Asianet Suvarna News Asianet Suvarna News

ಬೆಂಗಳೂರು ಎಷ್ಟು ಸೇಫ್‌, ಊರು ಬಿಟ್ಟು ಅಮೆರಿಕ ಸೇರಿದ್ದಕ್ಕೆ 4 ಕಾರಣ ಕೊಟ್ಟ ಮಹಿಳೆ!

ಬೆಂಗಳೂರಿನ ಮಹಿಳೆಯೊಬ್ಬರು ಅಮೆರಿಕದಲ್ಲಿ ನೆಲೆಸಲು ನಿರ್ಧರಿಸಿ, ತಮ್ಮ ನಿರ್ಧಾರಕ್ಕೆ ಕಾರಣವಾದ ನಾಲ್ಕು ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಸಂಸ್ಕೃತಿ, ಸುರಕ್ಷತೆ, ವೀಸಾ ಸ್ವಾತಂತ್ರ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಅವಕಾಶಗಳು ಅವರ ಆಯ್ಕೆಯ ಹಿಂದಿನ ಪ್ರಮುಖ ಅಂಶಗಳಾಗಿವೆ.

Bengaluru Woman explain city Safety Among Reasons to Move to US san Francisco gow
Author
First Published Aug 18, 2024, 5:27 PM IST | Last Updated Aug 18, 2024, 5:27 PM IST

ಬೆಂಗಳೂರು (ಆ.18): ಬೆಂಗಳೂರಿನ ಮಹಿಳೆಯೊಬ್ಬರು ವಾಸಕ್ಕೆ ಅಮೆರಿಕದಲ್ಲಿ ಉಳಿದುಕೊಳ್ಳಬೇಕೋ? ಅಥವಾ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಬೇಕೋ? ಎಂಬ ಗೊಂದಲದಲ್ಲಿದ್ದು, ಕೊನೆಗೆ ಬೆಂಗಳೂರು ಬಿಟ್ಟು ಹೋಗಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕದಲ್ಲಿ ಯಾಕೆ ಉಳಿದುಕೊಂಡೆ ಎಂಬುದಕ್ಕೆ ಅವರು 4 ಕಾರಣಗಳನ್ನು ನೀಡಿದ್ದಾರೆ.

ತನ್ನ ಊರಿನಲ್ಲೇ ಇರಬೇಕೋ ಅಥವಾ ಅಮೇರಿಕಾಗೆ ಹೋಗಬೇಕೋ ಎಂಬ ಗೊಂದಲದಲ್ಲಿದ್ದೆ ಅದಕ್ಕಾಗಿ ಅತಿಯಾದ ಯೋಚನೆ ಮತ್ತು ಹಲವಾರು ಕಪ್ ಕಾಫಿ ಕುಡಿದಿದ್ದೆ, ಕೊನೆಗೂ ಅಮೆರಿಕವೇ ತನ್ನ ಹೊಸ ನೆಲೆ ಎಂದು ನಿರ್ಧರಿಸಿದೆ ಎಂದು ಡಿಸೈನರ್‌ ವಿಭಾ ಮೋಹನ್‌ ಎಂಬುವವರು ಟ್ವೀಟ್ ಮಾಡಿ ವಿವರಣೆ ನೀಡಿದ್ದು, ಸ್ಯಾನ್ ಫ್ರಾನ್ಸಿಸ್ಕೋ "ಮುಂದಿನ ಕೆಲವು ವರ್ಷಗಳ" ವರೆಗೆ ತನ್ನ ಮನೆಯಾಗಿರುತ್ತದೆ  ಎಂದು ಹೇಳಿಕೊಂಡಿದ್ದಾರೆ

ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ, ಇಂದಿನಿಂದ ನಾಗಸಂದ್ರ-ಮಾದವಾರ ಟ್ರಯಲ್ ರನ್‌

ಸ್ಯಾನ್ ಫ್ರಾನ್ಸಿಸ್ಕೋವನ್ನು ಆಯ್ಕೆ ಮಾಡಿಕೊಂಡಿದ್ಯಾಕೆ ಎಂದು ಅವರು ನಾಲ್ಕು ಕಾರಣವನ್ನು ಅವರು ಬಿಚ್ಚಿಟ್ಟಿದ್ದಾರೆ. ಅವರ ಪೋಸ್ಟ್‌ಗಳಿಗೆ ಹಲವು ಮಂದಿ ಒಪ್ಪಿಗೆ ಸೂಚಿಸಿದ್ದು ಇನ್ನಷ್ಟು ಚಿಂತನೆಗಳನ್ನು ಸೇರಿಸಿದ್ದಾರೆ.

