ಹುಬ್ಬಳ್ಳಿ ಗಲಭೆಗೆ ಬಿಜೆಪಿ-ಕಾಂಗ್ರೆಸ್ ಇಬ್ಬರೂ ಕಾರಣ: ದೇವೇಗೌಡ
* ಈದ್ಗಾ ಮೈದಾನ ವಿವಾದ ಬಗೆಹರಿಸುವಾಗಲೂ ಹೀಗೆ ಮಾಡಿದ್ದರು
* ಜಲಧಾರೆ ಹೋರಾಟವನ್ನು ಡೈವರ್ಟ್ ಮಾಡಲು ಹುನ್ನಾರ
* ಹಿಜಾಬ್ ಬಗ್ಗೆ ಮತ್ತೆ ಕಾಂಗ್ರೆಸ್-ಬಿಜೆಪಿಯ ಕಿತ್ತಾಟ
ಮಂಡ್ಯ(ಏ.21): ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಬಿಜೆಪಿ-ಕಾಂಗ್ರೆಸ್(BJP-Congress) ಇಬ್ಬರೂ ಕಾರಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(HD Devegowda) ನೇರವಾಗಿ ಆರೋಪಿಸಿದರು. ಹುಬ್ಬಳ್ಳಿ ಗಲಭೆ(Hubballi Riots) ಬಗ್ಗೆ ನಾನು ಸಾಕಷ್ಟು ಮಾತನಾಡಬಲ್ಲೆ. ನಾನು ಈದ್ಗಾ ಮೈದಾನದ ವಿಚಾರ ಬಗೆಹರಿಸುವ ವೇಳೆಯೂ ಹೀಗೆ ಮಾಡಿದ್ದರು. ಒಬ್ಬ ಮಾಜಿ ಮಂತ್ರಿ ಹುಬ್ಬಳ್ಳಿಯವರೇ(Hubballi) ವಿರೋಧ ಮಾಡಿದ್ದರು. ಆ ಸಮಯದಲ್ಲಿ ನಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಅವರನ್ನು ಹೊರಗೆ ಹಾಕಿದೆ. ಆಗ ಯಡಿಯೂರಪ್ಪ ಹೇಗೆ ಮಾಡ್ತೀರಿ ನೋಡುತ್ತೇನೆ ಎಂದು ಸವಾಲು ಹಾಕಿದ್ದದರು. ಆಗ ನಾನು ನನ್ನ ಸರ್ಕಾರಕ್ಕೆ ಶಕ್ತಿ ಇದೆ. ಏನು ಮಾಡಬೇಕು ಎಂದು ಗೊತ್ತಿದೆ. ನೀವು ಎಷ್ಟು ಕೂಗಿದರೂ ನಾನು ಹೆದರುವುದಿಲ್ಲ ಎಂದು ಹೇಳಿ ಎಲ್ಲೆಲ್ಲಿ ಯಾರಾರಯರನ್ನು ಬಂಧಿಸಬೇಕೋ ಬಂಧಿಸಿದೆ ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಿಜಾಬ್(Hijab) ಬಗ್ಗೆ ಮತ್ತೆ ಕಾಂಗ್ರೆಸ್-ಬಿಜೆಪಿಯ ಕಿತ್ತಾಟ ಶುರುವಾಗಿದೆ. ಮಕ್ಕಳು ಆ ಬಟ್ಟೆ ಹಾಕಿಕೊಂಡು ಹೋಗಲು ಇವತ್ತು ಹೊಸದಾಗಿ ಶುರು ಮಾಡಿದ್ದಾರಾ?, ಇದಕ್ಕೆ ಯಾರು ಕಾರಣ? ಈ ವಿಷಯದ ಬಗ್ಗೆ ಮಾತನಾಡಿ ನೀರಿನ ವಿಚಾರವಾಗಿ ನಡೆಯುತ್ತಿರುವ ಜಲಧಾರೆ ಕಾರ್ಯಕ್ರಮವನ್ನು ಡೈವರ್ಟ್ ಮಾಡಲು ಹೋಗಲ್ಲ ಎಂದು ನುಡಿದರು.
