Asianet Suvarna News Asianet Suvarna News

ತೌಕ್ಟೆ ಚಂಡಮಾರುತ ಎಫೆಕ್ಟ್: ಬೆಂಗ್ಳೂರಿನಿಂದ ಹೊರಡುವ ಈ ರೈಲುಗಳು ರದ್ದು

* ಕರ್ನಾಟಕದ  ಕೆಲ ಭಾಗಗಳಿಗೂ ಅಪ್ಪಳಿಸಿದ ತೌಕ್ಟೆ ಚಂಡಮಾರುತ
* ಈಗಾಗಲೇ ಹವಾಮಾನ ಇಲಾಖೆಯಿಂದ ಎಚ್ಚರಿಕೆ 
*ರೈಲ್ವೇ ಸಂಚಾರದ ಮೇಲೂ ತೌಕ್ಟೆ ಚಂಡಮಾರುತ ಪರಿಣಾಮ 
 

Bengaluru Railways cancels several Express trains due to tauktae cyclone rbj
Author
Bengaluru, First Published May 15, 2021, 9:51 PM IST

ಬೆಂಗಳೂರು, (ಮೇ.15):  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ಟೆ ಚಂಡಮಾರುತ ಕರ್ನಾಟಕದ ಕೆಲ ಭಾಗಗಳಿಗೂ ಅಪ್ಪಳಿಸಿದ್ದು, ರೈಲ್ವೇ ಸಂಚಾರದ ಮೇಲೂ ತೌಕ್ಟೆ ಪರಿಣಾಮ ಬೀರಿದೆ.

 ಈಗಾಗಲೇ ಹವಾಮಾನ ಇಲಾಖೆಯಿಂದ ಎಚ್ಚರಿಕೆ ಹೊರಬಿದ್ದ ಹಿನ್ನೆಲೆ ಮೆಜೆಸ್ಟಿಕ್​ನ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಡುವ ಕೆಲವು ರೈಲುಗಳನ್ನು ರದ್ದಾಗಿವೆ.

ಕರಾವಳಿ ಭಾಗದಲ್ಲಿ ಹೆಚ್ಚಿದ ತೌಕ್ಟೆ ಸೈಕ್ಲೋನ್ ಆರ್ಭಟ

ರದ್ದುಗೊಂಡ ರೈಲುಗಳು
1. ರೈಲು ಸಂಖ್ಯೆ 06506 ಕೆಎಸ್ಆರ್ ಬೆಂಗಳೂರು - ಗಾಂಧಿಧಾಮ್ ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಅನ್ನು ಕೆಎಸ್ಆರ್ ಬೆಂಗಳೂರಿನಿಂದ 
ಇಂದು ( 15-5-2021ರಂದು) ರದ್ದು ಗೊಳಿಸಲಾಗುತ್ತಿದೆ (ಒಂದು ಟ್ರಿಪ್ ಮಾತ್ರ)
 
2. ರೈಲು ಸಂಖ್ಯೆ 06505 ಗಾಂಧಿಧಾಮ್ - ಕೆಎಸ್ಆರ್ ಬೆಂಗಳೂರು ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಅನ್ನು ಮೇ 18 ರಂದು ಗಾಂಧಿಧಾಮದಿಂದ ರದ್ದುಗೊಳಿಸಲಾಗಿದೆ. (ಒಂದು ಟ್ರಿಪ್ ಮಾತ್ರ)

Follow Us:
Download App:
  • android
  • ios