* ಇನ್ಸುಲಿನ್‌ ಅಸ್ಪಾಟ್‌ಗೆ ಅನುಮೋದನೆ ನೀಡಲು ಲಂಚ* 3ನೇ ಹಂತದ ಪರೀಕ್ಷೆ ನಡೆಸದೇ ಔಷಧಕ್ಕೆ ಅನುಮತಿ ಬೇಡಿಕೆ* ಈ ಪ್ರಕರಣದಲ್ಲಿ ಒಟ್ಟಾರೆ 5 ಮಂದಿಯ ಬಂಧನ

ಬೆಂಗಳೂರು(ಜೂ.22) ಬೆಂಗಳೂರು ಮೂಲದ ಬಯೋಕನ್‌ (Biocon) ಅಂಗಸಂಸ್ಥೆಯಾದ ಬಯೋಕಾನ್‌ ಬಯಾಲಜಿಕ್ಸ್‌ ಕಂಪನಿಯ ‘ಇನ್ಸುಲಿನ್‌ ಅಸ್ಪಾರ್ಚ್‌’ ಎಂಬ ಔಷಧಿಗೆ 3ನೇ ಹಂತದ ಪ್ರಯೋಗ ಇಲ್ಲದೇ ಅನುಮೋದನೆ ನೀಡಲು 4 ಲಕ್ಷ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (DCGI) ಜಂಟಿ ನಿಯಂತ್ರಕ ಎಸ್‌. ಈಶ್ವರ ರೆಡ್ಡಿ ಸೇರಿ ಬಯೋಕಾನ್‌ನ ಒಟ್ಟು ಐವರನ್ನು ಮಂಗಳವಾರ ಸಿಬಿಐ ಬಂಧಿಸಿದೆ.

ಇನ್ನೂ ಸಂಪೂರ್ಣ ಸಿದ್ಧವಾಗದ ಈ ಔಷಧಿಗೆ ಅನುಮೋದನೆ ನೀಡಲು ಮೊದಲು 9 ಲಕ್ಷದ ಲಂಚಕ್ಕೆ ಒಪ್ಪಂದ ಆಗಿತ್ತು. ಇದರ ಭಾಗವಾಗಿ 4 ಲಕ್ಷ ಸ್ವೀಕರಿಸಿದ ರೆಡ್ಡಿ ಸಿಬಿಐ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬಯೋಕಾನ್‌ ವಕ್ತಾರರು ಲಭ್ಯವಾಗಲಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಗ್ನಿವೀರರಿಗೆ ಕಾರ್ಪೋರೆಟ್‌ ನೌಕರಿ ಆಫರ್‌: ಟಿವಿಎಸ್‌, ಬಯೋಕಾನ್‌, ಅಪೋಲೋದ ಬೆಂಬಲ!

ಬಯೋಕಾನ್‌ ಬಯೋಲಾಜಿಕಲ್‌ನ ಉಪ ಮುಖ್ಯಸ್ಥ ಎಲ್‌.ಪ್ರವೀಣ್‌ ಕುಮಾರ್‌, ಸಿನರ್ಜಿ ನೆಟ್ವರ್ಕ್ ಇಂಡಿಯಾ ಪ್ರೈ.ಲಿ.ನ ನಿರ್ದೇಶಕ ದಿನೇಶ್‌ ದುವಾ ಮತ್ತು ಗುಲ್ಜೀತ್‌ ಸೇತಿ ಅವರನ್ನು ಸಿಬಿಐ ಬಂಧಿಸಿದೆ. ಅಲ್ಲದೇ ಡಿಸಿಜಿಐನ ಸಹಾಯಕ ಔಷಧ ಪರೀಕ್ಷಕ ಅನಿಮೇಶ್‌ ಕುಮಾರ್‌ ಅವರನ್ನು ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಜಂಟಿ ನಿರ್ದೇಶಕ ಎಸ್‌.ಈಶ್ವರ ರೆಡ್ಡಿ ಅವರನ್ನು ಸಹ ಸಿಬಿಐ ಬಂಧಿಸಿತ್ತು. ಈ ಪ್ರಕರಣದಲ್ಲಿ ಒಟ್ಟಾರೆ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಬಸವ ಜಯಂತಿ ಲಿಂಗಾಯಿತರಿಗೆ ಸೀಮಿತ, ರಂಜಾನ್ ಇಡೀ ದೇಶದ ಹಬ್ಬ, ಕಿರಣ್‌ ಮಜುಂದಾರ್‌ ವಿವಾದ!

ಏನಿದು ಪ್ರಕರಣ: ಬಯೋಕಾನ್‌ ಬಯಾಲಾಜಿಕ್ಸ್‌ ತಯಾರಿಸಿರುವ ಇನ್ಸುಲಿನ್‌ ಅಸ್ಪಾರ್ಚ್‌ ಔಷಧಕ್ಕೆ 3ನೇ ಹಂತರ ಕ್ಲಿನಿಕಲ್‌ ಟ್ರಯಲ್‌ ಇಲ್ಲದೇ ಅನುಮತಿ ನೀಡಬೇಕು ಎಂಬ ಕಾರಣಕ್ಕೆ 9 ಲಕ್ಷ ರು. ಲಂಚ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರ ಮೊದಲ ಕಂತಾದ 4 ಲಕ್ಷವನ್ನು ಸ್ವೀಕರಿಸಿದ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಅಲ್ಲದೇ ಈ ರೀತಿಯ ಔಷಧಗಳಿಗೆ ಪರೀಕ್ಷೆ ಇಲ್ಲದೇ ಅನುಮತಿ ನೀಡುವುದು ಅಪಾಯಕಾರಿಯಾಗುತ್ತದೆ ಎಂದು ಡಿಜಿಸಿಐನ ವಕ್ತಾರರು ಹೇಳಿದ್ದಾರೆ.