು ಸುದ್ದಿಗಳನ್ನು ಪೋಸ್ಟ್‌ ಮಾಡುತ್ತಿರುವ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ(BJP) ಕಾನೂನು ಪ್ರಕೋಷ್ಠದಿಂದ ಬುಧವಾರ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌(Praveen Sood) ಅವರಿಗೆ ದೂರು ನೀಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಿಂಸೆ, ದ್ವೇಷ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಮಾದರಿಯ ವಿಷಯಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

News Hour: ವಿಸ್ತೃತ ಪೀಠಕ್ಕೆ ಹಿಜಾಬ್ ಫೈಟ್ ವರ್ಗಾವಣೆ ಮಾಡಿದ ಹೈಕೋರ್ಟ್

ರಾಜ್ಯ ಬಿಜೆಪಿ ಕೋಶಾಧ್ಯಕ್ಷರಾದ ಸುಬ್ಬನರಸಿಂಹ, ಬೆಂಗಳೂರು ದಕ್ಷಿಣ ಜಿಲ್ಲೆ ಕಾನೂನು ಪ್ರಕೋಷ್ಠದ ಸಂಚಾಲಕ ಯಶವಂತ್‌ ಮತ್ತು ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕ ವಿನೋದ್‌ ಕೃಷ್ಣಮೂರ್ತಿ ಈ ವೇಳೆ ಉಪಸ್ಥಿತರಿದ್ದರು.

ತಾರಕಕ್ಕೇರಿದ ಹಿಜಾಬ್ ವಿವಾದ, ಬೆಂಕಿಗೆ ತುಪ್ಪ ಸುರಿದ ಡಿಕೆಶಿ ಟ್ವೀಟ್

ಶಿವಮೊಗ್ಗ: ಉಡುಪಿಯ(Udupi) ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್(Hijab)- ಕೇಸರಿ ಶಾಲು ಗಲಾಟೆ ಇದೀಗ ಇತರ ಜಿಲ್ಲೆಗಳಿಗೂ ವ್ಯಾಪಿಸಿದ್ದು, ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಸಾಧ್ಯವಾಗದಂತಾಗಿದೆ. ವಿದ್ಯಾರ್ಥಿಗಳು ಅನ್ಯಕೋಮಿನ ವಿದ್ಯಾರ್ಥಿಗಳ ವಿರುದ್ಧ ಕಿಡಿ ಕಾರುತ್ತಿದ್ದು, ಕಲ್ಲು ತೂರಾಟ ಸಾಮಾನ್ಯವಾಗಿದೆ. ಈ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ರಾಜ್ಯಾದ್ಯಂತ(Karnataka) ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

ಇನ್ನು ಈ ವಿವಾದದ ನಡುವೆಯೇ ಶಿವಮೊಗ್ಗದ(Shivamogga) ಕಾಲೇಜೊಂದರಲ್ಲಿ ರಾಷ್ಟ್ರಧ್ವಜ(National Flag) ಹಾರಿಸುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ(Saffron flag) ಹಾರಿದ ವಿಚಾರ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹೌದು ಕಾಲೇಜಿನ ಎದುರು ಇದ್ದ ಧ್ವಜಸ್ತಂಭವೊಂದಕ್ಕೆ ಕೇಸರಿ ಬಾವುಟ ಏರಿಸಿ ಹಾರಿಸಲು ವಿದ್ಯಾರ್ಥಿಯೋರ್ವ ಯತ್ನಿಸಿದ್ದು, ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಹಿಜಾಬ್‌- ಕೇಸರಿ ಶಾಲು ವಿವಾದದ ಘಟನೆಯ ಸಂಘರ್ಷಕ್ಕೆ ಮೂಲ ಕಾರಣವಾಯಿತು. 

Hijab Row ಹಿಜಾಬ್ ಬಗ್ಗೆ ವಿದ್ಯಾರ್ಥಿನಿಯರಿಗೆ ಟ್ರೈನಿಂಗ್ ಕೊಡಲಾಗಿದೆ, ಬಿಜೆಪಿ ಶಾಸಕ ಗಂಭೀರ ಆರೋಪ

ಬೆಳಗ್ಗೆ ಬಾಪೂಜಿ ನಗರದ ಸರ್ಕಾರಿ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳು(Students) ಜಮಾವಣೆಗೊಂಡ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯಾರ್ಥಿಯೋರ್ವ ಕಾಲೇಜಿನ ಎದುರು ಇದ್ದ ಧ್ವಜಸ್ತಂಭವನ್ನು ಸರಸರನೆ ಏರಿ, ಕೇಸರಿ ಬಾವುಟ ಕಟ್ಟಲು ಯತ್ನಿಸಿದ. ಈ ವೇಳೆ ಅದೆಲ್ಲಿಂದಲೋ ಎರಡು ಮೂರು ಕಲ್ಲುಗಳು ಆತನೆಡೆಗೆ ತೂರಿ ಬಂದವು. ತಕ್ಷಣವೇ ಆತ ಕೆಳಗಿಳಿದ. ಆದರೆ ಕಲ್ಲುಗಳ ತೂರಾಟಕ್ಕೆ ಇದು ನಾಂದಿಯಾಯಿತು. ಬಳಿಕ ಮತ್ತಷ್ಟುಕಲ್ಲು ತೂರಿ ಬಂದವು. ಈ ವೇಳೆ ಪೊಲೀಸರು ಕಲ್ಲು ತೂರಿದ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದರು. ಬಳಿಕ ಎಲ್ಲಿಯೂ ಯಾವುದೇ ಮತ ಪಂಥ, ಸಂಘಟನೆಯ ಧ್ವಜ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

ರಾಷ್ಟ್ರ ಧ್ವಜ ಕೆಳಕ್ಕಿಳಿಸಿ, ಕೇಸರಿ ಧ್ವಜ ಹಾರಾಟ ಎಂದ ಡಿಕೆಶಿ

ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ ವಿಚಾರದ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವೀಟ್(Tweet) ಒಂದನ್ನು ಮಾಡಿದ್ದು, ಕಾಲೇಜು ಆವರಣದಲ್ಲಿದ್ದ ಧ್ವಜಸ್ತಂಭದಲ್ಲಿದ್ದ ಕೇಸರಿ ಬಾವುಟ ಕೆಳಕ್ಕಿಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದಿದ್ದಾರೆ. ಈ ಮತ್ತಷ್ಟು ಗಲಭೆಗೆ ಸಾಕ್ಷಿಯಾಯಿತು.ಇದೇ ವೇಳೆ ಪರಿಸ್ಥಿತಿ ನಿಯಂತ್ರಿಸಲು ಕನಿಷ್ಟ ಒಂದು ವಾರ ರಜೆ ಘೋಷಿಸಬೇಕು. ಆನ್‌ಲೈನ್ ಮೂಲಕ ತರಗತಿಗಳನ್ನು ಮುಂದುವರೆಸಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.