ನಟ ದರ್ಶನ್ ಮನೆಯ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದ ತನಿಖೆಯನ್ನು ರಾಜರಾಜೇಶ್ವರಿನಗರ ಪೊಲೀಸರು ದ್ದಾರೆ. ಸುಮಾರು 150ಕ್ಕೂ ಅಧಿಕ ಪುಟಗಳ ದೋಷಾರೋಪ ಠಾಣೆ ಪೂರ್ಣಗೊಳಿಸಿ ಗೂ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿಸಲಾಗಿದೆ. ಆದರೆ ದರ್ಶನ್ ಮನೆಯ ಕೆಲಸಗಾರ ಆರೋಪಿ ಹೇಮಂತ್ ವಿರುದ್ಧ ಪೊಲೀಸರು ದೋಷಾ ರೋಪ ಪಟ್ಟಿ ಸಲ್ಲಿಸಲಿದ್ದಾರೆ. 

ಬೆಂಗಳೂರು (ಜ.21): ನಟ ದರ್ಶನ್ ಮನೆಯ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದ ತನಿಖೆಯನ್ನು ರಾಜರಾಜೇಶ್ವರಿನಗರ ಪೊಲೀಸರು ದ್ದಾರೆ. ಸುಮಾರು 150ಕ್ಕೂ ಅಧಿಕ ಪುಟಗಳ ದೋಷಾರೋಪ ಠಾಣೆ ಪೂರ್ಣಗೊಳಿಸಿ ಗೂ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿಸಲಾಗಿದೆ. ಆದರೆ ದರ್ಶನ್ ಮನೆಯ ಕೆಲಸಗಾರ ಆರೋಪಿ ಹೇಮಂತ್ ವಿರುದ್ಧ ಪೊಲೀಸರು ದೋಷಾ ರೋಪ ಪಟ್ಟಿ ಸಲ್ಲಿಸಲಿದ್ದಾರೆ. 

ಸುಮಾರು 150ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಯಲ್ಲಿ ಆರೋಪಿ ಹೇಮಂತ್, ದರ್ಶನ್, ಸಂತ್ರಸ್ತೆ ಅಮಿತಾ ಜಿಂದಲ್ ಸೇರಿದಂತೆ ಹಲವರ ಪಟ್ಟಿ ಸಿದ್ದಪಡಿಸಿದ್ದು, ಘಟನೆಗೂ ದರ್ಶನ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿ ಸಲಾಗಿದೆ. ಸೋಮವಾರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ. ದರ್ಶನ್ ಅವರ ಪಾತ್ರ ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರಕರಣದಿಂದ ಅವರ ಹೆಸ ರನ್ನು ಕೈಬಿಡಲಾಗಿದೆ. ಘಟನೆಗೂ ದರ್ಶನ್ ಹೇಳಿಕೆಯನ್ನು ದಾಖಲಿಸಿದ್ದಾರೆ. ಐದಕ್ಕೂ ಹೆಚ್ಚು ಮಂದಿಯನ್ನು ಸಾಕ್ಷಿಗಳೆಂದು ಪರಿಗೆ ಣಿಸಿ ಅವರ ಹೇಳಿಕೆಯನ್ನು ದೋಷಾ ರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ದರ್ಶನ್ ಜೊತೆಗಿನ ಸ್ನೇಹ 'ಕಾಟೇರ' ನೋಡಿದ್ರಾ ಸುದೀಪ್‌?: ಕಿಚ್ಚನಿಗೆ ಸಿನಿಮಾ ತೋರಿಸಿದ್ರಾ ಡೈರೆಕ್ಟರ್ ತರುಣ್?

