ಪ್ರಯಾಣಿಕರೇ ಗಮನಿಸಿ: ಬೆಂಗಳೂರು-ಮಂಗಳೂರು ರೈಲು ಸೇವೆ 1 ವಾರ ರದ್ದು!
ಡಿ.14ರಿಂದ ಡಿ.22ರವರೆಗೆ 20 ರೈಲು ಸೇವೆಯನ್ನು ಹಾಸನದಲ್ಲಿ ಯಾರ್ಡ್ ಪುನರ್ ನಿರ್ಮಾಣ ಕಾರ್ಯ ಹಿನ್ನೆಲೆಯಲ್ಲಿ ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು (ಡಿ.13): ಡಿ.14ರಿಂದ ಡಿ.22ರವರೆಗೆ 20 ರೈಲು ಸೇವೆಯನ್ನು ಹಾಸನದಲ್ಲಿ ಯಾರ್ಡ್ ಪುನರ್ ನಿರ್ಮಾಣ ಕಾರ್ಯ ಹಿನ್ನೆಲೆಯಲ್ಲಿ ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಡಿ.14ರಿಂದ ಡಿ.22ರವರೆಗೆ ಮೈಸೂರು - ಅರಸಿಕೆರೆ (06214), ಅರಸಿಕೆರೆ -ಮೈಸೂರು (06213), ಯಶವಂತಪುರ- ಮೈಸೂರು (16207), ಮೈಸೂರು - ಯಶವಂತಪುರ (16208), ಮೈಸೂರು-ತಾಳಗುಪ್ಪ (16222), ಮೈಸೂರು -ಅರಸಿಕೆರೆ (06268), ಅರಸಿಕೆರೆ -ಮೈಸೂರು (06267), ಮೈಸೂರು -ಸರ್.ಎಂ.ವಿ.ಬೆಂಗಳೂರು (06269) ರೈಲನ್ನು ರದ್ದುಗೊಳಿಸಲಾಗಿದೆ.
ಡಿ.15ರಿಂದ ಡಿ.23ರವರೆಗೆ ತಾಳಗುಪ್ಪ - ಮೈಸೂರು (16221), ಡಿ.16ರಿಂದ ಡಿ.20ರವರೆಗೆ ಕೆಎಸ್‌ಆರ್ ಬೆಂಗಳೂರು-ಕಣ್ಣೂರು (16511), ಡಿ.17ರಿಂದ ಡಿ.21ರವರೆಗೆಗೆ ಕಣ್ಣೂರು - ಕೆಎಸ್‌ಆರ್ ಬೆಂಗಳೂರು (16512), ಡಿ.16 ರಿಂದ ಡಿ.20ರವರೆಗೆ ಕೆಎಸ್‌ಆರ್ ಬೆಂಗಳೂರು - ಕಾರವಾರ (16595), ಡಿ.17ರಿಂದ ಡಿ.21ರವರೆಗೆ ಕಾರವಾರ - ಬೆಂಗಳೂರು (16596), ಡಿ.13ರಿಂದ ಡಿ.21ರವೆಗೆ ಎಸ್‌ಎಂವಿಟಿ ಬೆಂಗಳೂರು -ಮೈಸೂರು (16270) ರದ್ದುಗೊಳಿಸಲಾಗಿದೆ.
ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಏಕಾಏಕಿ ಡೆಂಘೀ ಕೇಸ್ ಹೆಚ್ಚಳ!
ಡಿ.16ರಂದು ಯಶವಂತಪುರ - ಮಂಗಳೂರು ಜಂಕ್ಷನ್ (16539), ಡಿ.17ರಂದು ಮಂಗಳೂರು ಜಂಕ್ಷನ್ - ಯಶವಂತಪುರ (16540) ರೈಲು ಸಂಚಾರ ಇರುವುದಿಲ್ಲ. ಡಿ.14,17, 19 ಮತ್ತು 21ರಂದು ಯಶವಂತಪುರ - ಮಂಗಳೂರು ಜಂಕ್ಷನ್ (16575) ಹಾಗೂ ಡಿ.15, 18, 20 ಮತ್ತು 22ರಂದು ಮಂಗಳೂರು ಜಂಕ್ಷನ್ - ಯಶವಂತಪುರ (16576) ರೈಲು ರದ್ದುಗೊಳಿಸಲಾಗಿದೆ. ಯಶವಂತಪುರ - ಕಾರವಾರ ನಡುವೆ ಸಂಚರಿಸುವ (16515) ರೈಲನ್ನು ಡಿ.13, 15, 18, 20 ಮತ್ತು 22ರಂದು ರದ್ದುಗೊಳಿಸಲಾಗಿದೆ. ಕಾರವಾರ - ಯಶವಂತಪುರ ನಡುವೆ ಸಂಚರಿಸುವ (16516) ರೈಲನ್ನು ಡಿ.14, 16, 19, 21 ಹಾಗೂ 23 ರಂದು ಸಂಚಾರ ರದ್ದುಗೊಳಿಸಲಾಗಿದೆ.