ಬಿಗ್‌ಬಾಸ್ ಖ್ಯಾತಿಯ ವಕೀಲ ಜಗದೀಶ್ ಮೇಲೆ ಮತ್ತೆ ಹಲ್ಲೆ ನಡೆದಿದ್ದು, ಅವರ ಕಾರು ಸಹ ಧ್ವಂಸಗೊಂಡಿದೆ. ದೇವರ ವಿಗ್ರಹ ಪ್ರತಿಷ್ಠಾಪನೆ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಈ ಘಟನೆ ನಡೆದಿದ್ದು, ಜಗದೀಶ್ ಪುತ್ರ ಸೇರಿದಂತೆ ಕುಟುಂಬಸ್ಥರ ಮೇಲೂ ಹಲ್ಲೆಯಾಗಿದೆ.
ಬೆಂಗಳೂರು (ಜ.24): ಬಿಗ್‌ಬಾಸ್ ಸೀಸನ್ 11 ರ ಮಾಜಿ ಸ್ಪರ್ಧಿ ವಕೀಲ್ ಜಗದೀಶ್ ಮೇಲೆ ಮತ್ತೆ ಮಾರಣಾಂತಿಕವಾಗಿ ಹಲ್ಲೆಯಾಗಿದೆ. ನಿನ್ನೆಯಷ್ಟೆ ಪುಂಡ ಯುವಕನೊಬ್ಬ ಜಗದೀಶರ ಕುತ್ತಿಗೆಗೆ ಕೈಹಾಕಿ ಹಲ್ಲೆ ನಡೆಸಿದ್ದ ಸೋಷಿಯಲ್ ಮೀಡಿಯಾದ್ಲಲಿ ವೈರಲ್ ಆಗಿತ್ತು. ಆದರೆ ಇಂದು ಸಹಕಾರನಗರದಲ್ಲಿನ ಜಗದೀಶ್ ನಿವಾಸದ ಬಳಿ ನೂರಾರು ಜನರಿಂದ ಮತ್ತೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ವಕೀಲ್ ಜಗದೀಶ್ ಪುತ್ರ ಸೇರಿದಂತೆ ಕುಟುಂಬದವರ ಮೇಲೂ ಪುಂಡರ ಗುಂಪು ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ವಕೀಲ್ ಜಗದೀಶ್ ಮೂಗಿಗೆ ಗಂಭೀರ ಗಾಯವಾಗಿದ್ದು, ಪುತ್ರನ ಮುಖ, ಕಿವಿ ಭಾಗದಲ್ಲೂ ಗಾಯವಾಗಿದೆ ಸದ್ಯ ಪೊಲೀಸರು ಜೀಪಿನಲ್ಲಿ ಕರೆದೊಯ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಬಿಗ್‌ಬಾಸ್ ಜಗದೀಶ್ ಮೇಲೆ ಮತ್ತೆ ಹಲ್ಲೆ; ಗಲಾಟೆ ವೇಳೆ ಫೈರಿಂಗ್, ವಕೀಲ್ ಸಾಬ್ ಗನ್‌ಮ್ಯಾನ್‌ಗಳು ಪೊಲೀಸರ ವಶಕ್ಕೆ!
ಘಟನೆಗೆ ಕಾರಣವೇನು?
ಕೊಡಿಗೆಹಳ್ಳಿಯಲ್ಲಿ ಮೋರ್ ಜಂಕ್ಷನ್ ಬಳಿ ಅಣ್ಣಮ್ಮ ದೇವಿ ಕೂರಿಸೋ ವಿಚಾರಕ್ಕೆ ಸ್ಥಳೀಯ ನಿವಾಸಿಗಳು, ಹಾಗೂ ಲಾಯರ್ ಜಗದೀಶ್ ನಡುವೆ ಕಿರಿಕ್ ಆಗಿದೆ. ರಸ್ತೆ ಬ್ಲಾಕ್ ಮಾಡಿ ದೇವರನ್ನು ಕೂರಿಸಿದ್ದನ್ನು ಪ್ರಶ್ನಿಸಿದ್ದ ಲಾಯರ್. ಇದೇ ವಿಚಾರಕ್ಕೆ ಸ್ಥಳೀಯರು ಹಾಗೂ ಜಗದೀಶ್ ನಡುವೆ ಮಾತಿಗೆ ಮಾತು ಬೆಳೆದು ನಿನ್ನೆ ಕೈಕೈ ಮಿಲಾಯಿಸಿಕೊಂಡಿದ್ದರು. ನಿನ್ನೆಯ ಘಟನೆ ವೇಳೆ ಯುವಕನೋರ್ವ ಜಗದೀಶ್ ಮೇಲೆ ಹಲ್ಲೆ ನಡೆಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಕುರಿತು ಜಗದೀಶ ಲೈವ್‌ನಲ್ಲಿ ಬಂದಿದ್ದರು. ಈ ವಿಚಾರವಾಗಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿತ್ತು.
ಇಂದು ಮತ್ತೆ ಅಣ್ಣಮ್ಮ ದೇವಿ ಕೂರಿಸಿದ್ದ ರಸ್ತೆಬಳಿ ತೆರಳಿದ್ದ ವಕೀಲ ಜಗದೀಶ್. ಈ ವೇಳೆ ಸ್ಥಳೀಯರು ಹಾಗೂ ವಕೀಲ ಜಗದೀಶ ನಡುವೆ ಮತ್ತೆ ಮಾತಿನಚಕಮಕಿನಡೆದಿದೆ. ಗಲಾಟೆ ವೇಳೆ ವಕೀಲ ಜಗದೀಶ್ ಸ್ಕಾರ್ಪಿಯೋ ಕಾರು ಧ್ವಂಸಗೊಳಿಸಿದ ಸ್ಥಳೀಯರು. ಈ ವೇಳೆ ವಕೀಲ ಜಗದೀಶನ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
