ಬೆಂಗಳೂರು(ಮಾ.26): ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಕಾಮೆಂಟ್ ಮಾಡುತ್ತಿರುವವರ ಹಾವಳಿ ಇನ್ನೂ ನಿಂತಿಲ್ಲ. ಬೆಂಗಳೂರಿನ ಜಾವಿದ್ ಬೇಗ್ ಎಂಬಾತ ಪಾಕಿಸ್ತಾನ ಸೇನಾ ಗೀತೆಯನ್ನು ಬೆಂಬಲಿಸಿ ಕಮೆಂಟ್ ಮಾಡಿದ್ದಾನೆ.

ಅತಿಫ್ ಅಸ್ಲಾಂ ಎಂಬಾತ ಪಾಕ್ ಆರ್ಮಿ ಹೊಗಳಿ ವಿಡಿಯೋ ಅಪ್ ಲೋಡ್ ಮಾಡಿದ್ದ. ಈ ವೇಳೆ ಜಾವಿದ್ ಬೇಗ್ ಎಂಬಾತ ಇದನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾನೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾಗಿರೋ ಬೇಗ್, ಪಾಕಿಸ್ತಾನ ಸೇನಾ ಗೀತೆ ಬೆಂಬಲಿಸಿ ಕಾಮೆಂಟ್ ಮಾಡಿದ್ದಾನೆ. ಕಾಮೆಂಟ್ ಡಿಲಿಟ್ ಮಾಡುವಂತೆ ಸಾರ್ವಜನಿಕರು ಬುದ್ದಿಮಾತು ಹೇಳಿದಾಗ, ಇದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಉದ್ದಟತನ ಮೆರೆದಿದ್ದಾನೆ.

ಸದ್ಯ ಬೇಗ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಸಾರ್ವಜನಿಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.