ಬೆಂಗಳೂರು[ಜ.08]: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು, ನಾಳೆ ಭಾರತ್ ಬಂದ್ ಗೆ ಕರೆ ನೀಡಿವೆ. ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು, ಬ್ಯಾಂಕಿಂಗ್ ಸಂಘಟನೆಗಳು, ವ್ಯಾಪಾರ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಬೆಂಬಲ ಕೊಟ್ಟಿವೆ. ಆದರೆ, ಕರ್ನಾಟಕದಲ್ಲಿ ಬಹುತೇಕ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ಹೀಗಾಗಿ ಕರ್ನಾಟಕಕ್ಕೆ ಬಂದ್ ಬಿಸಿ ತಟ್ಟೋದು ಬಹುತೇಕ ಅನುಮಾನ. SBI ಹೊರತುಪಡಿಸಿ ಉಳಿದ ಎಲ್ಲ ಬ್ಯಾಂಕ್ ಗಳು ಬಂದ್ ಗೆ ಬೆಂಬಲಿ ನೀಡಿದ್ದು, ಮುಷ್ಕರದಲ್ಲಿ ಬ್ಯಾಂಕ್ ನೌಕರರು ಪಾಲ್ಗೊಳಲಿದ್ದಾರೆ. 

"

ಭಾರತ್ ಬಂದ್ಗೆ ಯಾವ್ಯಾವ ಸಂಘಟನೆಗಳು ಬೆಂಬಲ ಘೋಷಿಸಿವೆ?

ಕಾರ್ಮಿಕ ಸಂಘಟನೆಗಳು

* ಕೇಂದ್ರ, ರಾಜ್ಯ ಸರ್ಕಾರಿ ನೌಕರರು

* ಬ್ಯಾಂಕ್ ನೌಕರರು

* ಎಲ್ಐಸಿ ನೌಕರರು

* ಸಹಕಾರಿ ಬ್ಯಾಂಕ್ ನೌಕರರು

* ಸರ್ಕಾರಿ ಶಿಕ್ಷಕರು

* ಸಂಘಟಿತ ವಲಯದ ಕಾರ್ಮಿಕರು

* ರೈಲ್ವೆ ನೌಕರರು

* ಕಬ್ಬಿಣ-ಉಕ್ಕು ಕಾರ್ಖಾನೆ ನೌಕರರು

ಬಲವಂತ ಬಂದ್‌ ಮಾಡಿಸಿದರೆ ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ

ಏನೆಲ್ಲಾ ಸೇವೆಗಳು ಲಭ್ಯವಿರುತ್ತೆ?

ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಣೆ

* ಮೆಡಿಕಲ್ ಸ್ಟೋರ್, ತುರ್ತು ಸೇವೆ ಲಭ್ಯ

* ಹಾಲು, ಹಣ್ಣು, ತರಕಾರಿ ವ್ಯಾಪಾರಕ್ಕೆ ಅಡ್ಡಿ ಇಲ್ಲ

* ಹೊಟೇಲ್ಗಳು ತೆರೆದಿರುವ ಸಾಧ್ಯತೆ 

ನಾಳೆ [ಬುಧವಾರ] ಭಾರತ್ ಬಂದ್ ಬಗ್ಗೆ ದಿಢೀರ್ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಿಎಂ

ರಜೆ ಇಲ್ಲ, ಬಸ್ ಓಡಾಟ ನಿಲ್ಲಲ್ಲ..!

ಶಾಲಾ-ಕಾಲೇಜುಗಳಿಗೆ ರಜೆ ಇರೋದಿಲ್ಲ

* ಬಿಎಂಟಿಸಿ, ಕೆಎಸ್ಆರ್ಟಿಸಿ ಸೇವೆ ಲಭ್ಯ

* ಬೆಂಗಳೂರಲ್ಲಿ ಮೆಟ್ರೋ ಸೇವೆಗೆ ಅಡ್ಡಿ ಇಲ್ಲ

* ಆಟೋ, ಟ್ಯಾಕ್ಸಿ, ಓಲಾ, ಊಬರ್ ಸೇವೆ ಲಭ್ಯ

* ಎಟಿಎಂಗಳ ಸೇವೆ ಲಭ್ಯ

ಬಂದ್ಗೆ ಸ್ಯಾಂಡಲ್ವುಡ್ ಬೆಂಬಲ ಇಲ್ಲ..!

ಇನ್ನು, ಭಾರತ್ ಬಂದ್ ಬಗ್ಗೆ ಸ್ಯಾಂಡಲ್ವುಡ್ ತಟಸ್ಥವಾಗಿದ್ದು, ಎಂದಿನಂತೆ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನ ಇರಲಿದೆ. ಸಿನಿಮಾದ ಚಿತ್ರಿಕರಣ ನಿಲ್ಲಿಸಲು ಸಾಧ್ಯವಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಗುಬ್ಬಿ ಸ್ಪಷ್ಟಪಡಿಸಿದ್ದಾರೆ.

ಬಂದ್‌ಗೆ ವಾಟಾಳ್ ಬಾಹ್ಯ ಬೆಂಬಲ..!

ಭಾರತ್ ಬಂದ್ ಗೆ ವಾಟಾಳ್ ನಾಗರಾಜ್ ಬಾಹ್ಯ ಬೆಂಬಲ ನೀಡಿದ್ದಾರೆ. ಕೇಂದ್ರದ ಕಾರ್ಮಿಕ ನೀತಿ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದಿದ್ದಾರೆ.. 

ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮೆರವಣಿಗೆ ಅವಕಾಶ ಇಲ್ಲ. ದಿನನಿತ್ಯದ ಚಟುವಟಿಕೆಗೆ ಸಮಸ್ಯೆ ಇಲ್ಲ ಎಂದಿದ್ದಾರೆ.
 
ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನ ವಿರೋಧಿಸಿ ಕರೆ ನೀಡಿರೋ ಭಾರತ್  ಬಂದ್ ಬಿಸಿ ಕರ್ನಾಟಕಕ್ಕೆ ತಟ್ಟುವುದು ಬಹುತೇಕ ಅನುಮಾನ.

ಭಾರತ್ ಬಂದ್ : ಜಿಲ್ಲೆಗಳಲ್ಲಿಯೂ ಇದೆ ಬೆಂಬಲ