Asianet Suvarna News Asianet Suvarna News

ಡಿಸೆಂಬರ್‌ ವಿದ್ಯುತ್‌ ಬಿಲ್‌ನಲ್ಲಿ ಯುನಿಟ್‌ಗೆ 85 ಪೈ. ಹೆಚ್ಚು ಶುಲ್ಕ !

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು (ಬೆಸ್ಕಾಂ) ತನ್ನ ವ್ಯಾಪ್ತಿಯ ವಿದ್ಯುತ್‌ ಗ್ರಾಹಕರಿಗೆ ವಿದ್ಯುತ್‌ ಶುಲ್ಕದ ಜತೆಗೆ ಡಿಸೆಂಬರ್‌ ಬಿಲ್‌ನಲ್ಲಿ ಬರುವಂತೆ ನವೆಂಬರ್‌ ತಿಂಗಳ ಬಳಕೆಯ ವಿದ್ಯುತ್‌ ಮೇಲೆ ಪ್ರತಿ ಯುನಿಟ್‌ಗೆ 85 ಪೈಸೆ ಹೆಚ್ಚುವರಿಯಾಗಿ ಇಂಧನ ಹೊಂದಾಣಿಕೆ ವೆಚ್ಚ ನಿಗದಿ ಮಾಡಿ ಆದೇಶ ಹೊರಡಿಸಿದೆ.

BESCOM order 85 paisa per unit in December electricity bill. More fees at bengaluru rav
Author
First Published Nov 14, 2023, 5:29 AM IST

ಬೆಂಗಳೂರು (ನ.14): ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು (ಬೆಸ್ಕಾಂ) ತನ್ನ ವ್ಯಾಪ್ತಿಯ ವಿದ್ಯುತ್‌ ಗ್ರಾಹಕರಿಗೆ ವಿದ್ಯುತ್‌ ಶುಲ್ಕದ ಜತೆಗೆ ಡಿಸೆಂಬರ್‌ ಬಿಲ್‌ನಲ್ಲಿ ಬರುವಂತೆ ನವೆಂಬರ್‌ ತಿಂಗಳ ಬಳಕೆಯ ವಿದ್ಯುತ್‌ ಮೇಲೆ ಪ್ರತಿ ಯುನಿಟ್‌ಗೆ 85 ಪೈಸೆ ಹೆಚ್ಚುವರಿಯಾಗಿ ಇಂಧನ ಹೊಂದಾಣಿಕೆ ವೆಚ್ಚ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಕಳೆದ ಜೂನ್ ತಿಂಗಳಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಅನ್ವಯವಾಗುವಂತೆ ಪ್ರತಿ ಯುನಿಟ್‌ಗೆ ಹೆಚ್ಚಳ ಮಾಡಿದ್ದ 50 ಪೈಸೆ ಎಫ್ಎಸಿ ಶುಲ್ಕದ ಜತೆಗೆ, ನವೆಂಬರ್‌ ತಿಂಗಳಿಗೆ ಸೀಮಿತವಾಗಿ 35 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಹೀಗಾಗಿ ಎಫ್‌ಎಸಿ ಹೆಸರಿನಲ್ಲೇ ಪ್ರತಿ ಯೂನಿಟ್‌ಗೆ 85 ಪೈಸೆ ಹೆಚ್ಚುವರಿ ಶುಲ್ಕ ನವೆಂಬರ್‌ ತಿಂಗಳ ವಿದ್ಯುತ್‌ ಬಳಕೆಗೆ ವಸೂಲಿ ಮಾಡಲಾಗುವುದು. 

ಅಪಘಾತದ ದೂರಿಗೆ ವಿಳಂಬ ಮಾಡಿದ ಸಾರಿಗೆ ನಿಗಮ, ಚಾಲಕ, ಕಂಡಕ್ಟರ್‌ಗೆ ₹17 ಲಕ್ಷ ದಂಡ!

ಅಕ್ಟೋಬರ್‌ ತಿಂಗಳ ಬಳಕೆಗೆ 1.01 ರು. ನಿಗದಿ ಮಾಡಲಾಗಿತ್ತು. ವಿದ್ಯುತ್‌ ಕೊರತೆಯಿಂದ ಖರೀದಿ ಪ್ರಮಾಣ ಹೆಚ್ಚಾಗಿದ್ದು, ಈ ತಿಂಗಳು ಇಂಧನ ಹೊಂದಾಣಿಕೆ ವೆಚ್ಚ ಹೆಚ್ಚಾಗುವ ಆತಂಕ ಉಂಟಾಗಿತ್ತು. ಆದರೆ ಕಳೆದ ತಿಂಗಳ ಎಫ್‌ಎಸಿಗಿಂತ 0.16 ಪೈಸೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಪೌರಕಾರ್ಮಿಕರು, ದಲಿತ ಹೆಣ್ಣುಮಕ್ಕಳ ವಿವಾಹಕ್ಕೆ ಬಿಬಿಎಂಪಿಯಿಂದ 1 ಲಕ್ಷ ನೆರವು

Follow Us:
Download App:
  • android
  • ios