ಬೆಂಗಳೂರು ವಿವಿ 58ನೇ ಘಟಿಕೋತ್ಸವ: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಗೌರವ ಡಾಕ್ಟರೇಟ್

ಇಂದು (ಅ.17) ಬೆಂಗಳೂರು ವಿವಿ 58ನೇ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಇಬ್ಬರು ಸಾಧಕರಿಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ

Bengaluru University 58th convocation today  HD Deve Gowda and ISRO chairman Somnath conferred with honorary doctorates rav

ಬೆಂಗಳೂರು (ಅ.17): ಇಂದು (ಅ.17) ಬೆಂಗಳೂರು ವಿವಿ 58ನೇ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಇಬ್ಬರು ಸಾಧಕರಿಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ.

ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ 10.30ಕ್ಕೆ ಆರಂಭವಾಗಲಿರುವ ಘಟಿಕೋತ್ಸವ. ಒಟ್ಟು 28,871 ವಿದ್ಯಾರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ. ಒಟ್ಟು 299 ಚಿನ್ನದ ಪದಕ ಹಾಗೂ 113 ನಗದು ಬಹುಮಾನಗಳನ್ನು 193 ವಿದ್ಯಾರ್ಥಿಗಳಿಗೆ ನೀಡಲಾಗುವುದು.  ಸ್ನಾತಕ ಪದವಿಯಲ್ಲಿ ಒಟ್ಟು 104 ಚಿನ್ನದ ಪದಕ ನೀಡಲಿರುವ ಬೆಂಗಳೂರು ವಿವಿ.

ಕಾವೇರಿ ಜಲವಿವಾದ ವಿಚಾರಕ್ಕೆ ರಾಜ್ಯ ಬಂದ್‌ ನಡೆಸಿದ್ದ ಹಿನ್ನೆಲೆ ಸೆಪ್ಟೆಂಬರ್‌ 29ಕ್ಕೆ ನಿಗದಿಯಾಗಿದ್ದ ಘಟಿಕೋತ್ಸವವನ್ನು ಬೆಂಗಳೂರು ವಿಶ್ವವಿದ್ಯಾಲಯ ಪೋಸ್ಟ್ ಪೋನ್ ಮಾಡಿತ್ತು. ಇಂದು ನಡೆಯಲಿರುವ ಬೆಂಗಳೂರು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಝೆರೋದಾ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಮುಖ್ಯ ಅತಿಥಿಯಾಗಿದ್ದ ಭಾಗಿಯಾಗಲಿದ್ದಾರೆ. ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. 

Latest Videos
Follow Us:
Download App:
  • android
  • ios