Karnataka Politics: ನೀರಾವರಿಗೆ ಕೇಂದ್ರದ ನ್ಯಾಯಯುತ ಪಾಲು ಸಿಗುತ್ತಿಲ್ಲ: ದೇವೇಗೌಡ

2023ರ ವಿಧಾನಸಭಾ ಚುನಾವಣೆಯ ರಣ ಕಹಳೆ ಇಲ್ಲಿಂದಲೇ ಪ್ರಾರಂಭವಾಗಲಿ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ತಿಳಿಸಿದರು. ನಗರದ ಹೊರವಲಯದ ಹಂಡಿಗನಾಳ ಶ್ರೀ ಬಾಲಾಜಿ ಕನ್ವೆನ್ಷನ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಜೆಡಿಎಸ್‌ನ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

Irrigation is not getting a fair share of the central government says hd devegowda gvd

ಶಿಡ್ಲಘಟ್ಟ (ಏ.20): 2023ರ ವಿಧಾನಸಭಾ ಚುನಾವಣೆಯ (Election) ರಣ ಕಹಳೆ ಇಲ್ಲಿಂದಲೇ ಪ್ರಾರಂಭವಾಗಲಿ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ (HD Devegowda) ತಿಳಿಸಿದರು. ನಗರದ ಹೊರವಲಯದ ಹಂಡಿಗನಾಳ ಶ್ರೀ ಬಾಲಾಜಿ ಕನ್ವೆನ್ಷನ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಜೆಡಿಎಸ್‌ನ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ (Central Government) ರಾಜ್ಯದ (Karnataka) ನೀರಾವರಿ ಯೋಜನೆಗಳಿಗೆ (Irrigation Project) ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಗುತ್ತಿಲ್ಲ. 

ನೆರೆಯ ರಾಜ್ಯಗಳು ಸಹ ನಮ್ಮ ಪಾಲಿನ ನೀರಿನ ಪಾಲು ಪಡೆದುಕೊಳ್ಳಲು ಬಿಡುತ್ತಿಲ್ಲ ಎಂದರು. ನೀರು ಬಳಸಿಕೊಳ್ಳುವಲ್ಲಿ ಸರ್ಕಾರ ವಿಫಲ: ರಾಜ್ಯ ಸರ್ಕಾರವು ಸಹ ಸುಪ್ರೀಂ ಕೋರ್ಚ್‌ನ ತೀರ್ಪಿನಂತೆ ತನ್ನ ಪಾಲಿನ ನೀರನ್ನು ಸದ್ಬಳಿಕೆ ಮಾಡಿಕೊಳ್ಳಲು ವಿಫಲವಾಗಿದೆ. ಇದಕ್ಕಾಗಿ ಹೋರಾಟ ಮಾಡಲು ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಮಾತ್ರ ಸಾಧ್ಯವೆಂದರು. ರಾಜ್ಯ ಸರ್ಕಾರದ ದೋರಣೆಯನ್ನು ಖಂಡಿಸಿದ ಅವರು ಜನರಲ್ಲಿ ಭಾವನಾತ್ಮಕ ವಿಷಯಗಳನ್ನು ತಂದು ಮತ ಪಡೆಯಲು ರಾಜ್ಯದಲ್ಲಿ ಅಶಾಂತಿಯನ್ನು ಮೂಡಿಸುತ್ತಿದೆ ಎಂದರು,

Karnataka Politics: ಕಾಂಗ್ರೆಸ್‌ ಕಾವೇರಿ ಪರ ಹೋರಾಟ ಮಾಡಲಿಲ್ಲ: ದೇವೇಗೌಡ ಟೀಕೆ

ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿಯವರು ಜೆಡಿಎಸ್‌ ಪಕ್ಷ ಬಿಜೆಪಿ ಬಿ ಟೀಮ್‌ ಎಂಬುದಾಗಿ ತಿಳಿಸಿದರು. ಅದಕ್ಕೆ ಪ್ರತಿಯಾಗಿ ರಾಜ್ಯದ ಜನತೆ 130 ಶಾಸಕರಿದ್ದ ಪಕ್ಷವನ್ನು 78 ಸ್ಥಾನಗಳಿಗೆ ಸೀಮಿತಗೊಳಿಸಿ ಸರಿಯಾದ ಬುದ್ಧಿಯನ್ನು ಕಲಿಸದರು. ರಾಜ್ಯ ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಬರಲು ರಾಜ್ಯದ ಜನತೆ ಸ್ಪಷ್ಟಬಹುಮತದೊಂದಿಗೆ ಜೆಡಿಎಸ್‌ ಅಧಿಕಾರಕ್ಕೆ ತರಬೇಕೆಂದರು.