ದರ್ಶನ್‌ ಸೇರಿ 8 ಜನಕ್ಕೆ ಪೊಲೀಸ್‌ ನೋಟಿಸ್‌: ಕಾನೂನು ಉಲ್ಲಂಘಿಸಿ ಜೆಟ್‌ಲಾಗ್ ಪಬ್‌ನಲ್ಲಿ ''ಕಾಟೇರ'' ಚಲನಚಿತ್ರದ ಯಶಸ್ಸಿನ ಪಾರ್ಟಿ ನಡೆಸಿದ ವಿವಾದ ಸಂಬಂಧ ನಟ ದರ್ಶನ್ ಮತ್ತು ನಾಲ್ವರು ಖ್ಯಾತ ನಟರು ಸೇರಿದಂತೆ ಕನ್ನಡ ಚಿತ್ರರಂಗದ ಎಂಟು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಸೋಮವಾರ ನೋಟಿಸ್ ನೀಡಿದ್ದಾರೆ.

ದರ್ಶನ್‌ ಅವರಲ್ಲದೆ ನಟರಾದ ಡಾಲಿ ಧನಂಜಯ್‌, ನೀನಾಸಂ ಸತೀಶ್‌, ಚಿಕ್ಕಣ್ಣ, ಅಭಿಷೇಕ್ ಅಂಬರೀಷ್‌, ಕಾಟೇರ ಚಲನಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌, ನಿರ್ದೇಶಕ ತರುಣ್ ಸುಧೀರ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ವಿವಾದಕ್ಕೆ ಸಿಲುಕಿದ್ದು, ವಾರದೊಳಗೆ ವಿಚಾರಣೆಗೆ ಬಂದು ಹೇಳಿಕೆ ನೀಡುವಂತೆ ಅವರಿಗೆ ಪೊಲೀಸರು ಸೂಚಿಸಿದ್ದಾರೆ.

ಏನಿದು ವಿವಾದ: ಇತ್ತೀಚೆಗೆ ತಾವು ನಟಿಸಿದ ಕಾಟೇರ ಸಿನಿಮಾ ಯಶಸ್ಸು ಕಂಡ ಹಿನ್ನಲೆಯಲ್ಲಿ ಜ.3ರಂದು ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ ಮಾಲಿಕತ್ವದ ಜೆಟ್‌ಲಾಗ್ ರೆಸ್ಟೋ ಬಾರ್ ಪಬ್‌ನಲ್ಲಿ ನಟ ದರ್ಶನ್‌ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ಚಲನಚಿತ್ರರಂಗದ ಹಲವು ಖ್ಯಾತ ಕಲಾವಿದರು ಆಗಮಿಸಿದ್ದರು.

ದರ್ಶನ್‌ರನ್ನ ಡೆವಿಲ್ ಮಾಡಿದ ಮಿಲನ ಪ್ರಕಾಶ್: ತಾರಕ್ ಡೈರೆಕ್ಟರ್ ಜೊತೆ 'ಡೆವಿಲ್ ದಿ ಹೀರೋ' ಆದ ಕಾಟೇರ!

ನಗರದಲ್ಲಿ ಪಬ್‌ ಹಾಗೂ ಹೋಟೆಲ್‌ಗಳಿಗೆ ರಾತ್ರಿ 1 ಗಂಟೆವೆರೆಗೆ ವಹಿವಾಟು ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಅಂದು ಜೆಟ್‌ಲಾಗ್ ಪಬ್‌ ಅವಧಿ ಮೀರಿ ಬೆಳಗಿನ ಜಾವ 3.15ರವರೆಗೆ ವಹಿವಾಟು ನಡೆಸಿತ್ತು. ಈ ಸಂಬಂಧ ಪಬ್‌ ಮಾಲಕಿ ಶಶಿರೇಖಾ ಹಾಗೂ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ತಡರಾತ್ರಿವರೆಗೆ ಪಾರ್ಟಿಯಲ್ಲಿದ್ದ ಕಾರಣಕ್ಕೆ ನಟರಾದ ದರ್ಶನ್‌, ಧನಂಜಯ್‌ ಹಾಗೂ ನೀನಾಸಂ ಸತೀಶ್ ಸೇರಿದಂತೆ ಎಂಟು ಮಂದಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.