ವಿಧಾನಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಶಾಸಕರ ಆಗ್ರಹ: ಕಾರ್ಯದರ್ಶಿಗೆ ನೋಟಿಸ್
ವಿಧಾನಸಭಾ ಅಧ್ಯಕ್ಷರು ಸದಸನದ ವಿಶ್ವಾಸವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವಂತೆ ಶಾಸಕರು ಆಗ್ರಹಿಸಿದ್ದಾರೆ.
ಬೆಂಗಳೂರು (ಜು.19): ಕರ್ನಾಟಕ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದ ರುದ್ರಪ್ಪ ಲಮಾಣಿ ಅವರು ಇದೇ ಮೊದಲ ಬಾರಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಅನುಪಸ್ಥಿತಿಯಲ್ಲಿ ಸದನವನ್ನು ಮುನ್ನಡೆಸುತ್ತಿದ್ದರು. ಆದರೆ, ಈ ವೇಳೆ ಸದನದಲ್ಲಿ ಕೆಲ ಶಾಸಕರು ಸರ್ಕಾರದ ಬಿಲ್ ಮಂಡನೆಗೆ ಬಿಡದೇ ಅದರ ಪ್ರತಿಯನ್ನು ಹರಿದು ಹಾಕಿ ಬೀಸಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದನದ ವಿಶ್ವಾಸವನ್ನು ಕಳೆದುಕೊಂಡಿರುವ ಸಭಾದ್ಯಕ್ಷರನ್ನು ಕೂಡಲೇ ವಜಾಗೊಳಿಸಲು ಅವಿಶ್ವಾಸ ನಿರ್ಣಯವನ್ನು ಕೈಗೊಳ್ಳುವಂತೆ ಶಾಸಕರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಇನ್ನೂ ಎರಡು ತಿಂಗಳು ಅಧಿಕಾರ ಪೂರ್ಣಗೊಳಿಸಿಲ್ಲ. ಆದರೆ, ಕಳೆದ ಒಂದೂವರೆ ತಿಂಗಳ ಹಿಂದೆ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾಗಿರುವ ಯು.ಟಿ. ಖಾದರ್ ಅವರು ಸದಸನದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲು ಅವಕಾಶ ನೀಡುವಂತೆ ರಾಜ್ಯ ವಿಧಾನಸಭಾ ಕಾರ್ಯದರ್ಶಿಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಪತ್ರವನ್ನು ಬರೆದಿದ್ದಾರೆ.
Breaking: ಕರ್ನಾಟಕ ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು
ಕಾಂಗ್ರೆಸ್ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ತಿದೆ: ಇನ್ನು ವಿಧಾನಸಭಾ ಸ್ಪೀಕರ್ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡುವ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜು.17,18 ರಂದು ಕಾಂಗ್ರೆಸ್ ರಾಜಕೀಯ ಸಭೆಯಲ್ಲಿ ಅಧಿಕಾರ ದುರುಪಯೋಗ ಆಗಿದೆ. ಮಾನ ಮರ್ಯಾದೆ ಬಿಟ್ಟು ಪ್ರಿನ್ಸಿಪಲ್ ಸೆಕ್ರೆಟರಿಯಂಥ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವ್ರನ್ನ ರಾಜ್ಯ ಅಭಿವೃದ್ದಿ ಮಾಡಲು ಜನ ಆರಿಸಿ ಕಳಿಸಿದ್ದಾರೆ. ಹಿಂದೆಂದೂ ಕೇಳರಿಯದಂಥ ಘಟನೆ ನಡೆದಿದೆ. ಸೇವಕರಂತೆ ಐಎಎಸ್ ಅಧಿಕಾರಿಗಳನ್ನ ಎಲ್ಲೂ ನೇಮಕ ಮಾಡಿಲ್ಲ. ಪ್ರೊಟೋಕಾಲ್ ಅಧಿಕಾರಿಗಳನ್ನ ಬಿಟ್ಟು ಇವ್ರನ್ನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸ್ಪೀಕರ್ ಕಾಂಗ್ರೆಸ್ ಔತಣಕೂಟಕ್ಕೆ ಹೋಗಿ ಬಂದಿದ್ದಾರೆ: ಇದರ ಬೆನ್ನಲ್ಲೇ ವಿಧಾನಸಭೆಯ ಸ್ಪೀಕರ್ ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ನಾವು ನ್ಯಾಯವನ್ನ ಕೇಳಿದ್ವಿ, ಆದ್ರೆ ಕೊಡ್ಲಿಲ್ಲ. ವಿಧಾನಸಭಾ ಸ್ಪೀಕರ್ ಅವರು ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೆ ಹೋಗಿ ಬಂದಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಹರಾಜಾಗಿದೆ. ಅವಿಶ್ವಾಸಕ್ಕೆ ಜೆಡಿಎಸ್ ಬೆಂಬಲ ಕೊಟ್ಟಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾನ ಮಂಡನೆಗೆ ಮುಂದಾಗಿದ್ದೇವೆ. ನಮ್ಮ ಸದಸ್ಯರಿಗೆ ಶಿಕ್ಷೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ಧೋರಣೆ ತೋರುತ್ತಿದೆ ಎಂದು ಹೇಳಿದರು.
ಸಚಿವರ ಗೈರು: ಸ್ಪೀಕರ್ ಅಸಹಾಯಕತೆ ಅಣಕಿಸಿದ ಬಿಜೆಪಿ
ಸಿದ್ದರಾಮಯ್ಯ ವಿಧಾನಸಭಾ ಬಾಗಿಲು ಒದ್ದಿದ್ದರು: ಇನ್ನು ನಮ್ಮ10 ಶಾಸಕರ ಅಮಾನತು ಖಂಡನೀಯವಾಗಿದೆ. ಕಾಂಗ್ರೆಸ್‌ನವರು ಸ್ಪೀಕರ್ ಮೈಕ್ ಕಿತ್ತು ಹಾಕಿದ್ದರು. ಸಿದ್ದರಾಮಯ್ಯನವರೇ ವಿಧಾನಸಭೆ ಬಾಗಿಲು ಒದ್ದಿದ್ದರು. ಆಗ ಇವ್ರನ್ನ ಅಮಾನತು ಮಾಡಿರಲಿಲ್ಲ. ಈಗ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ವಿಪಕ್ಷಗಳನ್ನ ಹತ್ತಿಕ್ಕಲು ದಮನಕಾರಿ ನೀತಿ ಅನುಸರಿಸಲಾಗುತ್ತಿದೆ. ಜನ ತಕ್ಕಪಾಠ ಕಲಿಸ್ತಾರೆ. ಸ್ಪೀಕರ್ ಇದನ್ನ ಎದುರಿಸಬೇಕಿತ್ತು. ಆದ್ರೆ ಡೆಪ್ಯೂಟಿ ಸ್ಪೀಕರ್ ಅವ್ರನ್ನ ಕೂರಿಸಿ ಎದ್ದು ಹೋಗಿದ್ದರು. ರುದ್ರಪ್ಪ ಲಮಾಣಿಗೆ ಅವಮಾನ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಅಬವರನ್ನು ಮಂತ್ರಿ ಮಾಡಬೇಕಿತ್ತು, ಮಾಡದೇ ಅವಮಾನ ಮಾಡಿದ್ದಾರೆ. ನಮ್ಮ ಶಾಸಕರನ್ನ ಹೊರಗೆ ಹಾಕಿದ್ರೆ, ನಾವೂ ಕೂಡ ಪ್ರೊಟೆಸ್ಟ್ ಮಾಡ್ತೀವಿ. ಈ ಹೋರಾಟ ಜನರ ಬಳಿಗೆ ತೆಗೆದುಕೊಂಡು ಹೋಗ್ತೀವಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.