Karnataka Politics: ನೀರಾವರಿಗೆ ಕೇಂದ್ರದ ನ್ಯಾಯಯುತ ಪಾಲು ಸಿಗುತ್ತಿಲ್ಲ: ದೇವೇಗೌಡ
ಕುಮಾರಸ್ವಾಮಿ(HD Kumaraswamy) ವಿರುದ್ಧ ಸಿದ್ದರಾಮಯ್ಯ(Siddaramaiah) ನಡೆಸಿರುವ ವಾಗ್ದಾಳಿಗೆ ಪ್ರತಿಕ್ರಿಯಿಸಿದ ದೇವೇಗೌಡರು, ಸಿದ್ದರಾಮಯ್ಯ ಮೇಲೆ ಶಬ್ಧ ಪ್ರಯೋಗ ಮಾಡೋದು ನನಗೂ ಗೊತ್ತಿದೆ. ನನ್ನ ಮಗ ಎಷ್ಟು ಹೇಳಬೇಕೋ ಹೇಳಿಬಿಟ್ಟಿದ್ದಾನೆ. ಸಿದ್ದರಾಮಯ್ಯ ಏನು ಹಿಂದಿನ ನೆನಪನ್ನು ಹೇಳಿದ್ದಾರೆ. ಅದಕ್ಕೆ ಅಸಹ್ಯವಾಗಿ ಉತ್ತರ ಕೊಟ್ಟಿದ್ದಾನೆ. ನಾನಿನ್ನೂ ಬದುಕಿದ್ದೇನೆ. 9 ಜನರನ್ನು ಯಡಿಯೂರಪ್ಪನವರು(BS Yediyurappa) ಹೈಜಾಕ್ ಮಾಡಿದರು. ಆ ಟೈಮ್‌ನಲ್ಲಿ ಇವರು ವಿರೋಧಪಕ್ಷದಲ್ಲಿದ್ದರು. ಯಾರಿಗೆ ಸಪೋರ್ಚ್ ಮಾಡಿದರು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಆಲ್ ದಿ 9 ಸಿಸಿ ಕಂಟೆಸ್ಟೆಂಟ್ ಇನ್ ದಿ ಸಿಸಿ. ಯಾರಿಗೆ ಮಾತನಾಡುತ್ತಾರೆ ಇವರು, ಯಾವ ಬಾಯಲ್ಲಿ ಮಾತನಾಡುತ್ತಾರೆ. ನಾನು ಶಬ್ಧ ಪ್ರಯೋಗವನ್ನು ಎಚ್ಚರಿಕೆಯಿಂದ ಮಾಡುತ್ತೇನೆ. ಆ ಎಚ್ಚರಿಕೆ ಅವರಿಗೂ ಇರಬೇಕು ಎಂದು ತಿವಿದರು.
Karnataka Politics: ಕಾಂಗ್ರೆಸ್ ಕಾವೇರಿ ಪರ ಹೋರಾಟ ಮಾಡಲಿಲ್ಲ: ದೇವೇಗೌಡ ಟೀಕೆ
ಆಣೆ ಮಾಡು ಎನ್ನೋಕೆ ಅವನು ಯಾವೂರ ದಾಸಯ್ಯ?: ಸಿದ್ದು ವಿರುದ್ಧ ಎಚ್‌ಡಿಕೆ ಕಿಡಿ
‘ನನ್ನನ್ನು ದೇವೇಗೌಡರ ಮೇಲೆ ಆಣೆ ಮಾಡಿ ಹೇಳು ಎನ್ನೋಕೆ ಅವನು ಯಾವೂರ ದಾಸಯ್ಯ? -ಇದು ಬಿಜೆಪಿ ಕೈ ಜೋಡಿಸಲ್ಲಾ ಎಂದು ಎಚ್.ಡಿ.ದೇವೇಗೌಡರ ಮೇಲೆ ಆಣೆ ಮಾಡಲಿ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ ಪರಿ. ಮಾತಿನುದ್ದಕ್ಕೂ ಸಿದ್ದರಾಮಯ್ಯ ಅಲ್ಲ, ಸುಳ್ಳಿನ ರಾಮಯ್ಯ ಎಂದು ಏಕವಚನದಲ್ಲಿ ಹರಿಹಾಯ್ದರು. ನಾನು ಕೇಳಿರುವ 4 ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಲಿ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲೆ ಆಣೆ ಮಾಡು ಎಂದು ಮಾತನಾಡಲು ಸಿದ್ದರಾಮಯ್ಯ ಯಾವುರ ದಾಸಯ್ಯ? ಜೆಡಿಎಸ್(JDS) ಪಕ್ಷದ ಬಗ್ಗೆ ಪದೇ ಪದೇ ಬಿಜೆಪಿ ಬಿ ಟೀಂ ಎಂದು ಅಪಪ್ರಚಾರ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯೊಗ್ಯತೆಗೆ 50-60 ಸ್ಥಾನಗಳನ್ನು ಮಾತ್ರ ಜಯಗಳಿಲು ಮೀಸಲು ಎಂದು ಭವಿಷ್ಯ ನುಡಿದರು. 2008ರಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಅಂತ ಕಿಡಿಕಾರಿದ್ದರು.