ರವಿಕುಮಾರ್‌ ಗೆಲುವಿಗೆ ಶ್ರಮಿಸಿ: ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಮೇಲೂರು ರವಿಕುಮಾರ್‌ ರವರ ಬಗ್ಗೆ ತಮಗೆ ಅನುಕಂಪವಿದೆ. ತಮ್ಮವರಿಂದಲೇ ಅವರಿಗೆ ಅನ್ಯಾಯವಾಗಿದ್ದು ಉತ್ತಮ ರೈತ ಮುಖಂಡರಾದ ಅವರು ಮುಸ್ಲಿಮರ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಜನಾಂಗದ ಕಲ್ಯಾಣಕ್ಕಾಗಿ ನಗರದ ಹೃದಯ ಭಾಗದಲ್ಲಿ 4 ಎಕರೆ ಜಮೀನನ್ನು ಖರೀದಿಸಿ ದಾನ ಮಾಡಿದ್ದಾರೆ. ಮುಸ್ಲಿಂ ಸಮುದಾಯ ಮರೆಯದೆ ಈ ಭಾರಿ ಅವರ ಗೆಲುವಿಗೆ ಶ್ರಮಿಸ ಬೇಕೆಂದರು.

ಎಚ್ಡಿಕೆ ಪೂರ್ಣಾವಧಿ ಸಿಎಂ ಆಗಬೇಕು: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, ಪಕ್ಷದ ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸದಿಂದ ಮೈಮರೆಯದೆ ಶ್ರಮ ವಹಿಸಿ ಜನರ ಮನೆ ಬಾಗಿಲಿಗೆ ಹೋಗಿ ಮನವೊಲಿಸಿ ಮತ ಪಡೆಯಬೇಕು. ರಾಜ್ಯದಲ್ಲಿ ಮೊದಲ ಬಾರಿಗೆ ಮುಸ್ಲಿಂ ಸಮುದಾಯದವರಿಗೆ ಸೂಕ್ತ ಮರ್ಯಾದೆ ಮತ್ತು ರಕ್ಷಣೆ ನೀಡುವ ಪಕ್ಷ ಸಿಕ್ಕಿದೆ. ಜೆಡಿಎಸ್‌ ಈ ಬಾರಿ ಅಧಿಕಾರಕ್ಕೆ ಬರುವು ಶತಸಿದ್ಧ ಯಾವುದೇ ಅಲ್ಪಸಂಖ್ಯಾತರು ದಲಿತರು ನಿರ್ಭಯವಾಗಿ ಮತದಾನ ಮಾಡಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು ಎಚ್‌.ಡಿ.ಕುಮಾರ ಸ್ವಾಮಿಯವರನ್ನು ಮತ್ತೆ ಪೂರ್ಣಾವಧಿಯ ಮುಖ್ಯ ಮಂತ್ರಿ ಮಾಡಬೇಕೆಂದು ಕೊರಿದರು.

Karnataka Politics: ಜೆಡಿಎಸ್‌ ಅಧಿಕಾರಕ್ಕೆ ತರುವುದು ನನ್ನ ಕೊನೇ ಆಸೆ: ದೇವೇಗೌಡ

ದೇವೇಗೌಡರಿಗೆ ಪೂರ್ಣಕುಂಭ ಸ್ವಾಗತ: ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣಾರೆಡ್ಡಿ ,ಗೋವಿಂದ್‌ ರಾಜ್‌ ಮುಂತಾದವರು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ಸಾವಿರಾರು ಬೈಕ್‌ಗಳ ಬೃಹತ್‌ ಮೆರವಣಿಗೆಯಲ್ಲಿ ದೇವೆಗೌಡರನ್ಮು ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿ ಕೊಳ್ಳಲಾಯಿತು, ಅಮ್ಮನ ಕೆರೆಯಲ್ಲಿ ಪೂಜೆ ಸಲ್ಲಿಸಿ ಅಬ್ಲೂಡು ಮಾರ್ಗವಾಗಿ ದಿಬ್ಬೂರ ಹಳ್ಳಿ ವೆಂಕಟೇಶ ಸಾಗರ ಪಿನಾಕೊನಿ ನದಿಯ ಕಡೆಗೆ ಜನತಾ ಜಲದಾರೆ ರಥವನ್ನು ಚಿಂತಾಮಣಿ ತಾಲೂಕಿಗೆ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಬಂಕ್‌ ಮುನಿಯಪ್ಪ, ಡಾ.ಧನುಂಜಯರೆಡ್ಡಿ, ಸುಮಿತ್ರಾ ರಮೇಶ್‌, ಬಚ್ಚೇಗೌಡ, ತಾಲೂಕು ಜೆ.ಡಿ.ಎಸ್‌ ಅಧ್ಯಕ್ಷ ವೆಂಕಟೇಶ್‌, ನಗರಸಭಾ ಸದಸ್ಯರು, ಕಾರ್ಯಕರ್ತರು ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios