ವಾರದಲ್ಲಿ ಭೂ ಪರಿವರ್ತನೆಗಾಗಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ

ಒಂದೇ ವಾರದಲ್ಲಿ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸುವ ಮತ್ತು ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೈಗಾರಿಕೋದ್ಯಮ ಉತ್ತೇಜಿಸಿ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ತರುವ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಸೇರಿದಂತೆ ಮೂರು ಪ್ರತ್ಯೇಕ ವಿಧೇಯಕಗಳನ್ನು ಮಂಡಿಸಿದೆ. 

bill that simplifies land conversion tabled in karnataka assembly gvd

ವಿಧಾನಸಭೆ (ಡಿ.21): ಒಂದೇ ವಾರದಲ್ಲಿ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸುವ ಮತ್ತು ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೈಗಾರಿಕೋದ್ಯಮ ಉತ್ತೇಜಿಸಿ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ತರುವ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಸೇರಿದಂತೆ ಮೂರು ಪ್ರತ್ಯೇಕ ವಿಧೇಯಕಗಳನ್ನು ಮಂಡಿಸಿದೆ. ಮಂಗಳವಾರ ಸದನದಲ್ಲಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ, ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು.

1.ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಮಂಡಿಸಿದರು. ಗುಜರಾತ್‌ ಮತ್ತು ರಾಜಸ್ಥಾನ ಮಾದರಿಯಲ್ಲಿ ವಿಶೇಷ ಹೂಡಿಕೆ ಪ್ರದೇಶವನ್ನು ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆರಂಭದಲ್ಲಿ ತುಮಕೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ಹೂಡಿಕೆ ಪ್ರದೇಶವನ್ನು ಸ್ಥಾಪಿಸುವ ಚಿಂತನೆ ಇದೆ. 2,500 ಎಕರೆಗಿಂತ ಹೆಚ್ಚಿನ ಪ್ರದೇಶವನ್ನು ಹೂಡಿಕೆ ಪ್ರದೇಶ ಅಥವಾ 1250 ಎಕರೆಗಿಂತ ಕಡಿಮೆಯಿಲ್ಲದ ವಿಸ್ತೀರ್ಣ ಹೊಂದಿರುವ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶ ಎಂದು ಪರಿಗಣಿಸಲಾಗುತ್ತದೆ.

ದೇಗುಲ ಮುಂದೆ ‘ಎಲ್ಲ ಜಾತಿಯವರಿಗೂ ಪ್ರವೇಶ’ ಫಲಕ

2.ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವ ಆರ್‌.ಅಶೋಕ್‌ ಮಂಡಿಸಿದರು. ಕಟ್ಟಡ ನಿರ್ಮಾಣ ಮಾಡಲು ಭೂಮಿ ಪರಿವರ್ತನೆಗಾಗಿ ಈ ಮೊದಲು 5-6 ತಿಂಗಳಾಗುತ್ತಿತ್ತು. ಇದನ್ನು ಏಳು ದಿನದಲ್ಲಿ ಮಾಡಿಕೊಡಲು ಈ ವಿಧೇಯಕನ್ನು ಮಂಡಿಸಲಾಗಿದೆ. ಇದರಿಂದ ಭ್ರಷ್ಟಾಚಾರ ಮತ್ತು ಕಿರುಕುಳ ತಪ್ಪಿಸಿದಂತಾಗುತ್ತದೆ.

3. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಮಂಡಿಸಿದರು. ಗಡಿ ಭಾಗದಲ್ಲಿ 57 ತಾಲೂಕುಗಳಿದ್ದವು. ಸರ್ಕಾರವು ಹೊಸದಾಗಿ 47 ತಾಲೂಕುಗಳನ್ನು ರಚನೆ ಮಾಡಿದೆ. ಇದರಲ್ಲಿ 11 ತಾಲೂಕುಗಳು ಗಡಿ ಭಾಗಕ್ಕೆ ಬರುತ್ತದೆ. ಈ ತಾಲೂಕುಗಳನ್ನು ಗಡಿಭಾಗ ಎಂದು ಪರಿಗಣಿಸಲು ವಿಧೇಯಕ ಮಂಡಿಸಲಾಗಿದೆ. ಈ ಮೊದಲು ಯಾವುದೇ ತಾಲೂಕುಗಳನ್ನು ಗಡಿ ಭಾಗ ಎಂದು ಪರಿಗಣಿಸಬೇಕಾದರೆ ಪ್ರತಿಬಾರಿಯು ವಿಧೇಯಕ ತರಬೇಕಾಗಿತ್ತು. ಆದರೆ, ಈ ಸಮಸ್ಯೆಯನ್ನು ನಿವಾರಣೆ ಮಾಡಲು ವಿಧೇಯಕದಲ್ಲಿಯೇ ಅವಕಾಶ ಮಾಡಿಕೊಡಲಾಗಿದ್ದು, ಸರ್ಕಾರ ಮಟ್ಟದಲ್ಲಿಯೇ ತೀರ್ಮಾನ ಕೈಗೊಳ್ಳಬಹುದಾಗಿದೆ.

ಸಭಾಪತಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ, ಇಂದು ಘೋಷಣೆ

ಎಡವಿ ಬಿದ್ದು ಸೋಮಣ್ಣಗೆ ಗಾಯ: ವಿಧಾನಸಭೆಯ ಮಂಗಳವಾರದ ಕಲಾಪ ಮುಕ್ತಾಯದ ಬಳಿಕ ಹೊರಗೆ ತೆರಳುತ್ತಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಮೆಟ್ಟಿಲಿನ ಮೇಲೆ ಎಡವಿ ಬಿದ್ದು, ಸಣ್ಣ ಪ್ರಮಾಣದ ಗಾಯ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಆಗಮಿಸಿದ್ದ ಸೋಮಣ್ಣ ಅವರು ಕಲಾಪ ಅವಧಿ ಮುಗಿದ ಬಳಿಕ ಹೊರ ನಡೆಯುತ್ತಿದ್ದರು. ಈ ವೇಳೆ ಮೆಟ್ಟಿಲು ಎಡವಿ ಬಿದ್ದಿದ್ದರಿಂದ ಕೈಗೆ ತರಚಿದ ಗಾಯವಾಗಿದೆ. ಕೂಡಲೇ ಸಹಾಯಕ್ಕೆ ಬಂದ ಸಚಿವರಾದ ಆನಂದ್‌ ಸಿಂಗ್‌, ಮಾಧುಸ್ವಾಮಿ, ನಾರಾಯಣಗೌಡ, ಹಾಗೂ ಶಾಸಕ ರಂಗನಾಥ ಅವರು ಸೋಮಣ್ಣ ಅವರನ್ನು ಬದಿಯಲ್ಲಿ ಕೂರಿಸಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದರು. ಬಳಿಕ ವೈದ್ಯರ ಬಳಿ ಗಾಯಕ್ಕೆ ಔಷಧಿ ಪಡೆದು ಬೆಳಗಾವಿಯಲ್ಲಿ ತಂಗಿದ್ದ ಕೊಠಡಿಗೆ ಸೋಮಣ್ಣ ತೆರಳಿದರು.

Latest Videos
Follow Us:
Download App:
  • android
  • ios