ಎಸ್‌ಡಿಪಿಐ ಜತೆ ಬಹಿರಂಗವಾಗಿ ಕಾಣಿಸಿಕೊಳ್ಳದ ಫೈರೋಜ್‌ ಪಾಷ|  ಟಿಪ್ಪು ಆರ್ಮಿ ಹೆಸರಿನ ಸಂಘಟನೆ ಕಟ್ಟಿಕೊಂಡಿದ್ದ ಆತ, ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡಿದ್ದ ಫೈರೋಜ್‌ ಪಾಷ| 

ಬೆಂಗಳೂರು(ಆ.15): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಯ ಮುಂದಾಳು ಎಸ್‌ಡಿಪಿಐ ಮುಖಂಡ ಫೈರೋಜ್‌ ಪಾಷ, ಕೊರೋನಾ ಹೋರಾಟದಲ್ಲಿ ಪೊಲೀಸ್‌ ಇಲಾಖೆಯ ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

"

ಆರ್‌.ಟಿ.ನಗರದ ಫೈರೋಜ್‌, ಎಸ್‌ಡಿಪಿಐ ಜತೆ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಟಿಪ್ಪು ಆರ್ಮಿ ಹೆಸರಿನ ಸಂಘಟನೆ ಕಟ್ಟಿಕೊಂಡಿದ್ದ ಆತ, ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡಿದ್ದ. ಈ ಛದ್ಮವೇಷದಲ್ಲೇ ಆತನಿಗೆ ಪೊಲೀಸ್‌ ಇಲಾಖೆಯ ಸಿವಿಲ್‌ ಡಿಫೆನ್ಸ್‌ ಆಗಿ ನೇಮಕಗೊಳ್ಳಲು ಸಹಕಾರಿಯಾಗಿತ್ತು ಎಂದು ತಿಳಿದು ಬಂದಿದೆ.

Exclusive;ಹಠಕ್ಕೆ ಬಿದ್ದ ಉದ್ರಿಕ್ತರಿಂದ ಬೆಂಗಳೂರು ಗಲಭೆ; ನವೀನ್ ಪೋಸ್ಟ್ ನೆಪ ಮಾತ್ರ

ಕೊರೋನಾ ಹೋರಾಟದಲ್ಲಿ ಪೊಲೀಸ್‌ ಇಲಾಖೆಗೆ ಸಿವಿಲ್‌ ಢಿಪೆನ್ಸ್‌ನಾಗಿ ಫೈರೋಜ್‌ ಕೆಲಸ ಮಾಡಿದ್ದ. ಆತನಿಗೆ ಸಿವಿಲ್‌ ಡಿಫೆನ್ಸ್‌ ಗುರುತಿನ ಪತ್ರ ಸಹ ಸಿಕ್ಕಿತು. ಪೊಲೀಸ್‌ ಸ್ನೇಹಿತನಂತೆ ಗುರುತಿಸಿಕೊಂಡು ಆತ, ರಹಸ್ಯವಾಗಿ ಎಸ್‌ಡಿಪಿಐ ಸಂಘಟನೆಗೆ ನೀರೆರೆಯುತ್ತಿದ್ದ ಎಂದು ಮೂಲಗಳು ಹೇಳಿವೆ.

ಫೈರೋಜ್‌ಗೆ ಸೋಂಕು: 

ಗಲಭೆ ಪ್ರಕರಣದ ಪ್ರಮುಖ ಆರೋಪಿ ಫೈರೋಜ್‌ ಪಾಷಗೆ ಸೋಂಕು ದೃಢವಾಗಿದ್ದು, ಆತನನ್ನು ಕೋರಮಂಗಲ ಹತ್ತಿರದ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ. ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಆತನನ್ನು ವಿಚಾರಣೆ ಅಡ್ಡಿಯಾಯಿತು ಎಂದು ಪೊಲೀಸರು ಹೇಳಿದ್ದಾರೆ.