ಮುಂದಿನ ದಿನಗಳಲ್ಲಿ ಆಪರೇಷನ್‌ ಜೆಡಿಎಸ್‌ ಮಾಡುತ್ತೇವೋ, ಬಿಡುತ್ತೇವೋ ಎಂಬುದು ಗೊತ್ತಾಗಲಿದೆ. ನಮ್ಮೊಂದಿಗೂ ಸಹ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ. ಅದು ಪಕ್ಷಾಂತರ ಪರ್ವಕ್ಕೆ ನಾಂದಿಯಾಗಲಿದೆ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ಪಾಂಡವಪುರ: ಬಿಜೆಪಿಯ 10 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆಪರೇಷನ್‌ ಕಮಲದ ಭಯ ನಮಗಿಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆಪರೇಷನ್‌ ಜೆಡಿಎಸ್‌ ಮಾಡುತ್ತೇವೋ, ಬಿಡುತ್ತೇವೋ ಎಂಬುದು ಗೊತ್ತಾಗಲಿದೆ. ನಮ್ಮೊಂದಿಗೂ ಸಹ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ. ಅದು ಪಕ್ಷಾಂತರ ಪರ್ವಕ್ಕೆ ನಾಂದಿಯಾಗಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ನೂರಕ್ಕೆ ನೂರರಷ್ಟುಸುಭದ್ರವಾಗಿದೆ. ಐದು ವರ್ಷಗಳ ಕಾಲ ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಅಧಿಕಾರ ಪೂರೈಸಲಿದೆ. ಆಪರೇಷನ್‌ ಕಮಲ ವಿಫಲವಾದ ಬಳಿಕ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಾನು ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಭದ್ರಗೊಳಿಸುವುದಿಲ್ಲ ಎನ್ನುತ್ತಿದ್ದಾರೆ. ಈ ಹೇಳಿಕೆ ನಮ್ಮ ಸರ್ಕಾರ ಸುಭದ್ರತೆಯನ್ನು ತೋರಿಸುತ್ತದೆ ಎಂದರು.

ಬಿಜೆಪಿ ಶಾಸಕರು ಹರಾರ‍ಯಣದ ಗುರುಗ್ರಾಮ ರೆಸಾರ್ಟ್‌ನಲ್ಲಿ ಮೋಜು ಮಸ್ತಿ ಮಾಡುವುದಕ್ಕಾಗಿ ಹೋಗಿದ್ದಾರೆ. ಅದೇ ಕಾಂಗ್ರೆಸ್‌ ಶಾಸಕರು ತಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ರೆಸಾರ್ಟ್‌ ಹೋದರೆ ತಪ್ಪೇನು ಎಂದು ಪ್ರಶ್ನಿಸಿದರು.