Asianet Suvarna News Asianet Suvarna News

Bengaluru: ಕರ್ತವ್ಯನಿರತ ಟ್ರಾಫಿಕ್‌ ಎಎಸ್‌ಐ ಹೃದಯಾಘಾತಕ್ಕೆ ಬಲಿ

ಬೆಂಗಳೂರು ಸಂಚಾರಿ ಪೊಲೀಸರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮಾಂಜಿನಯ್ಯ ಕರ್ತವ್ಯನಿರ್ವಹಿಸುತ್ತಿದ್ದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

Bengaluru traffic ASI on duty succumbs to heart attack sat
Author
First Published Jul 6, 2023, 8:48 PM IST

ಬೆಂಗಳೂರು (ಜು.06): ಸಿಲಿಕಾನ್‌ ಸಿಟಿ ಈಗ ಟ್ರಾಫಿಕ್‌ ಸಿಟಿಯಾಗಿಯೂ ಬೆಳೆಯುತ್ತಿದೆ. ಇಲ್ಲಿ ಸಂಚಾರಿ ಪೊಲೀಸರಾಗಿ ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್‌ ಎಎಸ್‌ಐ ರಾಮಾಂಜಿನಯ್ಯ ಕರ್ತವ್ಯನಿರತರಾಗಿದ್ದ ಸಮಯದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಕರ್ತವ್ಯ ನಿರತ ಎಎಸ್ಐ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ಎಎಸ್ಐ ಅವರನ್ನು ರಾಮಾಂಜನಯ್ಯ ಆಗಿದ್ದಾರೆ. ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಟೀ ಅಂಗಡಿ ಬಳಿ ಹೋದಾಗ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. ಬಿದ್ದ ಕೆಲವೇ ಕ್ಷಣಗಳಲ್ಲಿ ಸ್ಥಳದಲ್ಲಿಯೇ ಎಎಸ್‌ಐ ಸಾವನ್ನಪ್ಪಿದ್ದಾರೆ. ಇನ್ನು ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಮಾಂಜನಯ್ಯ ಕರ್ತವ್ಯದ ವೇಳೆ ದಣಿವಾದ್ದರಿಂದ ಬಸವೇಶ್ವರ ನಗರದ ಟೀ ಅಂಗಡಿ ಬಳಿಗೆ ಬಂದಿದ್ದಾರೆ. ಆದರೆ, ಅಲ್ಲಿಯೂ ನಿಂತುಕೊಳ್ಳಲಾಗದೇ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಇನ್ನು ಮೃತ ಸಂಚಾರಿ ಎಎಸ್‌ಐ ರಾಮಾಂಜನಯ್ಯ ಅವರು ರಾಮನಗರ ಮೂಲದವರಾಗಿದ್ದಾರೆ.

Bengaluru: ಮಹಿಳಾ ಸಂಚಾರಿ ಪೊಲೀಸ್‌ ಹೃದಯಾಘಾತದಿಂದ ಸಾವು: ಅನಾಥವಾದ ಮಗು

ಸ್ಕ್ಯಾನಿಂಗ್‌ ಡೋರ್‌ಗಳಿಂದ ಜೀವಕ್ಕೆ ಆಪತ್ತು: ಇನ್ನು ಈ ಕುರಿತು ಡಾ. ಅರವಿಂದ್‌ ರಾಜೀವ್‌ ಎನ್ನುವವರು "ಈ ಬಾಡಿ ವಾರ್ನ್ ಕ್ಯಾಮೆರಾದಿಂದ ಎದೆ ನೋವು ಬರೋದು, ಕತ್ತು ಹಾಗೂ ಅಕ್ಕಪಕ್ಕದ ಭುಜಗಳು ನೋವು ಬರುವುದು, ಹೃದಯ ಅಕ್ಕ ಪಕ್ಕದ ನರಗಳ ಸೆಳೆತ, ಆ ಗೋದು ,ಕೆಲವರಿಗೆ ಗೋಚರಿಸಿದೆ. ಜೊತೆಗೆ ಮಳೆ ಬಂದಾಗ ನಾವು ಜರ್ಕಿನ್ ಒಳಗಡೆ ಕ್ಯಾಮೆರಾ ಇಟ್ಟುಕೊಂಡಾಗ ಆ ಕ್ಯಾಮರಾ ತುಂಬಾ ಬಿಸಿಯಾಗಿರುತ್ತದೆ. ಇದರಿಂದ ರೇಡಿಯೇಷನ್ ಕೂಡ ಜಾಸ್ತಿಯಾಗಿ ನಮ್ಮ ಹೃದಯದ ಮೇಲೆ ಪರಿಣಾಮ ಬೀರಬಹುದು ಎಂದು ಬರೆದುಕೊಂಡಿದ್ದಾರೆ. ಇದರ ಬಗ್ಗೆ ನಾವೆಲ್ಲರೂ ಹೆಚ್ಚಿನ ಗಮನ ಹರಿಸಿ ವೈದ್ಯರ ಸಲಹೆ ಪಡೆದು, ಮೀಡಿಯಾ ಅಥವಾ ನಮ್ಮ ಇಲಾಖೆಗೆ ಮನದಟ್ಟು ಮಾಡಿಕೊಟ್ಟು, ಕೋರ್ಟಿಗೆ ಇದರ ವಿವರ ಸಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ. ದಯಮಾಡಿ ಇದರ ಬಗ್ಗೆ ಎಲ್ಲರೂ ಗಮನ ಹರಿಸಿ ಎಚ್ಚೆತ್ತುಕೊಂಡು ನಮ್ಮ ಪ್ರಾಣ ಉಳಿಸಿಕೊಳ್ಳೋಣ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಬೆಂಗಳೂರು (ಜೂ.19): ಇಡೀ ಜಗತ್ತನ್ನೇ ರಕ್ಕಸವಾಗಿ ಕಾಡಿದ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದರೂ ಸಂಚಾರಿ ಮಹಿಳಾ ಪೊಲೀಸ್‌, ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ, ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಒಂದು ವರ್ಷದ ಮಗು ಅಕ್ಷರಶಃ ಅನಾಥವಾಗಿದೆ. ಬೆಂಗಳೂರಿನಲ್ಲಿ ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಮಹಿಳಾ ಪೊಲೀಸ್ ಪ್ರಿಯಾಂಕಾ ಹೃದಯಾಘಾತದಿಂದ ಸಾವನ್ನಪ್ಪಿರುವ ಮಹಿಳೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಿಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋದ ಪ್ರಿಯಾಂಕಾಗೆ ರಾತ್ರಿ 11.30ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಆಸ್ಪತ್ರೆಗೂ ಹೋಗಲಾಗದೇ ಹಾಸಿಗೆಯಲ್ಲಿಯೇ ನರಳಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios