ರಾಜ್ಯದ ವಿಧಾನ ಪರಿಷತ್‌ನಲ್ಲಿ ಖಾಲಿಯಿರುವ 3 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ಮೂರು ಸ್ಥಾನಗಳಿಗೆ ಜೂನ್ 30 ರಂದು ಮತದಾನ ನಡೆಯಲಿದೆ.

ಬೆಂಗಳೂರು (ಜೂ.06): ಕರ್ನಾಟಕ ರಾಜ್ಯದ ವಿಧಾನ ಪರಿಷತ್‌ನಲ್ಲಿ ಖಾಲಿಯಿರುವ 3 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ಮೂರು ಸ್ಥಾನಗಳಿಗೆ ಜೂನ್ 30 ರಂದು ಮತದಾನ ನಡೆಯಲಿದೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಲಕ್ಷ್ಮಣ್ ಸವದಿ, ಆರ್ ಶಂಕರ್ ಮತ್ತು ಬಾಬುರಾವ್ ಚಿಂಚನಸೂರು ರಾಜೀನಾಮೆ ಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಇನ್ನು ರಾಜ್ಯದಲ್ಲಿ ವಿಧಾನ ಪರಿಷತ್‌ ಸ್ಥಾನಗಳ ಪೈಕಿ ಖಾಲಿಯಾದ ಎಲ್ಲ ಸ್ಥಾನಗಳು ಬಿಜೆಪಿಯಿಂದ ಆಯ್ಕೆಯಾಗಿದ್ದ ಸದಸ್ಯರಾಗಿದ್ದರು. ಆದರೆ, ಈ ಪೈಕಿ ಲಕ್ಷ್ಮಣ ಸವದಿ ಮಾತ್ರ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಆರ್. ಶಂಕರ್‌ ಮತ್ತು ಬಾಬುರಾವ್‌ ಚಿಂಚನಸೂರ್‌ ಅವರು ಸೋತು ಸುಣ್ಣವಾಗಿದ್ದಾರೆ. ಈಗ ಈ ತೆರವಾದ ಸ್ಥಾನಗಳಿಗೆ ಸ್ಪರ್ದೆ ಮಾಡಲು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲನನ್ನಪ್ಪಿದ ಘಟಾನುಘಟಿಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ. 

ಸರ್ಕಾರಿ ವಕೀಲರ ನೇಮಕಾತಿ ಅಕ್ರಮವನ್ನು ಇಲಾಖಾ ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ

ಜೂ.30ರಂದು ಮತದಾನ ಪ್ರಕ್ರಿಯೆ: ರಾಜ್ಯದಲ್ಲಿ ಜೂನ್ 13 ರಿಂದ ಅಧಿಸೂಚನೆ ಜಾರಿಯಲ್ಲಿರುತ್ತದೆ. ಜೂನ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜೂ.21ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜೂ.23 ನಾಮಪತ್ರಗಳನ್ನು ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಜೂ.30ರಂದು ಅಗತ್ಯವಿದ್ದರೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜೂನ್ 30 ರ ಶುಕ್ರವಾರ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಮತದಾನ ಹಾಗೂ ಸಂಜೆ 5 ಗಂಟೆಯೊಳಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಜುಲೈ 4ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 

ಜಗದೀಶ್‌ ಶೆಟ್ಟರ್‌ಗೆ ಸ್ಥಾನ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಾಗೂ ಬಿಜೆಪಿಯಿಂದ ಮುಖ್ಯಮಂತ್ರಿ ಪದವಿಯನ್ನೂ ಅನುಭವಿಸಿದ್ದ ಲಿಂಗಾಯತ ಸಮುದಾಯದ ನಾಯಕ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಸೋಲಾಗಿದ್ದು, ಯಾವುದೇ ಅಧಿಕಾರವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಆದರೆ, ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಅವರ ಪಾತ್ರವೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಸ್ಥಾನಕ್ಕೆ ಜಗದೀಶ್‌ ಶೆಟ್ಟರ್‌ಗೆ ಕಾಂಗ್ರೆಸ್‌ನಿಂದ ಅವಕಾಶ ಸಿಗಲಿದೆ. 

