BIG 3: ಹೊಸದು ಇದ್ರೂ ಚಿಕಿತ್ಸೆ ಮಾತ್ರ ಹಳೆ ಕಟ್ಟಡದಲ್ಲೇ, ಹೊಸ ಆಸ್ಪತ್ರೆ ಉದ್ಘಾಟನೆ ಯಾವಾಗ ಸ್ವಾಮಿ?
ಕೆಲವೊಂದು ಸರ್ಕಾರಿ ಕಟ್ಟಡಗಳ ಶಂಕುಸ್ಥಾಪನೆ ಮಾಡೋವಾಗ ಅವರಲ್ಲಿ ರಣೋತ್ಸಹ ಇರುತ್ತೆ. ಆದ್ರೆ, ಬರುತ್ತಾ..? ಬರುತ್ತಾ..? ಕಟ್ಟಡ ರೆಡಿ ಆದ್ಮೇಲೇ ಉದ್ಘಾಟನೆ ಮಾಡೋಕೆ ಮೀನಾ ಮೇಷ ಎಣಿಸ್ತಾ ಇರುತ್ತಾರೆ. ಇದರಿಂದ ಆ ಜನ ಕಂಡ ಕನಸು ನನಸಾಗೋದಿಲ್ಲ. ಇದರಿಂದ ಸಾಮಾನ್ಯ ಜನರು ಹೇಗೆ ಹೈರಣಾಗಿ ಹೋಗ್ತಿದ್ದಾರೆ ಅನ್ನೋದನ್ನ ಇವತ್ತಿನ ಈ ವರದಿಯಲ್ಲಿ ತೋರಿಸ್ತಿವಿ ನೋಡಿ...
ಬೀದರ್, (ಜೂನ್.14): ಕೆಲವೊಂದು ಸರ್ಕಾರಿ ಕಟ್ಟಡಗಳ ಶಂಕುಸ್ಥಾಪನೆ ಮಾಡೋವಾಗ ಅವರಲ್ಲಿ ರಣೋತ್ಸಹ ಇರುತ್ತೆ. ಆದ್ರೆ, ಬರುತ್ತಾ..? ಬರುತ್ತಾ..? ಕಟ್ಟಡ ರೆಡಿ ಆದ್ಮೇಲೇ ಉದ್ಘಾಟನೆ ಮಾಡೋಕೆ ಮೀನಾ ಮೇಷ ಎಣಿಸ್ತಾ ಇರುತ್ತಾರೆ. ಇದರಿಂದ ಆ ಜನ ಕಂಡ ಕನಸು ನನಸಾಗೋದಿಲ್ಲ. ಇದರಿಂದ ಸಾಮಾನ್ಯ ಜನರು ಹೇಗೆ ಹೈರಣಾಗಿ ಹೋಗ್ತಿದ್ದಾರೆ ಅನ್ನೋದನ್ನ ಇವತ್ತಿನ ಈ ವರದಿಯಲ್ಲಿ ತೋರಿಸ್ತಿವಿ ನೋಡಿ...
"
ಬೀದರ್ ತಾಲೂಕಿನ ಬಗದಲ್ ಗ್ರಾಮದಲ್ಲಿ ಹಳೆ ಮತ್ತು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.. ಬಗದಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ತುಂಬ ಹಳೆಯದಾಗಿ ಅಲ್ಲಲ್ಲಿ ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿರೋದು ಅಂದಿನ ಶಾಸಕ ಅಶೋಕ್ ಖೇಣಿ ಅವರ ಗಮನಕ್ಕೆ ಬರುತ್ತೆ. ತಕ್ಷಣವೇ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಕೆಕೆಆರ್ಡಿಬಿಯಿಂದ ಹಣ ಮಂಜೂರು ಮಾಡಿಸಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
"
ಹೊಸ ಆಸ್ಪತ್ರೆ ನಿರ್ಮಾಣಗೊಂಡು ಒಂದುವರೆ ವರ್ಷ ಬಳಿಕ ಅಂದ್ರೆ 2020ರಲ್ಲಿ ಈಗಿನ ಶಾಸಕರಾದ ಬಂಡೆಪ್ಪ ಖಾಶೆಂಪೂರ್ ಅವರು ಉದ್ಘಾಟನೆ ಮಾಡಲು ಮುಂದಾಗುತ್ತಾರೆ.ಆದರೆ ಆಸ್ಪತ್ರೆಗೆ ಹೋಗಲು ಯಾವ ಕಡೆಯಿಂದಲೂ ಸರಿಯಾದ ರಸ್ತೆ ಸಂಪರ್ಕ ಇಲ್ಲದೇ ಇರುವ ಕಾರಣದಿಂದ ಅಂದು ಬಗದಲ್ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಮೊದಲು ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಿ ಕೋಡಿ ಬಳಿಕ ಬಂದು ಉದ್ಘಾಟನೆ ಮಾಡಿ ಎಂದು ಪಟ್ಟು ಹಿಡಿಯುತ್ತಾರೆ ಗ್ರಾಮಸ್ಥರ ಮನವಿಗೆ ಮಣಿದ ಶಾಸಕ ಖಾಶೆಂಪೂರ್ ಈಗ ಈ ಆಸ್ಪತ್ರೆಗೆ ಹೋಗಲು ರಸ್ತೆ ನಿರ್ಮಾಣ ಮಾಡಿದ್ದಾರೆ. ರಸ್ತೆ ನಿರ್ಮಾಣಗೊಂಡರೂ 1ಕೋಟಿ60ಲಕ್ಷ ವೆಚ್ಚದ ಈ ಆಸ್ಪತ್ರೆಯ ಉದ್ಘಾಟನೆ ಮಾಡಲು ಯಾರೂ ಮುಂದಾಗುತ್ತಿಲ್ಲ.