ಮೊದಲನೇ ಕಾರಣ, ಸಂಸ್ಕೃತಿ: ಇಲ್ಲಿಯ ಸಂಸ್ಕೃತಿಯಲ್ಲಿ ನಾನು ಇಷ್ಟಪಡುವ  2 ವಿಚಾರಗಳಿವೆ. ಮೊದಲನೆಯದು ಕಾಡು ಮತ್ತು ಬಲವಾದ ನಂಬಿಕೆಯ ಆಶಾವಾದ. ಪ್ರತಿಯೊಬ್ಬರೂ ಸಾಧ್ಯ ಎಂಬುದರ ಬಗ್ಗೆ ಬಲವಾಗಿ ನಂಬಿ ಉತ್ಸುಕರಾಗಿರುತ್ತಾರೆ. ಒಂದು ವೇಳೆ ವಿಫಲರಾದರೆ ಮರಳಿ ಪ್ರಯತ್ನಿಸುತ್ತಾರೆ. ಎರಡನೆಯದಾಗಿ ಕರಕುಶಲತೆ, ನಿಮ್ಮ ಕೌಶಲ್ಯವನ್ನು ಉತ್ತಮ ಪಡಿಸಿಕೊಳ್ಳುವಲ್ಲಿ ತಕ್ಕುನಾದ ವಾತಾವರಣ ಇಲ್ಲಿದೆ.

ರಾಜ್ಯಾದ್ಯಂತ ಆರ್‌ಟಿಇ ಮರು ಅನುಷ್ಠಾನಕ್ಕೆ ಒತ್ತಾಯ: 20 ಸಾವಿರ ವಿದ್ಯಾರ್ಥಿಗಳಿಂದ ಅಭಿಯಾನ

ಎರಡನೇ ಕಾರಣ, ಸುರಕ್ಷತೆ: ಉತ್ತಮ ವಾತಾವರಣ, ತಾಜಾ ಗಾಳಿಯಲ್ಲಿ ಉಸಿರಾಡುತ್ತಾ ಆರಾಮದಾಯಕವಾಗಿ ಕೆಲಸ ಮಾಡುತ್ತಾ ಇರಬಹುದು. ಭಯವಿಲ್ಲದೆ ಎಲ್ಲರೊಂದಿಗೆ ಬೆರೆತು ಆರಾಮದಾಯಕವಾಗಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು.  ಇದಕ್ಕೆ ಯಾವುದೇ ಮಿತಿ ಇಲ್ಲ. ಹಿಂತಿರುಗಿ ಬೆನ್ನು ನೋಡಿಕೊಂಡು ಭಯದ ವಾತಾವರಣದಲ್ಲಿ ನಡೆಯಲು, ಅಥವಾ ಓಡಾಡಲು ಯಾವುದೇ ಭಯ ಇಲ್ಲ. ಎಲ್ಲಿ ಬೇಕಾದರೂ ಹೋಗುವ ಸ್ವಾತಂತ್ರ್ಯವಿದೆ. ಎಲ್ಲೋ ಸುರಕ್ಷಿತವಾಗಿ ವಾಸಿಸಬೇಕು ಎಂಬ ಆಯ್ಕೆಗಳೇ ಇರುವುದಿಲ್ಲ, ಎಲ್ಲವೂ ಸುರಕ್ಷಿತ.