ಬೆಂಗಳೂರು ಉಪನಗರ ರೈಲು ಯೋಜನೆ ಮೈಸೂರು, ಕೋಲಾರಕ್ಕೂ ವಿಸ್ತರಣೆ

ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ
ಸಿಎಂ ಸಿದ್ದರಾಮಯ್ಯ: ಹಣಕಾಸು, ಗುಪ್ತಚರ ಹಂಚಿಕೆಯಾದ ಖಾತೆಗಳು
ಡಿಸಿಎಂ ಡಿಕೆ ಶಿವಕುಮಾರ್: ಸಣ್ಣ ಮತ್ತು‌ ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ಧಿ 
ಜಿ.ಪರಮೇಶ್ವರ್: ಗೃಹ ಇಲಾಖೆ
ಹೆಚ್ ಕೆ‌ ಪಾಟೀಲ್: ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ ಇಲಾಖೆ
ಕೆ.ಹೆಚ್.ಮುನಿಯಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು
ರಾಮಲಿಂಗರೆಡ್ಡಿ: ಸಾರಿಗೆ ಮತ್ತು ಮುಜರಾಯಿ
ಎಂ.ಬಿ.ಪಾಟೀಲ್: ಬೃಹತ್-ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ
ಕೆ.ಜೆ.ಜಾರ್ಜ್‌: ಇಂಧನ
ದಿನೇಶ್ ಗುಂಡೂರಾವ್: ಆರೋಗ್ಯ
ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ
ಸತೀಶ್ ಜಾರಕಿಹೊಳಿ: ಲೋಕೋಪಯೋಗಿ
ಕೃಷ್ಣ ಬೈರೇಗೌಡ: ಕಂದಾಯ
ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ
ಶಿವಾನಂದ ಪಾಟೀಲ್: ಜವಳಿ ಮತ್ತು ಸಕ್ಕರೆ

ಜಮೀರ್ ಅಹ್ಮದ್‌ ಖಾನ್: ವಸತಿ ಇಲಾಖೆ
ಶರಣುಬಸಪ್ಪ ದರ್ಶನಾಪುರ್: ಸಣ್ಣ ಕೈಗಾರಿಕೆ
ಈಶ್ವರ್ ಖಂಡ್ರೆ: ಅರಣ್ಯ
ಚಲುವರಾಯಸ್ವಾಮಿ: ಕೃಷಿ
ಎಸ್.ಎಸ್.ಮಲ್ಲಿಕಾರ್ಜುನ: ಗಣಿ 
ರಹೀ ಖಾನ್: ಪೌರಾಡಳಿತ ಮತ್ತು ಹಜ್
ಸಂತೋಷ ಲಾಡ್: ಕಾರ್ಮಿಕ
ಡಾ.ಶರಣುಪ್ರಕಾಶ್ ಪಾಟೀಲ್: ವೈದ್ಯಕೀಯ
ಆರ್.ಬಿ.ತಿಮ್ಮಾಪುರ: ಅಬಕಾರಿ
ಕೆ.ವೆಂಕಟೇಶ್: ಪಶುಸಂಗೋಪನೆ
ಶಿವರಾಜ್ ತಂಗಡಗಿ: ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
ಡಿ.ಸುಧಾಕರ್: ಯೋಜನೆ
ಬಿ‌.ನಾಗೇಂದ್ರ: ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
ಕೆ.ಎನ್.ರಾಜಣ್ಣ: ಸಹಕಾರ
ಬಿ.ಎಸ್.ಸುರೇಶ್: ನಗರಾಭಿವೃದ್ಧಿ
ಲಕ್ಷ್ಮಿ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಂಕಾಳ್ ವೈದ್ಯ: ಮೀನುಗಾರಿಕೆ ಮತ್ತು ಬಂದರು
ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಡಾ‌.ಎಂ‌.ಸಿ‌.ಸುಧಾಕರ್: ಉನ್ನತ ಶಿಕ್ಷಣ
ಎನ್.ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