ಮೂರನೇ ಕಾರಣ, ವೀಸಾ: ನಾನು ಅಮೆರಿಕಕ್ಕೆ ಹೋಗಲು H1Bಗೆ  ಸೀಮಿತಕ್ಕಲ್ಲ ಅಥವಾ ಸ್ನಾತಕೋತ್ತರ ಪದವಿಗಾಗಿ ಅಲ್ಲ ಎಂಬುದು ನನಗೆ ಗೊತ್ತಿತ್ತು. ಹೀಗಾಗಿ O1 ವೀಸಾ ಬೇಕಿತ್ತು ಮತ್ತು ಅದರೊಂದಿಗೆ ಬರುವ ಸ್ವಾತಂತ್ರ್ಯವನ್ನು ಪಡೆಯುವುದು ಕೂಡ ತುಂಬಾ ಸುಲಭವಾಗಿದೆ.

O-1 ವಲಸೆರಹಿತ ವೀಸಾವು ವಿಜ್ಞಾನ, ಕಲೆ, ಶಿಕ್ಷಣ, ವ್ಯಾಪಾರ ಅಥವಾ ಅಥ್ಲೆಟಿಕ್ಸ್‌ನಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗೆ ಅಥವಾ ಚಲನಚಿತ್ರ, ದೂರದರ್ಶನ ಉದ್ಯಮದಲ್ಲಿ ಅಸಾಧಾರಣ ಸಾಧನೆಯ ಪ್ರದರ್ಶಿಸಿದ ದಾಖಲೆಯನ್ನು ಹೊಂದಿರುವ ಮತ್ತು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಗಳಿಗಾಗಿ ಕೊಡಲಾಗುತ್ತದೆ. ವಿಭಾ ಮೋಹನ್  ಅವರ O-1 ವೀಸಾವನ್ನು ಪಡೆದ ನಂತರ ಸಂತೋಷಪಟ್ಟರು.

ನಾಲ್ಕನೇ ಕಾರಣ, ತಂತ್ರಜ್ಞಾನ: ಬೆಂಗಳೂರು ಕೆಲವು ಅದ್ಭುತ ಮನಸ್ಸುಗಳನ್ನು ಹೊಂದಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಟೆಕ್‌ ಕ್ಷೇತ್ರ? ಇದು ಸಾಮಾನ್ಯವಾಗಿ ಫಿನ್ಟೆಕ್, ಲಾಸ್ಟ್ ಮೈಲ್, ಇ-ಕಾಮರ್ಸ್ ಬಗ್ಗೆ ನಿಮಗೆ ಗೊತ್ತಾ? ಇದು ಬದಲಾಗುತ್ತಿದೆ, ಇದು ಅದ್ಭುತವಾಗಿದೆ, ಆದರೆ ನಾನು ಹೆಚ್ಚು ಆಸಕ್ತಿ ಹೊಂದಿರುವ ಸಮಸ್ಯೆಗಳು? ಇವುಗಳನ್ನು ಇನ್ನೂ ಕೂಡ ಶಂಕೆಯಲ್ಲೇ ಇಟ್ಟು ಪರಿಹರಿಸುವ ಪ್ರಯತ್ನವಾಗುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪರಿಹರಿಸಲಾಗುತ್ತಿದೆ.

ನನ್ನ ಹೃದಯದಲ್ಲಿ ಬೆಂಗಳೂರು ಸದಾ ಇರುತ್ತದೆ. ನಾನು ಉತ್ತಮ ಸ್ನೇಹಿತರನ್ನು ಮಾಡಿಕೊಂಡಿದ್ದೇನೆ ಮತ್ತು ಅಲ್ಲಿ ಹೆಚ್ಚಿನದನ್ನು ಕಲಿತಿದ್ದೇನೆ. ಆದರೆ ನಾನು ಏನು ಮಾಡಬೇಕೆಂದು ಬಯಸಿದ್ದೇನೆ, ನನ್ನ ಸಾಧನೆಗೆ ಇದೀಗ ಅಮೆರಿಕಾದ ಸ್ಥಳವಾಗಿದೆ ಎಂದು ವಿಭಾ ಮೋಹನ್ ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios